ಕನ್ನಡದ ಬ್ಲಾಕ್ ಬಾಸ್ಟರ್ ಸಿನಿಮಾ ‘ಉಗ್ರಂ’ ಇದೀಗ ಮತ್ತೊಂದು ಭಾಷೆಗೆ ರಿಮೇಕ್

ಉಗ್ರಂ ಈ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಹೊಸ ಸಂಚಲನ ಸೃಷ್ಟಿ ಮಾಡಿದ ಸಿನಿಮಾ. ಅದಲ್ಲದೆ ಕನ್ನಡಕ್ಕೆ ಒಬ್ಬ ಮಾಸ್ ನಿರ್ದೇಶಕ ಎಂಟ್ರಿ ಕೊಟ್ಟ ಸಮಯ ಅದು. 2014ರಲ್ಲಿ ತೆರೆಕಂಡ ಈ ಉಗ್ರಂ ಸಿನಿಮಾ ಕನ್ನಡ ಸಿನಿ ಪ್ರೇಕ್ಷಕರಿಗೆ ವಿಭಿನ್ನ ಅನುಭವ ನೀಡಿ ಮನರಂಜನೆ ನೀಡಿತ್ತು. ಸರಣಿ ಸೋಲುಗಳಿಂದ ಸಿನಿಮಾ ರಂಗದಿಂದಾನೇ ದೂರ ಉಳಿದಿದ್ದ ನಟ ಶ್ರೀ ಮುರುಳಿ ಅವರಿಗೆ ಉಗ್ರಂ ಸಿನಿಮಾ ಚಿತ್ರರಂಗದಲ್ಲಿ ಮತ್ತೆ ನೆಲೆಯೂರಲು ಒಂದು ಅತ್ಯುತ್ತಮ ಅವಕಾಶ ನೀಡಿತ್ತು. ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಮೂಡಿ ಬಂದ ಉಗ್ರಂ ಸಿನಿಮಾ ಆರಂಭದಲ್ಲಿ ಪ್ರೇಕ್ಷಕರನ್ನ ಥಿಯೇಟರ್ಗೆ ಕರೆ ತರುವಲ್ಲಿ ಕೊಂಚ ಹರ ಸಾಹಸ ಪಡಬೇಕಾಯಿತು.

ಆದರೆ ಯಾವಾಗ ಪ್ರೇಕ್ಷಕ ಒಮ್ಮೆ ಥಿಯೇಟರ್ಗೆ ಬಂದು ಉಗ್ರಂ ಸಿನಿಮಾ ನೋಡಿದನೋ ಅವನೇ ಸ್ವತಃ ಇನ್ನೊಂದಷ್ಟು ಮಂದಿಗೆ ಸಿನಿಮಾದ ಮೇಕಿಂಗ್ ಮತ್ತು ಸಿನಿಮಾದಲ್ಲಿ ಆ ಮಾಸ್ ಎಲಿಮೆಂಟ್ಸ್ ಬಗ್ಗೆ ಹೇಳಿದಾಗ ಸಿನಿಮಾ ಮಂದಿರಗಳಿಗೆ ಪ್ರೇಕ್ಷಕರು ಕಿಕ್ಕಿರಿದು ಬರಲು ಆರಂಭ ಮಾಡಿದರು. ಹೀಗೆ ಮೌತ್ ಪಬ್ಲಿಸಿಟಿ ಮೂಲಕ ಪ್ರಚಾರ ಪಡೆದುಕೊಂಡು ಉಗ್ರಂ ಸಿನಿಮಾ ಸೂಪರ್ ಹಿಟ್ ಆಯಿತು. ಅದರ ಜೊತೆಗೆ ಬಾಕ್ಸ್ ಆಫೀಸ್ ನಲ್ಲಿಯೂ ಕೂಡ ಕೊಂಚ ಭರ್ಜರಿ ಕಲೆಕ್ಷನ್ ಮಾಡಿತು. ಈ ಉಗ್ರಂ ಚಿತ್ರ ನೋಡಿದ ಪರಭಾಷಿಕರು ಕೂಡ ಈ ಚಿತ್ರವನ್ನು ಮೆಚ್ಚಿ ಹಾಡಿ ಹೊಗಳಿದರು. ಇದೀಗ ಉಗ್ರಂ ಸಿನಿಮಾ ರೀಲಿಸ್ ಆಗಿ ಬರೋಬ್ಬರಿ ಎಂಟು ವರ್ಷಗಳು ಪೂರೈಸಿದೆ. ಸದ್ಯಕ್ಕೆ ಕೇಳಿ ಬರುತ್ತಿರುವ ಸುದ್ದಿ ಏನಪ್ಪಾ ಅಂದರೆ ಟಾಲಿವುಡ್ ಸ್ಟಾರ್ ನಟ ಪ್ರಭಾಸ್ ಅವರಿಗೆ ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಿರುವ ಸಲಾರ್ ಸಿನಿಮಾ ಕೂಡ ಇದೇ ಉಗ್ರಂ ಸಿನಿಮಾದ ರೀಮೇಕ್ ಎನ್ನಲಾಗುತ್ತಿದೆ.

ಆದರೆ ಇದಕ್ಕೆ ಯಾವುದೇ ರೀತಿ ಸ್ಪಷ್ಟನೆ ಚಿತ್ರತಂಡದಿಂದ ಸಿಕ್ಕಿಲ್ಲ. ಇದೀಗ ಹೊಸ ಸುದ್ದಿಯಾಗಿ ಉಗ್ರಂ ಸಿನಿಮಾ ಮರಾಠಿ ಭಾಷೆಗೆ ರೀಮೇಕ್ ಆಗುತ್ತಿದೆಯಂತೆ. ಉಗ್ರಂ ಚಿತ್ರವನ್ನು ಮರಾಠಿಯಲ್ಲಿ ಸುಮಿತ್ ಕಕ್ಕಡ್ ಎಂಬುವವರು ಆಕ್ಷನ್ ಕಟ್ ಹೇಳುತ್ತಿದ್ದಾರೆ. ಮರಾಠಿ ಭಾಷೆಯಲ್ಲಿ ರಾಂತಿ ಎಂಬ ಟೈಟಲ್ ಮೂಲಕ ಉಗ್ರಂ ಸಿನಿಮಾ ಅಬ್ಬರಿಸಲಿದೆಯಂತೆ. ಮತ್ತೊಂದು ವಿಶೇಷ ಅಂದರೆ ಕನ್ನಡ ಉಗ್ರಂ ಸಿನಿಮಾದಲ್ಲಿ ನಾಯಕಿಯಾಗಿ ಹರಿ ಪ್ರಿಯಾ ನಟಿಸಿದ್ದರು. ಹರಿಪ್ರಿಯಾ ನಿರ್ವಹಿಸಿದ ಪಾತ್ರವನ್ನ ಮರಾಠಿಯಲ್ಲಿ ನಟಿ ಶಾನ್ವಿ ಶ್ರೀವಾತ್ಸವ್ ಅವರು ಮಾಡಲಿದ್ದಾರೆ ಎಂದು ತಿಳಿದು ಬಂದಿದೆ. ಉಗ್ರಂ ಅವತಾರದಲ್ಲಿ ನಟ ಶರಣ್ ಖೇಳ್ಕರ್ ಕಾಣಿಸಿಕೊಳ್ಳಲಿದ್ದು, ಶಾನ್ವಿ ಶ್ರೀವಾತ್ಸವ್ ಅವರು ಜೋಡಿಯಾಗಿ ನಟಿಸಲಿದ್ಧಾರೆ. ಒಟ್ಟಾರೆಯಾಗಿ ಕನ್ನಡದಲ್ಲಿ ಉಗ್ರಂ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿತ್ತು. ಇದೇ ರೀತಿ ಮರಾಠಿಯಲ್ಲಿಯೂ ಕೂಡ ಈ ಚಿತ್ರ ಭರ್ಜರಿ ಯಶಸ್ಸು ಕಾಣಲಿದ್ಯ ಅನ್ನೋದನ್ನ ಕಾದು ನೋಡಬೇಕಾಗಿದೆ.

Leave a Reply

%d bloggers like this: