ಕನ್ನಡ ಖ್ಯಾತ ನಟಿ ಸರ್ಕಾರೀ ಶಾಲೆಯಲ್ಲಿ ಟೀಚರ್ ಆಗಿ ಕೆಲಸಮಾಡುತ್ತಿದ್ದಾರೆ! ಇವರೇ ನೋಡಿ ಆ ಸ್ಟಾರ್ ನಟಿ

ಬಣ್ಣ ಮಾಸಿದ ಮೇಲೆ ಬಣ್ಣದ ಲೋಕದ ಕೆಲವು ಕಲಾವಿದರ ಬದುಕು ನಿಜಕ್ಕೂ ಕೂಡ ಊಹಿಸಲಾಗದ ಪರಿಸ್ಥಿತಿಯಲ್ಲಿರುತ್ತದೆ. ಕೆಲವು ಪೋಷಕರು ಕಲಾವಿದರು ಆರೋಗ್ಯ ಅಥವಾ ಆರ್ಥಿಕವಾಗಿ ಸಮಸ್ಯೆಯನ್ನ ಎದುರಿಸಿರುತ್ತಾರೆ.ಆದರೆ ದಿಗ್ಗಜ ನಟರೊಂದಿಗೆ ನಟಿಸಿ ಸ್ಟಾರ್ ನಟಿಯಾಗಿ ಮಿಂಚಿದ್ದ ನಟಿಯರು ಕೂಡ ಆರ್ಥಿಕ ಸಮಸ್ಯೆಗೆ ತುತ್ತಾಗಿ ಸಾಮಾನ್ಯರಂತೆ ಬದುಕಿ ನಡೆಸುತ್ತಿರುತ್ತಾರೆ.ಅಂತಹವರ ಸಾಲಿನಲ್ಲಿ ತಮಿಳು,ಮಲೆಯಾಳಂ ಮಾತ್ರ ಅಲ್ಲದೆ ಸ್ಯಾಂಡಲ್ ವುಡ್ ನಲ್ಲಿಯೂ ಸ್ಟಾರ್ ನಟರೊಂದಿಗೆ ಅಭಿನಯಿಸಿರುವ ದೇವಯಾನಿ ಕೂಡ ಇದ್ದಾರೆ. ನಟಿ ದೇವಯಾನಿ ಅವರು ಸದ್ಯಕ್ಕೆ ಶಾಲಾ ಶಿಕ್ಷಕಿ ಅಗಿ ಕೆಲಸ ಮಾಡುತ್ತಿರುವುದು ಗಮನಾರ್ಹವಾದ ಸಂಗತಿಯಾಗಿದೆ. ಸಾಹಸ ಸಿಂಹ ವಿಷ್ಣು ವರ್ಧನ್ ಅವರೊಟ್ಟಿಗೆ ನಟಿಸಿದ ನಟಿ ದೇವಯಾಗಿ ಈಗ ಏಕೆ ಶಿಕ್ಷಕಿಯಾಗಿದ್ದಾರೆ. ಏನು ಇವರ ಹಿನ್ನೆಲೆ ಸ್ಟಾರ್ ನಟಿಯಾಗಿ ಮಿಂಚಿದ ದೇವಯಾನಿ ಈಗೇಕೆ ಶಿಕ್ಷಕಿಯಾಗಿದ್ದಾರೆ ಎಂಬುದನ್ನ ತಿಳಿಯುವುದಾದರೆ.

ದೇವಯಾನಿ ಅವರು ಜನಿಸಿದ್ದು ಮಹಾರಾಷ್ಟ್ರದ ಮುಂಬೈನಲ್ಲಿ. ಕೊಂಕಣೆ ಕುಟುಂಬದಲ್ಲಿ ಜನಿಸಿದ ದೇವಯಾನಿ ಅವರಿಗೆ ಇಬ್ಬರು ಸೋದರರು ಇದ್ದಾರೆ.1993 ರಲ್ಲಿ ತೆರೆಕಂಡ ಬೆಂಗಾಲಿ ಶಾಥ್ ಪೊಂಚೊಮಿ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿಕೊಟ್ಟ ದೇವಯಾನಿ ತದ ನಂತರ ತಮಿಳು,ಮಲೆಯಾಳಂ ಸೇರಿದಂತೆ ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ.ನಟಿ ದೇವಯಾನಿ ಅವರಿಗೆ ತಮಿಳಿನ ಸೂರ್ಯವಂಶಂ ಚಿತ್ರದ ಅಭಿನಯಕ್ಕೆ ತಮಿಳು ರಾಜ್ಯ ಸರ್ಕಾರ ರಾಜ್ಯ ಪ್ರಶಸ್ತಿ ನೀಡಿದೆ. ನಟಿ ದೇವಯಾನಿ ಅವರು ತೊಂಭತ್ತರ ದಶಕದಲ್ಲಿ ಅನೇಕ ಯಶಸ್ವಿ ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ಅವರು ಅಭಿನಯದ ಪ್ರೇಮೋತ್ಸವ ಚಿತ್ರದಲ್ಲಿ ನಾಯಕಿಯಾಗಿ ನಟಿ ದೇವಯಾನಿ ನಟಿಸಿದ್ದಾರೆ.

ಕನ್ನಡ,ತೆಲುಗು ತಮಿಳು,ಬೆಂಗಾಲಿ ಸೇರಿದಂತೆ ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ನಟಿ ದೇವಯಾನಿ ಅವರು 2001 ರಲ್ಲಿ ನಿರ್ಮಾಪಕರಾದ ರಾಜಕುಮಾರನ್ ಅವರೊಟ್ಟಿಗೆ ದಾಂಪತ್ಯ ಜೀವನಕ್ಕೆ ಹೆಜ್ಜೆ ಇಡುತ್ತಾರೆ. ರಾಜಕುಮಾರನ್ ಮತ್ತು ನಟಿ ದೇವಯಾನಿ ಪರಸ್ಪರ ಪ್ರೀತಿಸಿ ಮದುವೆ ಆಗಿದ್ದರಿಂದ ಇವರಿಬ್ಬರಿಗೆ ಎರಡು ಕುಟುಂಬದ ನೆರವು ಸಿಗುವುದಿಲ್ಲ. ಹಾಗಾಗಿ ಈ ಇಬ್ಬರು ಪ್ರತ್ಯೇಕವಾಗಿ ಇಬ್ಬರೇ ಜೀವನ ನಡೆಸಲು ಆರಂಭಿಸುತ್ತಾರೆ. ಮದುವೆಯಾದ ನಂತರ ನಟಿ ದೇವಯಾನಿ ಅವರಿಗೆ ಸಿನಿಮಾದಲ್ಲಿ ಅವಕಾಶ ಬರುವುದು ಕಡಿಮೆ ಆಗುತ್ತದೆ.

ಆದರೆ ರಾಜಕುಮಾರನ್ ಅವರು ನಿರ್ಮಾಪಕರಾಗಿದ್ದ ಕಾರಣ ಆರ್ಥಿಕವಾಗಿ ಸಮಸ್ಯೆಗೆ ಒಳಗಾಗದೇ ಇದ್ದರು ಕೂಡ ಕೊಂಚ ಬದುಕಿನ ಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ. ಸಂಸಾರ ಸಾಗುತ್ತಾ ಈ ದಂಪತಿಗಳಿಗೆ ಇಬ್ಬರು ಮಕ್ಕಳಾಗಿ ಸುಂದರ ಬದುಕನ್ನ ನಡೆಸುತ್ತಿರುತ್ತಾರೆ. ಈ ನಡುವೆ ಅವರ ಪತಿ ರಾಜಕುಮಾರ್ ಅವರಿಗೂ ಕೂಡ ಹಣಕಾಸಿನ ವ್ಯವಹಾರದಲ್ಲಿ ನಷ್ಟ ಹೊಂದುತ್ತಾರೆ. ಇಂತಹ ಸಂಕಷ್ಟದ ಸಂಧರ್ಭದಲ್ಲಿ ಧೃತಿಗೆಡದ ನಟಿ ದೇವಯಾನಿ ಅವರು ಸಿನಿಮಾಗಳಲ್ಲಿ ಅವಕಾಶಗಳು ಸಿಗದಿದ್ದರೆ ಏನೂ ತನಗೆ ಸಾಮರ್ಥ್ಯವಿರುವ ಮತ್ತೊಂದು ಕ್ಷೇತ್ರದಲ್ಲಿ ದುಡಿಯುತ್ತೇನೆ ಎಂಬ ಆತ್ಮವಿಶ್ವಾಸದಿಂದ ಶಿಕ್ಷಕ ವೃತ್ತಿಯನ್ನ ಆಯ್ಕೆ ಮಾಡಿಕೊಳ್ಳುತ್ತಾರೆ.

ಖಾಸಗಿ ಶಿಕ್ಷಣ ಸಂಸ್ಥೆಯೊಂದರಲ್ಲಿ ನಾಲ್ಕನೇ ತರಗತಿಯ ಮಕ್ಕಳಿಗೆ ಪಾಠ ಹೇಳಿಕೊಡುತ್ತಿರುವ ನಟಿ ದೇವಯಾನಿ ಅವರು ಈ ಉದ್ಯೋಗದಿಂದ ಬರುತ್ತಿರುವ ಆದಾಯದಿಂದ ಜೀವನ ನಡೆಸುತ್ತಿದ್ದಾರೆ.ಒಂದು ಕಾಲದಲ್ಲಿ ಸ್ಟಾರ್ ನಟರೊಂದಿಗೆ ಮಿಂಚಿದ್ದ ಸ್ಟಾರ್ ನಟಿ ದೇವಯಾನಿ ಆಂದು ಯಾರ ಅಂಗಿಲ್ಲದೆ ಸ್ವಾಭಿಮಾನದಿಂದ ಬದುಕು ನಡೆಸುತ್ತಿದ್ದಾರೆ. ಈ ನಮ್ಮ ಲೇಖನ ಇಷ್ಟವಾದರೆ ಶೇರ್ ಮಾಡಿ ಮತ್ತು ಲೈಕ್ ಮಾಡಿ. ಈ ನಮ್ಮಲೇಖನದ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿ. ಮಹೊಸ ಹೊಸ ಸುದ್ದಿಗಳಿಗಾಗಿ ನಮ್ಮ ಪೇಜ್ ನ್ನು ತಪ್ಪದೆ ಲೈಕ್ ಮಾಡಿ.

Leave a Reply

%d bloggers like this: