ಕನ್ನಡದ ನಟನನ್ನ ಮೆಚ್ಚಿ ಹೊಗಳಿದ ಟಾಲಿವುಡ್ ಸ್ಟಾರ್ ನಟ

ಇತ್ತೀಚೆಗೆ ಭಾರತೀಯ ಚಿತ್ರರಂಗದಾದ್ಯಂತ ಭಾರಿ ಸದ್ದು ಮಾಡುತ್ತಿರೋದು ಅಂದ್ರೆ ಕನ್ನಡ ಸಿನಿಮಾಗಳು ಅಂತ ಹೇಳಿದರೆ ಅತಿಶಯೋಕ್ತಿ ಅಲ್ಲ. ಯಾಕಪ್ಪಾ ಅಂದ್ರೆ ಇತ್ತೀಚಿಗಿನ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ಕೆಜಿಎಫ್ ಚಿತ್ರದಿಂದ ಆರಂಭವಾದ ಪ್ಯಾನ್ ಇಂಡಿಯಾ ಸಿನಿಮಾ, ಕೆಜಿಎಫ್2, ಅವನೇ ಶ್ರೀ ಮನ್ನಾರಾಯಣ, 777 ಚಾರ್ಲಿ, ಅಂತೆಯೇ ಇತ್ತೀಚೆಗೆ ರಿಲೀಸ್ ಆಗಿ ಅದ್ದೂದಿ ಪ್ರದರ್ಶನ ಕಾಣುತ್ತಿರುವ ವಿಕ್ರಾಂತ್ ರೋಣ ಸಿನಿಮಾದವರೆಗೂ ಕೂಡ ಕನ್ನಡ ಸಿನಿಮಾಗಳು ದೇಶಾದ್ಯಂತ ಭಾರಿ ಸದ್ದು ಮಾಡಿವೆ. ಕನ್ನಡದ ನಟರು ಪರಭಾಷೆಗಳಲ್ಲಿ ನಿಂತು ತೊಡೆ ತಟ್ಟಿ ಗೆದ್ದು ಬಂದಿದ್ದಾರೆ. ಕನ್ನಡದ ಸಿನಿಮಾಗಳ ಬಗ್ಗೆ ಮತ್ತು ಕನ್ನಡ ಕಲಾವಿದರ ಬಗ್ಗೆ ಎಲ್ಲೆಡೆ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿವೆ.

ಅದರಂತೆ ಇತ್ತೀಚೆಗೆ ಅಮೀರ್ ಖಾನ್ ಅಭಿನಯದ ಲಾಲ್ ಸಿಂಗ್ ಚಡ್ಡಾ ಚಿತ್ರದ ಪ್ರಚಾರ ಕಾರ್ಯದಲ್ಲಿ ತೊಡಗಿದ್ದ ನಾಗ ಚೈತನ್ಯ ಅವರು ಅಚ್ಚರಿಯ ಹೇಳಿಕೆಯೊಂದನ್ನ ಹೇಳಿ ಎಲ್ಲರಿಗೂ ನಿಬ್ಬೆರಗಾಗಿಸಿದ್ದಾರೆ. ಹೌದು ಲಾಲ್ ಸಿಂಗ್ ಚಡ್ಡಾ ಸಿನಿಮಾದಲ್ಲಿ ತೆಲುಗು ಸ್ಟಾರ್ ನಟ ನಾಗ ಚೈತನ್ಯ ಅವರು ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗಾಗಿ ಈ ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ನಾಗ ಚೈತನ್ಯ ದೇಶದ ವಿವಿಧ ಭಾಗಗಳಲ್ಲಿ ಪ್ರವಾಸ ಕೈಗೊಂಡಿದ್ದಾರೆ. ಈ ಸಂಧರ್ಭದಲ್ಲಿ ನಟ ನಾಗಚೈತನ್ಯ ಅವರಿಗೆ ಪ್ರಶ್ನೆಯೊಂದು ಎದುರಾಗಿದೆ. ಅದೇನಪ್ಪಾ ಅಂದ್ರೆ ಪತ್ರಕರ್ತರೊಬ್ಬರು ಇತ್ತೀಚೆಗೆ ಪ್ಯಾನ್ ಇಂಡಿಯಾ ಸಿನಿಮಾಗಳು ಹೆಚ್ಚಾಗಿ ಬರುತ್ತಿವೆ.

ನಿಮಗೆ ಯಾವ ಪ್ಯಾನ್ ಇಂಡಿಯಾ ನಟ ಇಷ್ಟ ಎಂದು ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ನಟ ನಾಗಚೈತನ್ಯ ಅವರು ಯಾವುದೇ ರೀತಿ ಹಿಂದೆ ಮುಂದೆ ನೊಡದೆ ನನಗೆ ರಾಕಿಂಗ್ ಸ್ಟಾರ್ ಯಶ್ ಅವರನ್ನ ಕಂಡರೆ ತುಂಬ ಇಷ್ಟ. ಕೆಜಿಎಫ್ ಚಿತ್ರ ನೋಡಿದಾಗಿನಿಂದ ಅವರ ಅಭಿಮಾನಿಯಾಗಿದ್ದೇನೆ. ಪ್ಯಾನ್ ಇಂಡಿಯಾ ಸ್ಟಾರ್ ನಟನಾಗಿ ನನಗೆ ಕನ್ನಡದ ನಟ ಯಶ್ ಅವರು ಇಷ್ಟ ಆಗುತ್ತಾರೆ ಎಂದು ಹೇಳಿದ್ದಾರೆ. ನಾಗ ಚೈತನ್ಯ ಅವರ ಈ ಉತ್ತರ ಟಾಲಿವುಡ್ ನಲ್ಲಿನ ಅನೇಕರಿಗೆ ಅಚ್ಚರಿ ಮೂಡಿಸಿದೆ. ಇನ್ನು ಇತ್ತೀಚೆಗೆ ಕೆಜಿಎಫ್ ಚಿತ್ರದ ಅದರಲ್ಲೂ ಕೆಜಿಎಫ್ ಚಾಪ್ಟರ್2 ಸಿನಿಮಾದ ನಂತರ ಯಶ್ ಅವರಿಗೆ ಕೇವಲ ಭಾರತ ಮಾತ್ರ ಅಲ್ಲದೇ ವರ್ಲ್ಡ್ ವೈಡ್ ಅಪಾರ ಅಭಿಮಾನ ಬಳಗ ಸೃಷ್ಟಿಯಾಗಿದೆ. ಒಟ್ಟಾರೆಯಾಗಿ ನಾಗಚೈತನ್ಯ ಅವರು ಯಶ್ ಅವರನ್ನ ಮೆಚ್ಚಿ ಹೊಗಳಿರೋದು ನಿಜಕ್ಕೂ ಕೂಡ ಅಚ್ಚರಿ ಮೂಡಿಸಿದೆ.