ಕನ್ನಡದ ಖ್ಯಾತ ಹಾಸ್ಯ ನಟ ರಂಗಾಯಣ ರಘು ಅವರ ಮುದ್ದಾದ ಹೆಂಡತಿ ಮತ್ತು ಮಗಳು ನಿಜಕ್ಕೂ ಹೇಗಿದ್ದಾರೆ ಗೊತ್ತಾ? ನೋಡಿ ಒಮ್ಮೆ

ಚಂದನವನದ ಸುಪ್ರಸಿದ್ದ ಕಲಾವಿದ ನಟ ರಂಗಾಯಣ ರಘು ಅವರ ನಟನೆಗೆ ಕನ್ನಡ ಸಿನಿ ಪ್ರೇಕ್ಷಕರು ಈಗಾಗಲೇ ಮನಸೋತಿದ್ದಾರೆ. ರಂಗಭೂಮಿ ಹಿನ್ನೆಲೆಯಿಂದ ಬಂದಂತಹ ನಟ ರಂಗಾಯಣ ರಘು ಅವರು ಈಗಾಗಲೇ ತಮ್ಮ ನಟನಾ ಸಾಮರ್ಥ್ಯ ಏನೆಂಬುದನ್ನ ಖಳ ನಟನಾಗಿ, ಪೋಷಕ ನಟನಾಗಿ, ಹಾಸ್ಯ ನಟನಾಗಿ ಹೀಗೆ ಎಲ್ಲಾ ರೀತಿಯ ಪಾತ್ರಗಳಿಗೆ ಜೀವ ತುಂಬಿ ನಟಿಸಿ ಕನ್ನಡ ಚಿತ್ರರಂಗದಲ್ಲಿ ಜನಪ್ರಿಯ ಬೇಡಿಕೆಯ ನಟರಾಗಿ ಹೆಸರು ಮಾಡಿದ್ದಾರೆ. ನಟ ರಂಗಾಯಣ ರಘು ಎಂದಾಕ್ಷಣ ತಟ್ಟನೇ ನೆನಪಿಗೆ ಬರುವುದು ದುನಿಯಾ ಚಿತ್ರದಲ್ಲಿನ ಸತ್ಯಣ್ಣನ ಪಾತ್ರ. ಹೌದು ಸೂರಿ ನಿರ್ದೇಶನದಲ್ಲಿ ನಾಯಕ ನಟರಾಗಿ ವಿಜಯ್ ಅಭಿನಯಿಸಿದ ದುನಿಯಾ ಚಿತ್ರದಲ್ಲಿ ತಲೆ ಬಾಚ್ಕಳಿ ಪೌಡ್ರ ಆಕಳಿ ಎಂಬ ಡೈಲಾಗ್ ಮೂಲಕ ಸತ್ಯಣ್ಣನಾಗಿ ಅದ್ಭುತವಾಗಿ ನಟಿಸಿ ಕನ್ನಡ ಸಿನಿ ಪ್ರೇಕ್ಷಕರ ಮನದಲ್ಲಿ ಅಚ್ಚಳಿಯದೇ ಉಳಿದಿದ್ದಾರೆ. ರಂಗಾಯಣ ರಘು ಅವರಿಗೆ ದುನಿಯಾ ಸಿನಿಮಾ ಸಿನಿ ವೃತ್ತಿ ಜೀವನದಲ್ಲಿ ಹೊಸದೊಂದು ತಿರುವನ್ನೇ ನೀಡಿತು ಎನ್ನಬಹುದು.

ದುನಿಯಾ ಸಿನಿಮಾ ಸೂಪರ್ ಹಿಟ್ ಆದ ನಂತರ ರಂಗಾಯಣ ರಘು ಅವರಿಗೆ ಅಪಾರ ಜನಪ್ರಿಯತೆ ದೊರೆತು ಸಾಲು ಸಾಲು ಸಿನಿಮಾಗಳಲ್ಲಿ ನಟಿಸುವಂತಾಯಿತು. ಇನ್ನು ನಟ ರಂಗಾಯಣ ಅವರು ಮೂಲತಃ ರಂಗಭೂಮಿ ಕಲಾವಿದರು. ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜಿನಲ್ಲಿ ಬಿ.ಎ. ಪದವಿ ಪಡೆದ ರಂಗಾಯಣ ರಘು ಅವರು ನಂತರ ಮೈಸೂರಿನ ರಂಗಾಯಣ ರಂಗಭೂಮಿಗೆ ಸೇರಿಕೊಳ್ಳುತ್ತಾರೆ. ಇಲ್ಲಿ ಒಂದಷ್ಟು ನಾಟಕ ಮಾಡಿ ಉತ್ತಮ ನಟರಾಗಿ ಗುರುತಿಸಿಕೊಳ್ಳುತ್ತಾರೆ. ಇದಾದ ಬಳಿಕ ಮೊಟ್ಟ ಮೊದಲ ಬಾರಿಗೆ ಸುಪ್ರಸಿದ್ದ ಸಂಗೀತ ನಿರ್ದೇಶಕ, ಸಾಹಿತಿ ಹಂಸಲೇಖ ಅವರ ಪುತ್ರ ನಾಯಕ ನಟರಾಗಿ ನಟಿಸಿದ್ದ ಸುಗ್ಗಿ ಚಿತ್ರದಲ್ಲಿ ಬಣ್ಣ ಹಚ್ಚುವ ಮೂಲಕ ರಂಗಾಯಣ ರಘು ಅವರು ಸ್ಯಾಂಡಲ್ ವುಡ್ ಗೆ ಪ್ರವೇಶ ಪಡೆಯುತ್ತಾರೆ. ಇದಾದ ನಂತರ ಧಮ್, ಶ್ರೀ ರಾಮ್, ರಂಗ ಎಸ್.ಎಸ್.ಎಲ್.ಸಿ, ಸೈನೈಡ್, ಸುಂಟರಗಾಳಿ, ದುನಿಯಾ, ಒಲವೇ ಮಂದಾರ, ಗಾಳಿಪಟ, ರಾಮ್,ಮಿಲನ, ಪವರ್ ಸೇರಿದಂತೆ ಬರೋಬ್ಬರಿ ಇನ್ನೂರೈವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ಅಪಾರ ಪ್ರಸಿದ್ದತಿ ಪಡೆದುಕೊಂಡಿದ್ದಾರೆ.

ಇನ್ನು ಇತ್ತೀಚೆಗಿನ ವರ್ಷಗಳಲ್ಲಿ ಅನೇಕ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ನಟ ರಂಗಾಯಣ ರಘು ಅವರು ಸಿನಿ ಹಿನ್ನೆಲೆ ಇಷ್ಟಾದರೆ ಅವರ ವೈಯಕ್ತಿಕ ಬದುಕಿನ ಕುರಿತು ಕೊಂಚ ತಿಳಿಯುವುದಾದರೆ.‌ ನಟ ರಂಗಾಯಣ ರಘು ಅವರು 1995 ರಲ್ಲಿ ಮಂಗಳಾ ಎಂಬುವವರನ್ನು ತಮ್ಮ ಬಾಳ ಸಂಗಾತಿಯಾಗಿ ಸ್ವೀಕರಿಸುತ್ತಾರೆ. ಮಂಗಳಾ ಅವರು ಎಂ.ಎ. ಪದವೀಧರೆಯಾಗಿದ್ದು ಸಂಚಾರಿ ಎಂಬ ರಂಗ ತಂಡದ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮಂಗಳಾ ಅವರಿಗೆ ರಾಷ್ಟ್ರ ಪ್ರಶಸ್ತಿ ವಿಜೇತ ನಟ ದಿ. ಸಂಚಾರಿ ವಿಜಯ್ ಉತ್ತಮ ಒಡನಾಟವಿತ್ತು. ಸಂಚಾರಿ ತಂಡದಲ್ಲಿ ವಿಜಯ್ ಅವರು ಒಂದಷ್ಟು ನಾಟಕಗಳಲ್ಲಿ ಅಭಿನಯಿಸಿದ್ದರು. ಇನ್ನು ನಟ ರಂಗಾಯಣ ರಘು ಮತ್ತು ಮಂಗಳಾ ದಂಪತಿಗಳಿಗೆ ಚುಕ್ಕಿ ಎಂಬ ಮಗಳಿದ್ದು, ಇವರು ಕೂಡ ಪದವೀಧರೆಯಾಗಿದ್ದು, ತಮ್ಮ ತಾಯಿಯ ಜೊತೆ ಸಂಚಾರಿ ರಂಗತಂಡವನ್ನು ನೋಡಿಕೊಳ್ಳುತ್ತಿದ್ದಾರೆ.

Leave a Reply

%d bloggers like this: