ಕನ್ನಡದ ಖ್ಯಾತ ನಟ ಕಮ್ ರಾಜಕಾರಣಿ ‘ಬಿಸಿ ಪಾಟೀಲ್’ ಹೆಂಡತಿ ನುಜಕ್ಕೂ ಯಾರು ಗೊತ್ತಾ? ನೋಡಿ ಒಮ್ಮೆ

ಕನ್ನಡ ಚಿತ್ರರಂಗದ ಕೌರವ ಎಂದೇ ಹೆಸರಾಗಿರುವ ನಟ, ನಿರ್ಮಾಪಕ ಬಿ.ಸಿ.ಪಾಟೀಲ್ ಅವರು ಇದೀಗ ಸಿನಿಮಾಗಳಿಂದ ಕೊಂಚ ಅಂತರ ಕಾಯ್ದುಕೊಂಡು ಸಂಪೂರ್ಣವಾಗಿ ರಾಜಕೀಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರಸ್ತುತ ಆಡಳಿತ ಪಕ್ಷವಾಗಿರುವ ಭಾರತೀಯ ಜನತಾ ಪಕ್ಷ ಸರ್ಕಾರದಲ್ಲಿ ಕೃಷಿ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿರುವ ಬಿ.ಸಿ.ಪಾಟೀಲ್ ಅವರ ಮಕ್ಕಳು ಏನು ಮಾಡುತ್ತಿದ್ದಾರೆ ಗೊತ್ತಾ. ಸಾಮಾನ್ಯವಾಗಿ ಸಿನಿಮಾ ಹಿನ್ನೆಲೆ ಹೊಂದಿರುವ ಬಹುತೇಕರು ತಮ್ಮ ತಂದೆ ಅಥವಾ ತಾಯಿಯಂತೆ ಬಣ್ಣದ ಲೋಕದಲ್ಲಿ ಮಿಂಚಬೇಕು ಎಂದು ಕನಸು ಕಾಣುತ್ತಾರೆ. ಆದರೆ ಕೆಲವೇ ಕೆಲವರು ಮಾತ್ರ ತಮ್ಮದೇಯಾದ ಸ್ವತಂತ್ರ ಬದುಕನ್ನ ಕಂಡುಕೊಳ್ಳಬೇಕು ಎಂದು ಸಿನಿಮಾ ಕ್ಷೇತ್ರ ಬಿಟ್ಟು ಬೇರೆ ಕ್ಷೇತ್ರದತ್ತ ಮುಖ ಮಾಡುತ್ತಾರೆ.

ಚಂದನವನದ ಅನೇಕ ಹಿರಿಯ ನಟ-ನಟಿಯರ ಮಕ್ಕಳು ಈಗಾಗಲೇ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟು ತಮ್ಮ ಅದೃಷ್ಟ ಪರೀಕ್ಷೆ ಮಾಡಿದ್ದಾರೆ. ಅದರಲ್ಲಿ ಕೆಲವರು ಗೆದ್ದರೆ ಕೆಲವರಿಗೆ ತೃಪ್ತಿದಾಯಕ ಯಶಸ್ಸು ಸಿಗದೇ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಕೆಲವರಂತೂ ಈ ಸಿನಿಮಾ ಕ್ಷೇತ್ರ ನಮಗೆ ಒಗ್ಗುವುದಿಲ್ಲ ಎಂದು ಬೇರೆ ಕ್ಷೇತ್ರದತ್ತ ಮುಖ ಮಾಡುತ್ತಾರೆ. ಅದರಂತೆ ಕನ್ನಡದ ಖ್ಯಾತ ನಟ,ನಿರ್ಮಾಪಕ ಬಿ.ಸಿ.ಪಾಟೀಲ್ ಅವರ ಮಕ್ಕಳು ಕೂಡ ಬಣ್ಣದ ಲೋಕದತ್ತ ಸೆಳೆತ ಕಂಡರು ಅದರಿಂದ ಅಂತರ ಕಾಯ್ದುಕೊಂಡು ಇದೀಗ ಬೇರೆ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಬಿ.ಸಿ.ಪಾಟೀಲ್ ಅವರ ಬಗ್ಗೆ ತಿಳಿಯುವುದಾದರೆ ಧಾರವಾಡ ಜಿಲ್ಲೆಯ ಕುಂದಗೋಳ ತಾಲ್ಲೂಕಿನ ಯಲಿವಾಲದಲ್ಲಿ ಚನ್ನ ಬಸವನಗೌಡ ಪಾಟೀಲ ಮತ್ತು ಶಿವಮ್ಮ ದಂಪತಿಗಳಿಗೆ ಬಿ.ಸಿ.ಪಾಟೀಲ್ ಅವರು ಜನಿಸುತ್ತಾರೆ.

ಬಿ.ಸಿ.ಪಾಟೀಲ್ ಅವರಿಗೆ ಬಾಲ್ಯದಿಂದಾನೂ ತಾನು ಪೊಲೀಸ್ ಅಧಿಕಾರಿ ಆಗಬೇಕು ಎಂದು ಕನಸು ಹೊತ್ತಿರುತ್ತಾರೆ. ಅದರಂತೆ ಬಿ.ಎ.ಪದವಿ ಪಡೆದು ಪೊಲೀಸ್ ಅಧಿಕಾರಿ ಕೂಡ ಆಗುತ್ತಾರೆ. ಒಂದಷ್ಟು ವರ್ಷಗಳ ಕಾಲ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದ ಬಿ.ಸಿ.ಪಾಟೀಲ್ ಅವರಿಗೆ ಸಿನಿಮಾದತ್ತ ಒಲವು ಹೆಚ್ಚಾಗುತ್ತದೆ.ಆಗ ನಿಷ್ಕರ್ಷ ಎಂಬ ಚಿತ್ರಕ್ಕೆ ಹಣ ಹೂಡುವ ಮೂಲಕ ನಿರ್ಮಾಪಕರಾಗಿ ಚಂದನವನಕ್ಕೆ ಎಂಟ್ರಿ ಕೊಡುತ್ತಾರೆ. ಈ ನಿಷ್ಕರ್ಷ ಸಿನಿಮಾದಲ್ಲಿ ವಿಷ್ಣು ವರ್ಧನ್ ಅವರು ನಾಯಕ ನಟರಾಗಿರುತ್ತಾರೆ. ಇವರಿಗೆ ಖಳ ನಟರಾಗಿ ಬಿ.ಸಿ.ಪಾಟೀಲ್ ಅವರೇ ಕಾಣಿಸಿಕೊಂಡಿರುತ್ತಾರೆ. ಹೀಗೆ ಸಿನಿಮಾ ಕ್ಷೇತ್ರಕ್ಕೆ ಎಂಟ್ರಿಕೊಟ್ಟ ಬಿ.ಸಿ.ಪಾಟೀಲ್ ಅವರಿಗೆ ಅಂದಿನ ದಿನಮಾನದಲ್ಲಿ ಯಶಸ್ವಿ ಸಿನಿಮಾಗಳ ನಿರ್ದೇಶಕ ಎಸ್.ಮಹೇಂದರ್ ಅವರ ಪರಿಚಯವಾಗುತ್ತದೆ.

ಆಗ ಬಿ.ಸಿ.ಪಾಟೀಲ್ ಅವರು ಇನ್ಸ್ ಪೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿರುತ್ತಾರೆ. ಇದೇ ಸಂಧರ್ಭದಲ್ಲಿ ಬಿ.ಸಿ.ಪಾಟೀಲ್ ಅವರು ಎಸ್.ಮಹೇಂದರ್ ಅವರ ಹೇಳಿದ ಕಥೆ ಮೆಚ್ಚಿ ತಾವೇ ಹೀರೋ ಆಗಿ ನಟಿಸುತ್ತಾರೆ. ಆ ಚಿತ್ರವೇ ಕೌರವ. ಪ್ರೇಮ ಮತ್ತು ಬಿ.ಸಿ.ಪಾಟೀಲ್ ಮುಖ್ಯ ಭೂಮಿಕೆಯಲ್ಲಿ ತೆರೆಕಂಡ ಈ ಕೌರವ ಸಿನಿಮಾ ಸೂಪರ್ ಹಿಟ್ ಆಗುತ್ತದೆ. ಈ ಚಿತ್ರದ ಯಶಸ್ಸಿನ ನಂತರ ಬಿ.ಸಿ.ಪಾಟೀಲ್ ಅವರಿಗೆ ಸಾಲು ಸಾಲು ಸಿನಿಮಾಗಳ ಅವಕಾಶ ಒದಗಿಬರುತ್ತದೆ. ಹೀಗಾಗಿ ಇನ್ಸ್ ಪೆಕ್ಟರ್ ಹುದ್ದೆ ತ್ಯಜಿಸಿ ಸಂಪೂರ್ಣವಾಗಿ ಸಿನಿಮಾಗಳಲ್ಲಿ ಭಿಝಿಯಾಗುತ್ತಾರೆ. ಇದುವರೆಗೆ ನಲವತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಇವರ ಪತ್ನಿಯ ಹೆಸರು ವನಜಾ. ವನಜಾ ಮತ್ತು ಬಿ.ಸಿ.ಪಾಟೀಲ್ ದಂಪತಿಗಳಿಗೆ ಸೃಷ್ಟಿ ಪಾಟೀಲ್ ಮತ್ತು ಸೌಮ್ಯ ಪಾಟೀಲ್ ಎಂಬ ಹೆಸರಿನ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಸೃಶ್ಟಿ ಪಾಟೀಲ್ ಹ್ಯಾಪಿ ನ್ಯೂಯರ್ ಎಂಬ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ. ಆದರೆ ಅಂದುಕೊಂಡಂತೆ ಯಶಸ್ಸು ಸಿಗದ ಕಾರಣ ಸೃಷ್ಟಿ ಪಾಟೀಲ್ ಅವರು ಸಂಜಯ್ ಎಂಬುವರೊಟ್ಟಿಗೆ ದಾಂಪತ್ಯ ಜೀವನಕ್ಕೆ ಹೆಜ್ಜೆ ಇಟ್ಟಿದ್ದಾರೆ. ಸದ್ಯಕ್ಕೆ ಸೃಷ್ಟಿ ಪಾಟೀಲ್ ಅವರು ಕೆ.ಎ.ಎಸ್ ಇನ್ಸ್ಟಿಟ್ಯೂಟ್ ನಲ್ಲಿ ಉಪ ನಿರ್ದೇಶಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇನ್ನು ಇವರ ಸೋದರಿ ಸೌಮ್ಯ ಕೂಡ ಸಿನಿಮಾ ಕ್ಷೇತ್ರಕ್ಕೆ ಬರದೇ ಬೇರೆ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ.

Leave a Reply

%d bloggers like this: