ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸಿದ ಪುಟಾಣಿ ವಂಶಿಕಾ, ಮೊದಲ ಚಿತ್ರಕ್ಕೆ ಸಿಕ್ಕ ಸಂಭಾವನೆ ಎಷ್ಟು ಗೊತ್ತೇ

ನಟ ಮಾಸ್ಟರ್ ಆನಂದ್ ಮಗಳು ವಂಶಿಕಾ ತನ್ನ ಮೊದಲ ಚಿತ್ರಕ್ಕೆ ಭಾರಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗುತ್ತಿದೆ. ಹೌದು ನಟ ಮಾಸ್ಟರ್ ಆನಂದ್ ಮತ್ತು ಯಶಸ್ವಿನಿ ದಂಪತಿಗಳ ಪುತ್ರಿ ವಂಶಿಕಾ ಕಿರುತೆರೆಯಲ್ಲಿ ಈಗಾಗಲೇ ಸಾಕಷ್ಟು ಹೆಸರು ಮಾಡಿದ್ದಾರೆ. ಈ ಪುಟಾಣಿ ಪೊರಿ ವಂಶಿಕಾಗೆ ಈಗ ಜಸ್ಟ್ ಐದು ವರ್ಷ ಅಷ್ಟೇ. ಈ ವಯಸ್ಸಿಗೇನೇ ಅಪ್ಪನನ್ನ ಕೂಡ ಮೀರಿಸುವಷ್ಟು ಚೂಟಿಯಾಗಿದ್ದಾಳೆ ವಂಶಿಕಾ. ನೀವೆಲ್ಲಾ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋಗಳಾದ ಮಜಾ ಭಾರತ, ನನ್ನಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮಗಳಲ್ಲಿ ವಂಶಿಕಾಳ ನಟನೆ, ತುಂಟತನ ಮತ್ತು ಅರುಳು ಹುರಿದಂತೆ ಮಾತನಾಡುವ ವಾಕ್ ಚಾತುರ್ಯತೆ ಮನ ಸೆಳೆಯುವ ನಟನೆ ಕನ್ನಡಿಗರಿಗೆ ತುಂಬಾನೇ ಇಷ್ಟವಾಗಿದೆ. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ನನ್ನಮ್ಮ ಸೂಪರ್ ಸ್ಟಾರ್ ಶೋನಲ್ಲಿ ವಂಶಿಕಾ ತನ್ನ ತಾಯಿ ಯಶಸ್ವಿನಿ ಜೊತೆ ಸ್ಪರ್ಧಿಸಿ ಜಯ ಶೀಲರಾಗಿದ್ದರು.

ವಂಶಿಕಾಳ ಮುದ್ದು ಮುದ್ದಾದ ಮಾತು ಅವಳ ಚಿನಕುರುಳಿ ಮಾತುಗಳನ್ನ ಕೇಳಿ ಕಿರುತೆರೆಯ ವೀಕ್ಷಕರು ತಲೆದೂಗಿದ್ದರು. ಅದೇ ರೀತಿಯಾಗಿ ವಂಶಿಕಾಳ ಪ್ರತಿಭೆಗೆ ತಕ್ಕಂತೆ ಗುಳಿಕೆನ್ನೆ ಮಾಸ್ ನಟ ಮತ್ತು ತನ್ನ ಕಂಚಿನ ಕಂಠದ ಗಾಯನದ ಮೂಲಕ ಕನ್ನಡ ಸಿನಿ ಪ್ರೇಕ್ಷಕರ ಮನ ಗೆದ್ದಾರೋ ವಸಿಷ್ಟ ಸಿಂಹ ಅವರ ಲವ್ ಲೀ ಸಿನಿಮಾದಲ್ಲಿ ವಂಶಿಕಾ ತನು ಎಂಬ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಎಲ್ಲರಿಗೂ ಅಚ್ಚರಿ ಅಂದರೆ ಈ ಪಾತ್ರದಲ್ಲಿ ನಟಿಸಲು ವಂಶಿಕಾಗೆ ಬರೋಬ್ಬರಿ ಐದು ಲಕ್ಷ ಸಂಭಾವನೆ ನೀಡಲಾಗಿದೆ ಎಂದು ತಿಳಿದು ಬಂದಿದೆ. ಕಿರುತೆರೆಯಿಂದ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡುತ್ತಿರುವ ವಂಶಿಕಾಗೆ ಮೊದಲ ಚಿತ್ರದಲ್ಲೇ ಭಾರಿ ಸಂಭಾವನೆ ನೀಡಲಾಗಿದೆ. ಇದು ಅವರ ತಂದೆ ನಟ ಮಾಸ್ಟರ್ ಆನಂದ್ ಅವರಿಗೆ ಸಂತೋಷ ತಂದಿದೆ ಎನ್ನಬಹುದು.

ಅವರೇ ಹೇಳುವಂತೆ ತಮ್ಮ ಮಗಳು ವಂಶಿಕಾಗೆ ನಟನೆಯಲ್ಲಿ ಮುಂದುವರಿಯುವ ಇಚ್ಚೆ ಇದ್ದರೆ ಅವಳ ಕನಸಿಗೆ ನಾವು ಅಡ್ಡಿ ಬರೋದಿಲ್ಲ ಎಂದು ತಿಳಿಸಿದ್ದಾರೆ. ಇನ್ನು ಈ ಲವ್ ಲಿ ಸಿನಿಮಾ ರೌಡಿಸಂ ಮತ್ತು ಲವ್ ಸಬ್ಜೆಕ್ಟ್ ಆಗಿದ್ದು, ವಸಿಷ್ಟ ಸಿಂಹ ಅವರು ಖಡಕ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಪೋಸ್ಟರ್ ಈಗಾಗಲೇ ಸಖತ್ ಕ್ರೇಜ಼್ ಹುಟ್ಟಿಸಿದೆ. ಈ ಲವ್ ಲೀ ಸಿನಿಮಾವನ್ನ ಮಫ್ತಿ ಚಿತ್ರದ ನಿರ್ದೇಶಕ ನರ್ತನ್ ಅವರೊಟ್ಟಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದ ಚೇತನ್ ಕೇಶವ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ನಾಯಕಿಯಾಗಿ ಜಾರ್ಖಂಡ್ ಮೂಲದ ಸ್ಟೆಫಿ ಪಟೇಲ್ ನಟಿಸುತ್ತಿದ್ದು ನಿರ್ಮಾಪಕ ರವೀಂದ್ರ ಕುಮಾರ್ ಲವ್ ಲೀ ಸಿನಿಮಾಗೆ ಬಂಡವಾಳ ಹೂಡಿಕೆ ಮಾಡುತ್ತಿದ್ದಾರೆ. ಈಗಾಗಲೇ ಮೊದಲ ಹಂತದ ಚಿತ್ರೀಕರಣ ಮುಗಿದಿದ್ದು, ಎರಡನೇ ಹಂತದ ಚಿತ್ರೀಕರಣ ಇದೇ ಸೆಪ್ಟೆಂಬರ್ 6ರಿಂದ ಆರಂಭವಾಗಲಿದೆ. ಈ ಹಂತದ ಚಿತ್ರೀಕರಣದಲ್ಲಿ ಬಾಲ ನಟಿ ವಂಶಿಕಾ ಕೂಡ ಭಾಗವಹಿಸಲಿದ್ದಾರೆ.

Leave a Reply

%d bloggers like this: