ಕನ್ನಡದ ಹೆಸರಾಂತ ಧಾರಾವಾಹಿಗೆ ಇಬ್ಬರು ಹೊಸ ನಟ ನಟಿಯರ ಆಗಮನ

ಕನ್ನಡ ಕಿರುತೆರೆಯಲ್ಲಿ ಅತಿ ಹೆಚ್ಚು ಜನಪ್ರಿಯ ವಾಹಿನಿಯಾಗಿರುವ ಕಲರ್ಸ್ ಕನ್ನಡದಲ್ಲಿ ಹೊಸ ಹೊಸ ರಿಯಾಲಿಟಿ ಶೋಗಳು ಮತ್ತು ಧಾರಾವಾಹಿಗಳ ಅಬ್ಬರ ಜೋರಾಗಿಯೇ ಇರುತ್ತದೆ. ಅದರಂತೆ ಇತ್ತೀಚೆಗೆ ಕೆಲವು ದಿನಗಳ ಹಿಂದೆಯಷ್ಟೇ ಆರಂಭವಾದ ನಟಿ, ನಿರ್ಮಾಪಕಿ ಕಮ್ ನಿರ್ದೇಶಕಿ ಶೃತಿ ನಾಯ್ಡು ಅವರ ಹೊಸ ಧಾರಾವಾಹಿ ಒಲವಿನ ನಿಲ್ದಾಣದಲ್ಲಿ ಮತ್ತಿಬ್ಬರು ಜನಪ್ರಿಯ ಕಲಾವಿದರು ಸೇರ್ಪಡೆಗೊಂಡಿದ್ದಾರೆ. ಈಗಾಗಲೇ ಒಲವಿನ ನಿಲ್ದಾಣ ಧಾರಾವಾಹಿಯಲ್ಲಿ ಕನ್ನಡದ ಖ್ಯಾತ ಹಿರಿಯ ನಟಿ ವಿನಯಾ ಪ್ರಸಾದ್ ಅವರ ಪುತ್ರಿ ಪ್ರತಿಮಾ ಸೇರಿದಂತೆ ಕಥಾ ನಾಯಕಿಯಾಗಿ ನಟಿ ಅಮಿತಾ ಸದಾಶಿವ ಅವರು ನಟಿಸಿದ್ದಾರೆ. ಕಥಾ ನಾಯಕನಾಗಿ ಅಕ್ಷಯ್ ನಾಯಕ ನಟಿಸಿದರೆ, ಪ್ರಮುಖ ಪಾತ್ರವೊಂದರಲ್ಲಿ ಹಿರಿಯ ನಟರಾದ ಮಂಡ್ಯ ರಮೆಶ್ ಕಾಣಿಸಿಕೊಳ್ಳುತ್ತಿದ್ದಾರೆ.

ಇದೀಗ ಜೀ಼ ಕನ್ನಡದಲ್ಲಿ ಅತ್ಯಂತ ಜನಪ್ರಿಯ ಧಾರಾವಾಹಿಯಾಗಿ ಕಿರುತೆರೆ ಪ್ರೇಕ್ಷಕರ ಮನದಲ್ಲಿ ಉತ್ತುಂಗ ಸ್ಥಾನದಲ್ಲಿ ಇರುವ ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಮಾನ್ಸಿ ಪಾತ್ರವನ್ನು ಉತ್ತಮವಾಗಿ ನಿಭಾಯಿಸಿ ಕನ್ನಡ ಕಿರುತೆರೆ ವೀಕ್ಷಕರ ಮನ ಗೆದ್ದಿದ್ದ ನಟಿ ಶಿಲ್ಪಾ ಅಯ್ಯರ್ ಇದೀಗ ಒಲವಿನ ನಿಲ್ದಾಣದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹೌದು ನಟಿ ಶಿಲ್ಪ ಅಯ್ಯರ್ ಅವರು ಒಲವಿನ ನಿಲ್ದಾಣದ ಕಥಾ ನಾಯಕ ಅಕ್ಷಯ್ ನಾಯಕ್ ಅವರ ಅತ್ತಿಗೆ ಪಾತ್ರದಲ್ಲಿ ನಟಿಸುತ್ತಿದ್ದಾರೆ. ನಟಿ ಶಿಲ್ಪಾ ಅಯ್ಯರ್ ಅವರಿಗೆ ಜೋಡಿಯಾಗಿ ಹೂಮಳೆ ಖ್ಯಾತಿಯ ನಟ ಶ್ರೀ ರಾಮ ಅವರು ಅಭಿನಯಿಸುತ್ತಿದ್ದಾರೆ. ಮದುವೆಯ ಬಗ್ಗೆ ನಂಬಿಕೆಯೇ ಇಲ್ಲದವ ಕೆಲವು ಕಾರಣಾಂತರಗಳ ಪರಿಸ್ದಿತಿಗೆ ಮಣಿದು ಅನಿವಾರ್ಯವಾಗಿ ತಾರಿಣಿ ಜೊತೆ ಎಂಗೇಜ್ ಮೆಂಟ್ ಮಾಡಿಕೊಂಡಿದ್ದಾನೆ.

ತಾರಿಣಿಗೆ ತನ್ನ ಕನಸಿನ ರಾಜಕುಮಾರ ಸಿದ್ದಾಂತ ಎಂಬುದು ಅರಿವಾಗಿದೆ. ಆದರೆ ದಾಂಪತ್ಯದ ಹೆಬ್ಬಾಗಿಲಿನ ಕದ ತಟ್ಟುತ್ತಿರುವ ಸಿದ್ದಾಂತ ತನ್ನ ಬಾಳ ಸಂಗಾತಿಯಾಗಿ ಬರುವ ತಾರಿಣಿ ಯಾರೆಂಬುದು ಕೂಡ ಅರಿವಿಲ್ಲದಂತಹ ಭಾವದಲ್ಲಿ ನೋಡುತ್ತಿದ್ದಾನೆ‌. ಹೊಸ ಬಾಳಿಗೆ ಹೆಜ್ಜೆ ಇಡುತ್ತಿರುವ ತಾರಿಣಿ ಸಿದ್ದಾಂತನನ್ನ ಹೇಗೆ ತನ್ನತ್ತ ಒಲಿಸಿಕೊಳ್ಳಲಿದ್ದಾಳೆ ಎಂಬುದು ಒಲವಿನ ನಿಲ್ದಾಣ ಧಾರಾವಾಹಿಯ ಕಥಾಹಂದರವಾಗಿದೆ. ಈಗಾಗಲೇ ಒಂದು ಒಲವಿನ ನಿಲ್ದಾಣ ಧಾರಾವಾಹಿಯು ಕಲರ್ ಫುಲ್ ಆಗಿ ಮೂಡಿ ಬರುತ್ತಿದ್ದು, ಮೊದಲ ವಾರದಲ್ಲಿಯೇ ಈ ಕಲರ್ ಫುಲ್ ಲವ್ ಸ್ಟೋರಿ ಆಗಿರುವ ಒಲವಿನ ನಿಲ್ಧಾಣ ಧಾರಾವಾಹಿಯು ಕನ್ನಡ ಕಿರುತೆರೆ ವೀಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.

Leave a Reply

%d bloggers like this: