ಕನ್ನಡದ ಬಿಗ್ ಬಾಸ್ ಮನೆಗೆ ಕಾಲಿಟ್ಟ ಈ ರೇಸರ್ ಹುಡುಗಿ ಯಾರು ಹಾಗೂ ಎಂತಹ ಅದ್ಭುತ ಪ್ರತಿಭೆ ಗೊತ್ತೇ

ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್9 ನಿನ್ನೆ ತಾನೇ ಅಂದ್ರೆ ಸೆಪ್ಟೆಂಬರ್ 24 ಶನಿವಾರ ಸಂಜೆ ಗ್ರ್ಯಾಂಡ್ ಓಪನಿಂಗ್ ಪಡೆದುಕೊಂಡಿದೆ. ಈಗಾಗಲೇ ನಿಮಗೆ ಬಿಗ್ ಬಾಸ್ ಮನೆಯೊಳಗೆ ಯಾರ್ಯಾರ್ ಹೋಗಿದ್ದಾರೆ ಅನ್ನೋದು ಗೊತ್ತಾಗಿದೆ. ಬಿಗ್ ಬಾಸ್ ಶೋ ಮತ್ತೆ ಆರಂಭ ಆಗುತ್ತೆ ಅಂತ ಸುದ್ದಿ ಆದಾಗಿನಿಂದ ಈ ಬಾರಿಯ ಸೀಸನ್ ನಲ್ಲಿ ಯಾರ್ಯಾರ್ ಇರಲಿದ್ದಾರೆ ಅನ್ನೋ ಕುತೂಹಲ ಇತ್ತು. ಆದರೆ ಇದೀಗ ಆ ಕುತೂಹಲಕ್ಕೆ ತೆರೆ ಬಿದ್ದಿದೆ. ಎಲ್ಲಾ ಸೀಸನ್ ಗಳಲ್ಲಿಯೂ ಮನರಂಜನೆ ಕ್ಷೇತ್ರ ಬಿಟ್ಟು ಇನ್ನಿತರೆ ಕ್ಷೇತ್ರಗಳಲ್ಲಿ ಸಾಧನೆಗೈದ ಅಷ್ಟಾಗಿ ಜನರಿಗೆ ಪರಿಚಯ ಇಲ್ಲದ ವ್ಯಕ್ತಿಗಳು ಕೂಡ ಈ ಬಾರಿಯ 9ನೇ ಆವೃತ್ತಿಯ ಬಿಗ್ ಬಾಸ್ ನಲ್ಲಿ ಬಂದಿದ್ದಾರೆ. ಅವರ ಪೈಕಿ ಮಹಿಳಾ ಬೈಕ್ ರೇಸರ್ ಐಶ್ವರ್ಯ ಪಿಸೆ ಕೂಡ ಒಬ್ಬರು.

ಇವರ ಬಗ್ಗೆ ಅಷ್ಟಾಗಿ ಬಹುತೇಕರಿಗೆ ತಿಳಿದಿಲ್ಲ. ದೊಡ್ಮನೆಗೆ ಕಾಲಿಟ್ಟ ತಕ್ಷಣ ಐಶ್ವರ್ಯ ಅವರನ್ನ ಗುರುತಿಸಿದ್ದು, ದಿವ್ಯಾ ಉರುಡುಗ ಮಾತ್ರ. ಯಾಕಂದ್ರೆ ಕಳೆದ ಸೀಸನ್ ನಲ್ಲಿ ಬೈಕ್ ರೈಸರ್ ಅರವಿಂದ್ ಕೆಪಿ ಅವರು ಕೂಡ ಭಾಗವಸಿದ್ರು. ಆಗ ದಿವ್ಯಾ ಉರುಡುಗ ಅವರಿಗೆ ಅರವಿಂದ್ ಅವರೊಟ್ಟಿಗೆ ಉತ್ತಮ ಸ್ನೇಹ ಸಂಬಂಧ ಏರ್ಪಟ್ಟು, ದೊಡ್ಮನೆಯಿಂದ ಹೊರ ಬಂದ ಬಳಿಕವೂ ಕೂಡ ಇವರಿಬ್ಬರ ಸ್ನೇಹ ಮುಂದುವರಿದಿತ್ತು. ಅದರಂತೆ ಅರವಿಂದ್ ಕೆಪಿ ಅವರು ತಮ್ಮಕ್ಷೇತ್ರದಲ್ಲಿ ಹೆಸರಃ ವಾಸಿ ಆಗಿರೋ ಐಶ್ವರ್ಯ ಪಿಸೆ ಅವರನ್ನ ದಿವ್ಯಾ ಅವರಿಗೆ ಪರಿಚಯ ಮಾಡಿಕೊಟ್ಪಿದ್ದರಂತೆ. ಇದನ್ನ ಸ್ವತಃ ದಿವ್ಯಾ ಅವರೇ ಬಿಗ್ ಬಾಸ್ ಮನೆಯೊಳಗೆ ಹೇಳಿದ್ದಾರೆ.

ಹಾಗಾಗಿ ಐಶ್ವರ್ಯ ಪಿಸೆ ಅವರ ಬಗ್ಗೆ ಮನೆಯ ಇತರೆ ಸದಸ್ಯರಿಗೆ ಅಷ್ಟಾಗಿ ಗೊತ್ತಿರೋದಿಲ್ಲ. ಇನ್ನು ಅವರ ಬಗ್ಗೆ ಅಂದರೆ ಐಶ್ವರ್ಯ ಪಿಸೆ ಅವರ ಬಗ್ಗೆ ಹೇಳೋದಾದ್ರೆ ಐಶ್ವರ್ಯ ಅವರು ಮಹಿಳಾ ಬೈಕ್ ರೇಸಿಂಗ್ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದ್ದಾರೆ. 27 ವರ್ಷದ ಐಶ್ವರ್ಯ ಪಿಸೆ ಅವರು ದಕ್ಷಿಣ್ ಡೇರ್ ರ್ಯಾಲಿ ಮತ್ತು ನ್ಯಾಷನಲ್ ರೋಡ್ ರೇಸ್ ನಲ್ಲಿ ಮಿಂಚಿದ್ದಾರೆ. ಆರೇಳು ವರ್ಷಗಳ ಹಿಂದೆ ಕೊಯಮತ್ತೂರಿನಲ್ಲಿ ನಡೆದ ರಾಷ್ಟ್ರೀಯ ಮೋಟಾರ್ ಸೈಕಲ್ ರೋಡ್ ರೇಸ್ ಚಾಂಪಿಯನ್ ಶಿಪ್ ನಲ್ಲಿ ಮಹಿಳಾ ವಿಭಾಗದಲ್ಲಿ ಪ್ರಶಸ್ತಿಯನ್ನ ಮುಡಿಗೇರಿಸಿಕೊಂಡು ಚಾಂಪಿಯನ್ ಆಗಿದ್ರು.

ಅದರ ಜೊತೆಗೆ ದಕ್ಷಿಣ್ ಡೇರ್ ರ್ಯಾಲಿ ಯಲ್ಲಿ ಆಫ್ ರೋಡ್ ರೈಡಿಂಗ್ ನಲ್ಲಿ 165ಸಿಸಿ ವಿಭಾಗದಲ್ಲಿ ಐದನೇ ಸ್ಥಾನ ಪಡೆದು ಎಲ್ಲರ ಗಮನ ಸೆಳೆದ್ರು. ಬೆಂಗಳೂರಿನ ಬೆಡಗಿ ಆಗಿರೋ ಐಶ್ವರ್ಯ ಅವರು ಇದುವರೆಗೆ ಹತ್ತು ಬಾರಿ ಚಾಂಪಿಯನ್ ಆಗಿದ್ದಾರಂತೆ. ಐಶ್ವರ್ಯ ಪಿಸೆ ಅವರು ಕೇವಲ ಯಶಸ್ವಿ ಬೈಕ್ ರೇಸರ್ ಮಾತ್ರ ಅಲ್ಲದೆ ಮಾಡೆಲ್ ಕೂಡ ಹೌದು. 5.9 ಅಡಿ ಎತ್ತರ ಇರೋ ಐಶ್ವರ್ಯ ಪಿಸೆ ಅವ್ರು ಅವಕಾಶ ಸಿಕ್ಕಿದಾಗೆಲ್ಲಾ ರೂಪದರ್ಶಿಯಾಗಿಯೂ ಕೂಡ ಸಖತ್ ಆಗಿಯೇ ಮಿಂಚಿದ್ದಾರೆ. ಈಗಾಗಲೇ ಐಶ್ವರ್ಯ ಅವರು ಮೊರ್ಗಾ, ಜಾರಾ, ಮತ್ತು ಕ್ಯಾಸಪಿಕಾಸ ಎಂಬಂತಹ ಒಂದಷ್ಟು ಬ್ರ್ಯಾಂಡಗಳಿಗೆ ಮಾಡೆಲ್ ಆಗಿ ಗಮನ ಸೆಳೆದಿದ್ದು, ಈಗ ಬಿಗ್ ಬಾಸ್ ಮನೆಯೊಳಗೆ ಯಾವ ರೀತಿ ಮೋಡಿ ಮಾಡಿಲಿದ್ದಾರೆ ಅನ್ನೋದನ್ನ ಮುಂದಿನ ದಿನಗಳಲ್ಲಿ ನೋಡಬಹುದಾಗಿದೆ.

Leave a Reply

%d bloggers like this: