ಕನ್ನಡದ ಜನಪ್ರಿಯ ಧಾರಾವಾಹಿಯಿಂದ ಹೊರನಡೆದ ನಾಯಕ ನಟಿ, ಬದಲಿಗೆ ಇನ್ನೊಬ್ಬ ನಟಿಯ ಆಗಮನ

ಕನ್ನಡ ಕಿರುತೆರೆಯ ಪ್ರಸಿದ್ದ ವಾಹಿನಿ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಇತ್ತೀಚೆಗೆ ಕೆಲವು ತಿಂಗಳ ಹಿಂದೆಯಷ್ಟೇ ಆರಂಭವಾದ ಅರ್ಧಾಂಗಿ ಧಾರಾವಾಹಿ ಈಗಾಗಲೇ ಕನ್ನಡ ನಾಡಿನ ಮನೆ ಮನಗಳಲ್ಲಿ ಹೆಸರಾಗಿದೆ. ಈ ಅರ್ಧಾಂಗಿ ಧಾರಾವಾಹಿಯಲ್ಲಿ ಇದೀಗ ಮಹತ್ತರವಾದ ಬದಲಾವಣೆ ಆಗಿದೆ. ಹೌದು ಕನ್ನಡ ಕಿರುತೆರೆಯಿಂದ ಮಲೆಯಾಳಂ ಕಿರುತೆರೆಗೆ ಪಾದಾರ್ಪಣೆ ಮಾಡಿದ ನಟಿ ವಿದ್ಯಾಶ್ರೀ ಜಯರಾಮ್ ಇದೀಗ ಮತ್ತೆ ಕನ್ನಡ ಕಿರುತೆರೆಗೆ ಎಂಟ್ರಿ ಆಗಿದ್ದಾರೆ. ಹೌದು ಈ ಹಿಂದೆ ನಟಿ ವಿಧ್ಯಾಶ್ರೀ ಜಯರಾಮ್ ಅವರು ಕಾವ್ಯಾಂಜಲಿ ಧಾರಾವಾಹಿಯಲ್ಲಿ ಕಾವ್ಯ ಎಂಬ ಪಾತ್ರದಲ್ಲಿ ನಟಿಸಿ ಕನ್ನಡ ಕಿರುತೆರೆ ವೀಕ್ಷಕರ ಮನ ಗೆದ್ದಿದ್ದರು. ಅದೇ ರೀತಿ ವರಲಕ್ಷ್ಮಿ ಸ್ಟೋರ್ಸ್ ಧಾರಾವಾಹಿಯಲ್ಲಿ ರಮ್ಯಾ ಎಂಬ ಪಾತ್ರದಲ್ಲಿ ಕೂಡ ನಟಿಸಿ ಜನ ಮನ ಗೆದ್ದಿದ್ದರು.

ಈ ಧಾರಾವಾಹಿಗಳ ಮೂಲಕ ಗುರುತಿಸಿಕೊಂಡ ನಟಿ ವಿಧ್ಯಾ ಶ್ರೀ ಜಯರಾಮ್ ಅವರು ಇದೀಗ ಅರ್ಧಾಂಗಿ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುವ ಮೂಲಕ ಕನ್ನಡ ಕಿರುತೆರೆಗೆ ರೀ ಎಂಟ್ರಿ ಕೊಟ್ಟಿದ್ದಾರೆ. ಅರ್ಧಾಂಗಿ ಧಾರಾವಾಹಿಯಲ್ಲಿ ಕಥಾ ನಾಯಕಿಯಾಗಿ ನಟಿಸುತ್ತಿದ್ದ ನಟಿ ಅಂಜನಾ ಅವರು ಕೆಲವು ಕಾರಣಾಂತರಗಳಿಂದ ಅರ್ಧಾಂಗಿ ಧಾರಾವಾಹಿಯಿಂದ ಹೊರ ನಡೆದಿದ್ದಾರೆ. ಇದೀಗ ಅವರ ಜಾಗಕ್ಕೆ ನಟಿ ವಿಧ್ಯಾಶ್ರೀ ಜಯರಾಮ್ ಅವರು ಸೇರ್ಪಡೆಯಾಗಿದ್ದಾರೆ. ಇನ್ನು ಈ ಅರ್ಧಾಂಗಿ ಧಾರಾವಾಹಿಯು ಕಳೆದ ಮೇ ತಿಂಗಳ 23ರಿಂದ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಸೋಮವಾರದಿಂದ ಶನಿವಾರದವರೆಗೆ ಸಂಜೆ 7ಕ್ಕೆ ಪ್ರಸಾರವಾಗುತ್ತಿದೆ. ಅರ್ಧಾಂಗಿ ಧಾರಾವಾಹಿಯು ಬಾಲ್ಯದಲ್ಲಿಯೇ ತಾಯಿಯನ್ನ ಕಳೆದುಕೊಂಡು ಮಲತಾಯಿ ಆಶ್ರಯದಲ್ಲಿ ಬೆಳೆಯುವ ಅದಿತಿ ಕಾರಣಾಂತರಗಳಿಂದ ಬೌದ್ದಿಕ ಮಟ್ಟ ಕುಂದಿರುವ ದಿಗಂತ್ ಎಂಬ ಹುಡುಗನ್ನ ಮದುವೆಯಾಗಿ ತ್ಯಾಗ ಮಾಡುತ್ತಾಳೆ.

ಅದಿತಿ ಬದುಕಲ್ಲಿ ಮುಂದೆ ಏನಾಗುತ್ತದೆ ಎಂಬ ಕಥಾ ಹಂದರ ಈ ಅರ್ಧಾಂಗಿ ಧಾರಾವಾಹಿಯಲ್ಲಿ ಅಡಗಿದೆ. ನಟಿ ಪ್ರಿಯಾಂಕಾ ಉಪೇಂದ್ರ ಅವರು ಈ ಅರ್ಧಾಂಗಿ ಧಾರಾವಾಹಿಯ ಪ್ರಚಾರಕಿಯಾಗಿದ್ದಾರೆ. ಶ್ರೀ ನಾಥ್ ರಘುರಾಮ್ ಅವರು ಈ ಅರ್ಧಾಂಗಿ ಧಾರಾವಾಹಿಯನ್ನ ನಿರ್ಮಾಣ ಮಾಡಿದ್ದು, ನಿರ್ದೇಶಕ ಎಂ.ಕುಮಾರ್ ಅವರು ನಿರ್ದೇಶನ ಮಾಡಿದ್ದಾರೆ. ಒಟ್ಟಾರೆಯಾಗಿ ಅರ್ಧಾಂಗಿ ಧಾರಾವಾಹಿಯು ಆರಂಭವಾದ ಎರಡು ತಿಂಗಳಿನಿಂದ ಕನ್ನಡ ಕಿರುತೆರೆ ವೀಕ್ಷಕರಿಗೆ ಉತ್ತಮವಾಗಿ ಮನ ರಂಜನೆ ನೀಡುತ್ತಿದೆ. ಇನ್ನು ಈ ಅರ್ಧಾಂಗಿ ಧಾರಾವಾಹಿಗೆ ವಿದ್ಯಾಶ್ರೀ ಜಯರಾಮ್ ಅವರು ಎಂಟ್ರಿ ಆಗಿರುವುದರಿಂದ ಅವರ ಅಭಿಮಾನಿಗಳು ಕೂಡ ಸಖತ್ ಖುಷಿಯಾಗಿದ್ದಾರೆ.

Leave a Reply

%d bloggers like this: