ಕನ್ನಡದ ಈ ಖ್ಯಾತ ನಟಿಯರು ಹಿಂದೆ ಡಾಕ್ಟರ್ ಆಗಿದ್ದರು, ಯಾರ್ಯಾರು ಅಂತ ಒಮ್ಮೆ ನೋಡಿ

ಸಿನಿಮಾ ನಟ-ನಟಿಯರು ಅಂದಾಕ್ಷಣ ಬಹುತೇಕರಿಗೆ ಅವರು ಹೆಚ್ಚು ವಿಧ್ಯಾಭ್ಯಾಸ ಮಾಡಿರುವುದಿಲ್ಲ ಎಂದೇ ಭಾವಿಸಿರುತ್ತಾರೆ.ಆದರೆ ನಮ್ಮ ಚಂದನವನದ ಸ್ಟಾರ್ಸ್ ಸೇರಿದಂತೆ ಇನ್ನಿತರ ಭಾಷೆಯ ಹಲವಾರು ಕಲಾವಿದರು ಉನ್ನತ ವ್ಯಾಸಂಗ ಮಾಡಿಯೇ ತಮ್ಮ ಅಭಿರುಚಿಗೆ ತಕ್ಕಂತೆ ವೃತ್ತಿಯನ್ನು ಆಯ್ಕೆ ಮಾಡಿಕೊಂಡಿರುತ್ತಾರೆ.ಅಂತೆಯೇ ಇಂದು ಕನ್ನಡ ಚಿತ್ರರಂಗದಲ್ಲಿ ಜನಪ್ರಿಯ ನಟಿಯರು ಕೂಡ ವೈದ್ಯೆರಾಗಿದ್ದವರು ಎಂಬುದು ಅಚ್ಚರಿ ವಿಚಾರವಾಗಿದೆ. ಕನ್ನಡದಲ್ಲಿ ಪ್ರಜ್ವಲ್ ದೇವರಾಜ್ ಅಭಿನಯದ ಮೆರವಣಿಗೆ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ಐಂದ್ರಿತಾ ರೇ ಇಂದು ಚಂದನವನದ ಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್,ಕಿಚ್ಚ ಸುದೀಪ್,ಶಿವರಾಜ್ ಕುಮಾರ್ ದಿಗಂತ್ ಸೇರಿದಂತೆ ಸ್ಟಾರ್ ನಟರೊಂದಿಗೆ ನಟಿಸಿ ಸೈ ಎನಿಸಿಕೊಂಡಿರುವ ಐಂದ್ರಿತಾ ರೇ ಬಿ.ಡಿ.ಎಸ್.(ಬ್ಯಾಚುಲರ್ ಆಫ್ ಡೆಂಟಲ್ ಸರ್ಜನ್ ) ಓದಿದ್ದು ದಂತವೈದ್ಯೆಯಾಗಿದ್ದಾರೆ.

ಕಾಲೇಜು ದಿನಗಳಿಂದಲೂ ಮಾಡ್ಲಿಂಗ್ ನಲ್ಲಿ ತೊಡಗಿಸಿಕೊಂಡಿದ್ದ ಐಂದ್ರಿತಾ ರೇ ಅವರಿಗೆ ಸಿನಿಮಾಗಳಲ್ಲಿ ಅವಕಾಶ ದೊರೆತು ಬಣ್ಣದ ಲೋಕದತ್ತ ಹೊರಳಿದರು.ನಟ ದಿಗಂತ್ ಅವರೊಟ್ಟಿಗೆ ದಾಂಪತ್ಯ ಜೀವನಕ್ಕೆ ಹೆಜ್ಜೆ ಇಟ್ಟಿದ್ದು,ಸುಂದರವಾದ ಬದುಕನ್ನು ಕಟ್ಟಿಕೊಂಡಿದ್ದಾರೆ. ಇನ್ನು ನಟಿ ಅಪೂರ್ವ ಕೂಡ ದಂತವೈದ್ಯೆ.ನಟನೆಯ ಜೊತೆ ಜೊತೆಗೆ ತಮ್ಮ ವೈದ್ಯೆಕೀಯ ವೃತ್ತಿಯನ್ನ ನಿಭಾಯಿಸಿಕೊಂಡು ಹೋಗುತ್ತಿದ್ದಾರೆ.ನಟಿ ಅಪೂರ್ವ ನಟ ಗುರುನಂದನ್ ನಟನೆಯ ಫಸ್ಟ್ ರ್ಯಾಂಕ್ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪರಿಚಯರಾಗಿದ್ದಾರೆ.ಅಂತೆಯೇ ಜಯಮ್ಮನ ಮಗ ಸಿನಿಮಾ ಖ್ಯಾತಿಯ ನಟಿ ಭಾರತಿ ಎಂ.ಬಿ.ಬಿ.ಎಸ್ ಪದವೀಧರೆಯಾಗಿದ್ದಾರೆ.ದುನಿಯಾ ವಿಜಯ್ ಅವರು ಮೊಟ್ಟ ಮೊದಲ ಬಾರಿಗೆ ನಿರ್ಮಾಣ ಮಾಡಿ ನಟಿಸಿದ ಜಯಮ್ಮನ ಮಗ ಚಿತ್ರ ಸೂಪರ್ ಹಿಟ್ ಆಗಿತ್ತು.

ಅಂತೆಯೇ ಕನ್ನಡದ ಮತ್ತೊಬ್ಬ ಯುವ ನಟಿ ಅಪೂರ್ವ ಅರೋರ ಕೂಡ ಎಂ.ಬಿ.ಬಿ.ಎಸ್ ಓದಿದ್ದು,ನಟನೆಯ ಮೇಲಿದ್ದ ಆಸಕ್ತಿಯಿಂದ ವೈದ್ಯೆ ವೃತ್ತಿಯನ್ನ ನಿಲ್ಲಿಸಿ ಇದೀಗ ಸಂಪೂರ್ಣವಾಗಿ ನಟನಾಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ.ನಟಿ ಅಪೂರ್ವ ಅರೊರಾ ನಟಿಸಿದ ಮೊದಲ ಚಿತ್ರ ಸಿದ್ದಾರ್ಥ್.ಈ ಸಿನಿಮಾ ವಿನಯ್ ರಾಜ್ ಕುಮಾರ್ ಅವರ ಡೆಬ್ಯೂ ಸಿನಿಮಾ ಆಗಿತ್ತು.ಇನ್ನು ನಟಿ ಅಪೂರ್ವ ಮುಗಳು ನಗೆ ಚಿತ್ರದ ಮೂಲಕ ನಾಡಿನಾದ್ಯಂತ ಅಪಾರ ಜನ ಮೆಚ್ಚುಗೆ ಪಡೆದರು.ಕನ್ನಡ ಮಾತ್ರವಲ್ಲದೆ ಗುಜರಾತಿ,ಮರಾಠಿ,ಹಿಂದಿ ಸಿನಿಮಾಗಳ ಜೊತೆಗೆ ಕೆಲವು ಜಾಹೀರಾತುಗಳಲ್ಲಿಯೂ ಕೂಡ ಕಾಣಿಸಿಕೊಂಡಿದ್ದಾರೆ.

Leave a Reply

%d bloggers like this: