ಕನ್ನಡದ ಪ್ರಸಿದ್ಧ ಹಾಸ್ಯ ನಟ ಕೋಮಲ್ ಅವರ ಪತ್ನಿ ಯಾರು ಗೊತ್ತಾ? ಮೊದಲ ಬಾರಿಗೆ ನೋಡಿ ಒಮ್ಮೆ

ಖಳ ನಟ, ಪೋಷಕ ನಟ,ಹಾಸ್ಯ ನಟ ನಂತರ ಸ್ಟಾರ್ ನಟರಾಗಿ ಮಿಂಚಿದ್ದ ನಟ ಅಂದರೆ ಅದು ಕೋಮಲ್ ಕುಮರ್. ನವರಸ ನಾಯಕ ಜಗ್ಗೇಶ್ ಅವರ ಸೋದರರಾಗಿರುವ ಕೋಮಲ್ ಅವರು ತಮ್ಮ ಹಾಸ್ಯ ನಟನೆಯ ಮೂಲಕ ಕನ್ನಡ ಚಿತ್ರರಂಗದಲ್ಲಿ ತನ್ನದೇಯಾದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಮಿಸ್ಟರ್ ಗರಗಸ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕರಾಗಿ ಪರಿಚಯವಾದ ಕೋಮಲ್ ಇದಕ್ಕೂ ಮೊದಲು ಬಹು ಬೇಡಿಕೆಯ ಜನಪ್ರಿಯ ಹಾಸ್ಯನಟರಾಗಿ ಚಿತ್ರರಂಗವನ್ನು ದಶಕಗಳ ಕಾಲ ಆಳಿದ್ದಾರೆ. ನಟ ಕೋಮಲ್ ಅವರು 1973 ರಂದು ಅವರು ಮಾಯಸಂದ್ರ ದಲ್ಲಿ ಜನಿಸುತ್ತಾರೆ. ಸೂಪರ್ ನನ್ಮಗ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಪ್ರವೇಶ ಪಡೆಯುವ ನಟ ಕೋಮಲ್ ತದ ನಂತರ ಒಂದಷ್ಟು ಚಿತ್ರಗಳಲ್ಲಿ ಖಳನಟನಾಗಿ ಮಿಂಚುತ್ತಾರೆ. ಜೊತೆ ಜೊತೆಗೆ ಅನೇಕ ಸಿನಿಮಾಗಳಲ್ಲಿ ಸಹ ನಟರಾಗಿ ಬಡ್ತಿ ಪಡೆಯುತ್ತಾರೆ.

ನಟ ಕೋಮಲ್ ಅವರು ಕೇವಲ ನಟ ಮಾತ್ರ ಅಲ್ಲ,ನಿರ್ಮಾಪಕ ಮತ್ತು ಚಿತ್ರ ವಿತರಕ ಕೂಡ ಹೌದು.ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ನಟ ಕೋಮಲ್ ಅವರು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್,ರಾಧಿಕಾ ಅಭಿನಯದ ತವರಿಗೆ ಬಾ ತಂಗಿ ಚಿತ್ರದ ನಟನೆಗೆ ಅತ್ಯುತ್ತಮ ಪೋಷಕ ನಟ ರಾಜ್ಯ ಪ್ರಶಸ್ತಿ ಕೂಡ ಪಡೆದಿದ್ದಾರೆ. ಜೊತೆಗೆ ಸಾಹಸ ಸಿಂಹ ವಿಷ್ಣು ವರ್ಧನ್ ಮತ್ತು ಅನಿರುದ್ದ್ ಮುಖ್ಯಭೂಮಿಕೆಯ ನೀನೆಲ್ಲೋ ನಾನಲ್ಲೇ ಚಿತ್ರದ ನಟನೆಗೆ ಸೌತ್ ಫಿಲ್ಮ್ ಫೇರ್ ಅವಾರ್ಡ್ ಕೂಡ ಲಭಿಸಿದೆ. ಇನ್ನು ಕೋಮಲ್ ಪತ್ನಿ ಅನುಸೂಯಾ ಅವರೊಂದಿಗೆ ದಾಂಪತ್ಯ ಜೀವನದಲ್ಲಿಯೂ ಕೂಡ ಯಶಸ್ವಿ ಕೌಟುಂಬಿಕ ಜೀವನ ಸಾಗಿಸುತ್ತಿದ್ದಾರ.

ನಟ ಕೋಮಲ್ ಅವರು ನಾಯಕ ನಟರಾಗುವುದಕ್ಕಿಂತ ಮೊದಲು ಕನ್ನಡದ ಸ್ಟಾರ್ ನಟರಾದ ವಿಷ್ಣುವರ್ಧನ್, ಶಿವರಾಜ್ ಕುಮಾರ್,ಪುನೀತ್ ರಾಜ್ ಕುಮಾರ್, ದರ್ಶನ್,ಸುದೀಪ್, ಅವರೊಟ್ಟಿಗೆ ತೆರೆ ಹಂಚಿಕೊಂಡಿದ್ದಾರೆ.ಇನ್ನು ನಟ ಕೋಮಲ್ ಅವರ ನಮೋ ಭೂತಾತ್ಮ ಚಿತ್ರದ ನಂತರ ಅವರ ಯಾವ ಸಿನಿಮಾಗಳು ಅಷ್ಟಾಗಿ ಹೇಳಿಕೊಳ್ಳುವಂತಹ ಹೆಸ‌‌‌ರು ಮಾಡಲಿಲ್ಲ. ಕೆಂಪೇಗೌಡ 2 ಸಿನಿಮಾದಲ್ಲಿ ಕೋಮಲ್ ಅವರು ಸಿಕ್ಸ್ ಪ್ಯಾಕ್ ಕೂಡ ಮಾಡಿ ಎಲ್ಲರಿಗೂ ಅಚ್ಚರಿ ಉಂಟು ಮಾಡಿದ್ದರು.ಸದ್ಯಕ್ಕೆ ನಟ ಕೋಮಲ್ ಅವರು ಯಾವ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ತಿಳಿದು ಬಂದಿಲ್ಲ.

Leave a Reply

%d bloggers like this: