ಕನ್ನಡದ ಕಾಂತಾರ ಚಿತ್ರ ಗೆದ್ದಿದ್ದಕ್ಕೆ ಚೆನ್ನೈ ನಲ್ಲಿ ಕೇಕ್ ಕಟ್ ಮಾಡಿ ಸಂಭ್ರಮಿಸಿದ ತಮಿಳು ಸ್ಟಾರ್ ನಟ

ಕನ್ನಡದ ಕಾಂತಾರ ಸಿನಿಮಾ ಸದ್ಯಕ್ಕೆ ಕರ್ನಾಟಕ ಮಾತ್ರ ಅಲ್ಲದೆ ದೇಶಾದ್ಯಂತ ಭಾರಿ ಸದ್ದು ಮಾಡುತ್ತಿದೆ. ರಿಷಬ್ ಶೆಟ್ಟಿ ಕಲ್ಪನೆಯಲ್ಲಿ ಕರಾವಳಿ ಭಾಗದ ಸಂಸ್ಕೃತಿ ಅಲ್ಲಿನ ನೆಲ ಜನ ಜೀವನ ಬದುಕನ್ನ ಅಚ್ಚುಕಟ್ಟಾಗಿ ತೆರೆಯ ಮೇಲೆ ಕಟ್ಟಿಕೊಟ್ಟಿರುವ ರೀತಿಗೆ ಸಿನಿ ಪ್ರೇಕ್ಫಕರು ಅಪಾರ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅದರ ಜೊತೆಗೆ ರಿಶಬ್ ಶೆಟ್ಟಿ ದೈವದ ಪಾತ್ರಕ್ಕೆ ತಮ್ಮನ್ನ ತಾವು ತೊಡಗಿಸಿಕೊಂಡು ಜೀವಿಸಿರೋ ದನ್ನ ಪ್ರೇಕ್ಷಕ ಮಾತ್ರ ಅಲ್ಲದೆ ದಕ್ಷಿಣ ಭಾರತದ ಬಹುತೇಕ ನಟ ನಟಿಯರು, ನಿರ್ದೇಶಕರು, ವಿಮರ್ಶಕರು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. ಸೆಪ್ಟೆಂಬರ್ 30ರಂದು ಕನ್ನಡ ಭಾಷೆಯಲ್ಲಿ ರಾಜ್ಯಾದ್ಯಂತ ರಿಲೀಸ್ ಆದ ಕಾಂತಾರ ಸಿನಿಮಾ ಕನ್ನಡ ಸಿನಿ ಪ್ರೇಕ್ಷಕರ ಮನ ಗೆದ್ದಿದೆ.

ಇದೀಗ ಕಾಂತಾರ ಸಿನಿಮಾ ನೋಡಿದ ನಂತರ ಪರಭಾಷೆಯವರು ಕೂಡ ತಮ್ಮ ತಮ್ಮ ಭಾಷೆಗೆ ಡಬ್ಬಿಂಗ್ ಮಾಡಿ ಎಂದು ಉತ್ಸಾಹದಿಂದ ಅಪೇಕ್ಷ ಪಟ್ಟ ಕಾರಣ ಕಾಂತಾರ ಸಿನಿಮಾ ನಿರ್ಮಾಣ ಸಂಸ್ಥೆ ಆಗಿರೋ ಹೊಂಬಾಳೆ ಫಿಲಂಸ್ ನವರು ತೆಲುಗು, ತಮಿಳು ಸೇರಿದಂತೆ ಪ್ಯಾನ್ ಇಂಡಿಯಾ ಸಿನಿಮಾವಾಗಿ ಮಾಡಲು ಹೊರಟಿದ್ದಾರೆ. ಕಾಂತಾರ ಸಿನಿಮಾದಲ್ಲಿ ಪ್ಲಸ್ ಪಾಯಿಂಟ್ ಅಂದರೆ ಅಜನೀಶ್ ಲೋಕನಾಥ್ ಅವರ ಸಂಗೀತ ನಿರ್ದೇಶನ, ಅರವಿಂದ್ ಕಶ್ಯಪ್ ಅವರ ಛಾಯಾಗ್ರಹಣ. ಇವರಿಬ್ಫರ ಜೊತೆಗೆ ರಿಷಬ್ ಶೆಟ್ಟಿ ನಟನೆ ಇವೆಲ್ಲವೂ ಸೇರಿದಂತೆ ಕಾಂತಾರ ಸಿನಿಮಾದಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿರುವ ಅಚ್ಯುತ್ ಕುಮಾರ್.

ಪ್ರಮೋದ್ ಶೆಟ್ಟಿ, ನಟಿ ಸಪ್ತಮಿಗೌಡ, ಕಿಶೋರ್ ಅವರು ತಮ್ಮ ಪಾತ್ರಗಳಿಗೆ ಜೀವ ತುಂಬಿ ನಟಿಸಿರೋದು ಕಾಂತಾರ ಸಿನಿಮಾ ಅದ್ಭುತವಾಗಿ ಮೂಡಿ ಬಂದಿದೆ. ಇನ್ನು ಇದೀಗ ಕಾಂತಾರ ಸಿನಿಮಾ ನೋಡಿ ಸಖತ್ ಖುಷಿ ಆಗಿರೋ ತಮಿಳಿನ ಸೂಪರ್ ಸ್ಟಾರ್ ನಟ ‘ಸಿಂಬು’ ಅವರು ಅದರ ಸಂಭ್ರಮವನ್ನ ಕೇಕ್ ಕಟ್ ಮಾಡಿ ಆಚರಿಸಿದ್ದಾರೆ. ಅಭೂತಪೂರ್ವ ಯಶಸ್ಸು ಗಳಿಸಿರೋ ಕಾಂತಾರ ಸಿನಿಮಾಗೆ ಕಂಗ್ರಾಟ್ಸ್ ಎಂದು ಕೇಕ್ ನಲ್ಲಿ ಬರೆದಿದ್ದಾರೆ. ಕಾಂತಾರ ಸಿನಿಮಾ ಯಶಸ್ಸನ್ನ ಸಂಭ್ರಮಿಸಿ ನಟ ಸಿಂಬು ಅವರು ಕೇಕ್ ಕಟ್ ಮಾಡಿರೋ ಫೋಟೋವನ್ನ ಹೊಂಬಾಳೆ ಫಿಲಂಸ್ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡು ಸಿಂಬು ಅವರಿಗೆ ಧನ್ಯವಾದಗಳನ್ನ ತಿಳಿಸಿದ್ದಾರೆ.

Leave a Reply

%d bloggers like this: