ಕನ್ನಡ ಚಿತ್ರರಂಗದಲ್ಲೇ ಅತ್ಯಂತ ಶ್ರೀಮಂತ ನಟಿ ಇವರೇ ನೋಡಿ! 10 ಸಾವಿರ ಕೋಟಿಗೂ ಹೆಚ್ಚು ಆಸ್ತಿ ಹೊಂದಿರುವ ನಟಿ

ಸಾಮಾನ್ಯವಾಗಿ ಸಿನಿಮಾ ಸೆಲೆಬ್ರಿಟಿಗಳು ಅಂದ ಮೇಲೆ ಆರ್ಥಿಕವಾಗಿ ಉತ್ತಮವಾಗಿಯೇ ಇರುತ್ತಾರೆ.ಕೆಲವು ಕಲಾವಿದರನ್ನ ಹೊರತು ಪಡಿಸಿ.ಅದರಲ್ಲೂ ಸ್ಟಾರ್ ನಟರೊಂದಿಗೆ ನಟಿಸಿ ಸಿನಿಮಾಗಳು ಯಶಸ್ವಿಯಾದರೆ ಅವರ ಜನಪ್ರಿಯತೆ ಅಪಾರ ಮಟ್ಟದಲ್ಲಿರುತ್ತದೆ.ಆ ಸಮಯದಲ್ಲಿ ಸಿನಿಮಾವೊಂದಕ್ಕೆ ಅವರ ಸಂಭಾವನೆ ಕೂಡ ಕೋಟಿ ಕೋಟಿ ಮೀರಿರುತ್ತದೆ.ಅವರ ಜೀವನ ಶೈಲಿ ಬದುಕು ಐಷಾರಾಮಿ ಆಗಿರುತ್ತದೆ.ಅಂತೆಯೇ ಕನ್ನಡ ಚಿತ್ರರಂಗದ ಅತ್ಯಂತ ಶ್ರೀಮಂತ ನಟಿ ಯಾರು ಎಂಬುದನ್ನ ತಿಳಿಯುವುದಾದರೆ. 80-90 ರ ದಶಕದಲ್ಲಿ ಕನ್ನಡ ಚಿತ್ರರಂಗ ಸೇರಿದಂತೆ ಪಂಚ ಭಾಷೆ ತಾರೆಯಾಗಿ ಮಿಂಚಿದ ನಟಿ ಮಾಧವಿ ತಮಿಳು,ತೆಲುಗು,ಮಲೆಯಾಳಂ,ಹಿಂದಿ ಸೇರಿದಂತೆ ಕನ್ನಡ ಚಿತ್ರಗಳಲ್ಲಿ ನಟಿಸಿ ಅಪಾರ ಜನಪ್ರಿಯತೆ ಗಳಿಸಿದ ನಟಿ ಮಾಧವಿ ಅಂದಿನ ಬೇಡಿಕೆಯ ನಟಿಯಾಗಿ ಮಿಂಚಿದ್ದಾರೆ.ಕನ್ನಡದಲ್ಲಿ ಡಾ.ರಾಜ್ ಕುಮಾರ್,ವಿಷ್ಣು ವರ್ಧನ್,ಅಂಬರೀಶ್ ಅಂತಹ ದಿಗ್ಗಜ ನಟರೊಂದಿಗೆ ನಟಿ ಮಾಧವಿ ಅಭಿನಯಿಸಿದ್ದಾರೆ. ಬಣ್ಣದ ಲೋಕದಲ್ಲಿ ನಕ್ಷತ್ರ ತಾರೆಯಾಗಿ ಯಶಸ್ಸು ಕಂಡ ಮಾಧವಿ ಉದ್ಯಮಿ ರಾಘವ ಶರ್ಮಾ ಅವರೊಟ್ಟಿಗೆ ದಾಂಪತ್ಯ ಜೀವನಕ್ಕೆ ಹೆಜ್ಜೆ ಇಟ್ಟರು.

ವೈವಾಹಿಕ ಜೀವನಕ್ಕೆ ಎಂಟ್ರಿ ಕೊಟ್ಟ ಮಾಧವಿ ತಮ್ಮ ಬಾಳ ಸಂಗಾತಿ ರಾಘವ ಶರ್ಮಾ ಅವರೊಟ್ಟಿಗೆ ಅಮೇರಿಕಾಗೆ ತೆರಳುತ್ತಾರೆ. ಬಳಿಕ ಸಿನಿಮಾ ಲೋಕದಿಂದ ದೂರ ಉಳಿದ ಮಾಧವಿ ತಮ್ಮ ಪತಿ ರಾಘವ ಶರ್ಮಾ ಅವರ ಉದ್ಯಮವನ್ನು ನೋಡಿಕೊಳ್ಳುತ್ತಾರೆ.ಇನ್ನು ಮೂವರು ಮುದ್ದು ಹೆಣ್ಣು ಮಕ್ಕಳ ತಾಯಿಯಾಗಿರುವ ಮಾಧವಿ ತಮ್ಮಂತೆಯೇ ತಮ್ಮ ಮಕ್ಕಳಿಗೂ ಕೂಡ ಭರತನಾಟ್ಯ,ನಮ್ಮ ಭಾರತೀಯ ಸಂಸ್ಕೃತಿಯ ಪರಂಪರೆಯ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ನಟಿ ಮಾಧವಿ ಅವರ ಪತಿ ರಾಘವ್ ಶರ್ಮಾ ಅವರು ಸಾವಿರಾರು ಕೋಟಿ ವಹಿವಾಟು ನಡೆಸುವ ಫಾರ್ಮಸಿಟಿಕಲ್ ಉದ್ಯಮವನ್ನು ನಡೆಸುತ್ತಾರೆ.

ಈ ಬೃಹತ್ ಉದ್ಯಮವನ್ನ ತಮ್ಮ ಪತಿಯೊಬ್ಬರೇ ನಿರ್ವಹಿಸಲು ಕಷ್ಟ ಸಾಧ್ಯವೆಂದು ಅರಿತ ಮಾಧವಿ ತಮ್ಮ ಪತಿಯ ಜೊತೆಗೆ ತಾವೂ ಕೂಡ ಉದ್ಯಮ ನಿರ್ವಹಣೆಯಲ್ಲಿ ತೊಡಗಿಕೊಳ್ಳುತ್ತಾರೆ.ಸದ್ಯಕ್ಕೆ ಈ ಫಾರ್ಮಸಿಟಿಕಲ್ ಕಂಪನಿಯ ವೈಸ್ ಪ್ರೆಸಿಡೆಂಟ್ ಆಗಿ ಕಾರ್ಯ ನಿರ್ವಹಿಸುತ್ತಿರುವ ನಟಿ ಮಾಧವಿ ಅಂತರಾಷ್ಟ್ರೀಯ ವ್ಯವಹಾರಗಳಿಗೆ ವಿಮಾನವನ್ನು ಬಳಸುತ್ತಾರೆ.ಹೀಗೆ ಐಷಾರಾಮಿ ಜೀವನ ನಡೆಸುತ್ತಿರುವ ನಟಿ ಮಾಧವಿ ಅವರು ಬರೋಬ್ಬರಿ ಹತ್ತು ಸಾವಿರ ಕೋಟಿ ಒಡತಿಯಾಗಿದ್ದಾರೆ. ಈ ನಮ್ಮ ಲೇಖನ ಇಷ್ಟವಾದರೆ ಲೈಕ್ ಮಾಡಿ ಮತ್ತು ಶೇರ್ ಮಾಡಿ. ಮತ್ತಷ್ಟು ಹೊಸ ಹೊಸ ಸುದ್ದಿಗಳಿಗಾಗಿ ನಮ್ಮ ಪೇಜ್ ನ್ನು ತಪ್ಪದೆ ಲೈಕ್ ಮಾಡಿ.

Leave a Reply

%d bloggers like this: