ಕನ್ನಡದ ಸ್ಟಾರ್ ನಟನ ಮಗನ ಮಡದಿಯಾಗಲಿದ್ದಾರಾ ರಶ್ಮಿಕಾ ಮಂದಣ್ಣ..! ರಶ್ಮಿಕಾ ಮದುವೆ ವಿಚಾರದಲ್ಲಿ ಊಹಿಸದ ತಿರವು

ಸ್ಯಾಂಡಲ್ ವುಡ್ ಈ ಸ್ಟಾರ್ ನಟನ ಮಗನ ಮಡದಿಯಾಗಲಿದ್ದಾರಾ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ…! ಇತ್ತೀಚೆಗೆ ಇಡೀ ಭಾರತೀಯ ಚಿತ್ರರಂಗದಲ್ಲಿ ಸಖತ್ ಸೌಂಡ್ ಮಾಡುತ್ತಿರುವ ಬೆಡಗಿ ಅಂದರೆ ಅದು ಕನ್ನಡದ ಕೊಡಗಿನ ಕುವರಿ ನಟಿ ರಶ್ಮಿಕಾ ಮಂದಣ್ಣ. ಕನ್ನಡದ ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ರಶ್ಮಿಕಾ ಮಂದಣ್ಣ ಇಂದು ಸೌತ್ ಸಿನಿ ರಂಗದ ಅತ್ಯಂತ ಜನಪ್ರಿಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಕಿರಿಕ್ ಪಾರ್ಟಿ ಸಿನಿಮಾದ ಯಶಸ್ಸು ಇವರನ್ನ ತೆಲುಗು ಚಿತ್ರರಂಗಕ್ಕೆ ರೆಡ್ ಕಾರ್ಪೇಟ್ ಹಾಕಿ ಕರೆಯುವಂತೆ ಅವಕಾಶ ನೀಡಿತು. ಅದರಂತೆ ಅರ್ಜುನ್ ರೆಡ್ಡಿ ಸಿನಿಮಾದ ಮೂಲಕ ಟಾಲಿವುಡ್ ನಲ್ಲಿ ಸನ್ಶೇನಲ್ ಕ್ರಿಯೆಟ್ ಮಾಡಿದ ವಿಜಯ್ ದೇವರಕೊಂಡ ಅವರ ಗೀತ ಗೋವಿಂದಂ ಚಿತ್ರದಲ್ಲಿ ನಟಿಸಿದ ನಂತರ ಇವರಿಬ್ಬರ ಕೆಮಿಸ್ಟ್ರಿ ಅದ್ಭುತವಾಗಿ ಮೂಡಿ ಬಂದು ಟಾಲಿವುಡ್ ಕ್ಯೂಟ್ ಕಪಲ್ ಆಗಿ ಹೋಯಿತು.

ಇಂದಿಗೂ ಕೂಡ ಇಬ್ಬರು ಆಗಾಗ ಜೊತೆಯಾಗಿ ಕಾಣಿಸಿಕೊಳ್ಳುವ ಮೂಲಕ ವಿಜಯ್ ದೇವರ ಕೊಂಡ ಮತ್ತು ರಶ್ಮಿಕಾ ಮಂದಣ್ಣ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದಾವೆ. ಆದರೆ ಈ ಬಗ್ಗೆ ವಿಜಯ್ ಆಗಲೀ ರಶ್ಮಿಕಾ ಆಗಲಿ ಯಾವುದೇ ರೀತಿಯ ಸ್ಪಷ್ಟನೆ ನೀಡದೇ ನಾವಿಬ್ಬರು ಜಸ್ಟ್ ಫ್ರೆಂಡ್ಸ್ ಅಂತೇಳುತ್ತಿದ್ದಾರೆ. ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಸದ್ಯದ ಮಟ್ಟಿಗೆ ಭಾರತೀಯ ಚಿತ್ರರಂಗದ ಬಹು ಬೇಡಿಕೆಯ ನಟಿಯಾಗಿ ಮಿಂಚುತ್ತಿದ್ದಾರೆ. ಇತ್ತೀಚೆಗೆ ತೆರೆಕಂಡು ಸೂಪರ್ ಹಿಟ್ ಆದ ಪುಷ್ಪ ಸಿನಿಮಾದ ನಂತರ ಯಾವ ಸ್ಟಾರ್ ನಟನಿಗೂ ಕಮ್ಮಿ ಇಲ್ಲದಂತಹ ಭಾರಿ ಸಂಭಾವನೆ ಪಡೆಯುತ್ತಿದ್ದಾರೆ ರಶ್ಮಿಕಾ ಮಂದಣ್ಣ. ಕನ್ನಡ , ತೆಲುಗು , ತಮಿಳು ಮತ್ತು ಹಿಂದಿ ಈ ನಾಲ್ಕು ಭಾಷೆಗಳಲ್ಲಿಯೂ ನಟಿಸಿರುವ ರಶ್ಮಿಕಾ ಮಂದಣ್ಣ ಅವರಿಗೆ ತಮಿಳು ನಾಡು ಕುಟುಂಬದ ಸೊಸೆಯಾಗಬೇಕು ಎಂಬ ಆಸೆಯಂತೆ.

ಹೀಗಂತ ಅವರೇ ಒಂದು ಖಾಸಗಿ ವಾಹಿನಿಯ ಕಾರ್ಯಕ್ರಮವೊಂದರಲ್ಲಿ ಹೇಳಿಕೊಂಡಿದ್ದರು. ಕನ್ನಡದ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡು ಕೆಲವು ಕಾರಣಾಂತರಗಳಿಂದ ಆ ಸಂಬಂಧಕ್ಕೆ ಅಂತ್ಯ ಹಾಡಿದರು. ಇದಾದ ಬಳಿಕ ಗೀತ ಗೋವಿಂದಂ ಚಿತ್ರದ ಯಶಸ್ಸಿನ ಅಲೆಯಲ್ಲಿದ್ದ ಈ ಜೋಡಿ ಹೆಚ್ಚು ಜೊತೆಯಾಗಿಯೇ ಇರುತ್ತಿದ್ದರು. ಇತ್ತೀಚಿಗೆ ತಾನೇ ಹೊಸ ವರ್ಷ ಆಚರಣೆಗೆ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಜೊತೆಯಾಗಿ ಗೋವಾಗೆ ತೆರಳಿದ್ದರು. ಈ ಫೋಟೋಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಇವರಿಬ್ಬರು ಮದುವೆ ಆಗಲಿದ್ದಾರೆ ಎಂಬ ಮಾತುಗಳು ಕೂಡ ಜೋರಾಗಿ ಕೇಳಿ ಬಂದವು.

ಇದರ ನಡುವೆ ಹೊಸದೊಂದು ಬೆಳವಣಿಗೆಯಾಗಿದೆ. ಹೌದು ಕನ್ನಡದ ಕ್ರೇಜಿ಼ ಸ್ಟಾರ್ ವಿ.ರವಿಚಂದ್ರನ್ ಅವರ ಸೊಸೆಯಾಗಬೇಕಾಗಿತ್ತಂತೆ ರಶ್ಮಿಕಾ ಮಂದಣ್ಣ. ಹೀಗಂತ ಅಪೇಕ್ಷೆ ಪಟ್ಟಿದ್ದು ಬೇರಾರು ಅಲ್ಲ. ಸ್ವತಃ ರವಿಚಂದ್ರನ್ ಅವರೇ. ಹೌದು ಇತ್ತೀಚೆಗೆ ಖಾಸಗಿ ಸುದ್ದಿ ವಾಹಿನಿಯೊಂದು ನವನಕ್ಷತ್ರ ಎಂಬ ಕಾರ್ಯಕ್ರಮ ಆಯೋಜನೆ ಮಾಡಿತ್ತು. ಈ ಕಾರ್ಯಕ್ರಮಕ್ಕೆ ರವಿಚಂದ್ರನ್ ಸೇರಿದಂತೆ ಅನೇಕ ದಿಗ್ಗಜ ನಟ-ನಟಿಯರು ಆಗಮಿಸಿದ್ದರು. ಅದರಂತೆ ನಟಿ ರಶ್ಮಿಕಾ ಮಂದಣ್ಣ ಕೂಡ ಬಂದಿದ್ದರು. ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಂತೆ ರವಿಚಂದ್ರನ್ ಅವರನ್ನ ಕಂಡಾಕ್ಷಣ ಆಲಂಗಿಸಿ ಸಂಭ್ರಮದಿಂದ ಕುಶಲೋಪರಿ ವಿಚಾರಿಸಿಕೊಂಡರು.

ಈ ಕಾರ್ಯಕ್ರಮದ ವೇದಿಕೆಯ ಮೇಲೆಯೇ ಮಾತನಾಡುತ್ತಾ ರವಿಚಂದ್ರನ್ ಅವರು ಮಾತನಾಡುತ್ತಾ ರಶ್ಮಿಕಾ ಮಂದಣ್ಣ ನನ್ನ ಮಗನ ಜಿಮ್ ಗೆ ಬರುತ್ತಿದ್ದರಂತೆ. ಈ ವಿಚಾರ ನನಗೆ ನನ್ನ ಮಗ ನನಗೆ ಹೇಳಿದಾಗ ಮತ್ಯಾಕೆ ಬಿಟ್ಬಿಟ್ಟೆ ಮದ್ವೆ ಆಗ್ಬೋದಿತ್ತಲ್ಲ ಎಂದು ಮುಕ್ತವಾಗಿ ಹಂಚಿಕೊಂಡರು. ರವಿ ಚಂದ್ರನ್ ಅವರ ಮಾತನ್ನ ಕೇಳಿ ಪಕ್ಕದಲ್ಲೇ ಇದ್ದ ರಶ್ಮಿಕಾ ಮಂದಣ್ಣ ನಾಚಿ ನೀರಾದರು. ಈ ವೀಡಿಯೋ ಇದೀಗ ಸೊಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.