ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ತೆಲುಗು ಹಾಗೂ ಪಂಜಾಬಿ ನಟಿ

ಸ್ಯಾಂಡಲ್ ವುಡ್ ಬಹು ಬೇಡಿಕೆಯ ನಟರಾಗಿ ಭಾರಿ ಬಿಝಿ ಆಗಿರೋ ನಟ ಧನಂಜಯ್ ಇದೀಗ ಕೇವಲ ನಟ ಮಾತ್ರ ಅಲ್ಲ, ಸಾಹಿತಿ ಕೂಡ ಹೌದು. ಅದರ ಜೊತೆಗೆ ಸಿನಿಮಾ ನಿರ್ಮಾಪಕ ಕೂಡ ಆಗಿದ್ದಾರೆ. ಈಗಾಗಲೇ ಬಡವ ರಾಸ್ಕಲ್ ಅನ್ನೋ ಸಿನಿಮಾ ನಿರ್ಮಾಣ ಮಾಡಿ ಯಶಸ್ಸು ಪಡೆದಿದ್ದಾರೆ. ಇದೀಗ ಹೆಡ್-ಬುಷ್ ಅನ್ನೋ ಭೂಗತಲೋಕದ ಕಥೆಯಾಗಿರೋ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಹೆಡ್ ಬುಷ್ ಸಿನಿಮಾದಲ್ಲಿ ಡಾಲಿ ಧನಂಜಯ್ ಜಯರಾಜ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹೆಡ್ ಬುಷ್ ಸಿನಿಮಾ ಅಗ್ನಿ ಶ್ರೀಧರ್ ಬರೆದಿರೋ ಕಥೆಯಾಗಿದ್ದು, ಈ ಕಥೆಯನ್ನ ಶೂನ್ಯ ನಿರ್ದೇಶನ ಮಾಡಿದ್ದಾರೆ. ಡಾಲಿ ಧನಂಜಯ್ ಈ ಸಿನಿಮಾದಲ್ಲಿ ಜಯರಾಜ್ ಪಾತ್ರಕ್ಕಾಗಿ ಎಲ್ಲಾ ರೀತಿಯಾಗಿ ತಯಾರಿ ನಡೆಸಿ ನಟಿಸಿದ್ದಾರೆ.

ಭೂಗತ ಲೋಕದ ದೊರೆಯಾಗಿದ್ದ ಜಯರಾಜ್ ಅವರ ಪಾತ್ರದಲ್ಲಿ ಬೆಲ್ ಬಾಟಂ ಹಾಕಿ ಧನಂಜಯ್ ಮಿಂಚಿದ್ದಾರೆ. ಈಗಾಗಲೇ ಈ ಚಿತ್ರದ ಪೋಸ್ಟರ್ ಹಾಡು ಎಲ್ಲಾ ಕಡೆ ಸಖತ್ ಸೌಂಡ್ ಮಾಡುತ್ತಿದೆ. ಇದರ ನಡುವೆ ಧನಂಜಯ್ ತಾವು ಎಲ್ಲೇ ಹೋದರು ಕೂಡ ತಮ್ಮಹೆಡ್ ಬುಷ್ ಸಿನಿಮಾದ ಪ್ರಚಾರವನ್ನ ಅದ್ದೂರಿಯಾಗಿ ಮಾಡುತ್ತಿದ್ದಾರೆ. ಇತ್ತೀಚೆಗೆ ರಾಜ್ ಕಪ್ ಕ್ರಿಕೆಟ್ ಆಡಲು ದುಬೈಗೆ ಹೋಗಿದ್ದಾಗಲು ಕೂಡ ಜಯರಾಜ್ ಪಾತ್ರದಂತೆಯೇ ಬೆಲ್ ಬಾಟಂ ಪ್ಯಾಂಟ್ ಧರಿಸಿ ಹೋಗಿದ್ದಾರೆ. ಇಡೀ ಹೆಡ್ ಬುಷ್ ಸಿನಿಮಾದ ಪ್ರಚಾರಕ್ಕಾಗಿ ತಮ್ಮನ್ನ ತಾವು ಜಯರಾಜ್ ಪಾತ್ರವಾಗಿಯೇ ಬದಲಾಯಿಸಿಕೊಂಡು ಬೆಲ್ ಬಾಟಮ್ ಉಡುಪಿನಲ್ಲಿ ಓಡಾಡುತ್ತಿದ್ದಾರೆ. ಇನ್ನು ಇದೀಗ ಸುದ್ದಿ ಅಗ್ತಾ ಇರೋದು ಹೆಡ್ ಬುಷ್ ಸಿನಿಮಾದಲ್ಲಿ ಧನಂಜಯ್ ಬರ್ದಿರೋ ಅರೇಬಿಕ್ ಶೈಲಿಯ ಹಬೀಬಿ ರೆಟ್ರೋ ಸಾಂಗ್ ಮೂಲಕ.

    ಈ ಹಬೀಬಿ ಸಾಂಗ್ ಅನ್ನ ಧನಂಜಯ್ ಅವರೇ ಬರೆದಿದ್ದಾರೆ. ಈ ಹಾಡಿನಲ್ಲಿ ತೆಲುಗಿನ ಆರ್.ಆಕ್ಸ್100 ಸಿನ್ಮಾದಲ್ಲಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದ ನಟಿ ಪಾಯಲ್ ರಜಪೂತ್ ಬಿಂದಾಸ್ ಸ್ಟೆಪ್ ಹಾಕಿದ್ದಾರೆ. ರೆಟ್ರೋ ಶೈಲಿಯ ಈ ಹಬೀಬಿ ಸಾಂಗ್ ಇದೀಗ ರಿಲೀಸ್ ಆಗಿದ್ದು ಪಾಯಲ್ ರಜಪೂತ್ ಅವರ ಹಾಟ್ ಡ್ಯಾನ್ಸ್ಗೆ ಸಿನಿ ಪ್ರೇಕ್ಷಕರು ಫಿಧಾ ಆಗಿದ್ದಾರೆ. ಈ ಹಾಡಿನಲ್ಲಿ ಬಿಂದಾಸ್ ಬೋಲ್ಡ್ ಸ್ಟೆಪ್ ಆಕಿರೋ ಪಾಯಲ್ ರಜಪೂತ್ ಆರ್ ಎಕ್ಸ್100 ಸಿನಿಮಾದ ನಂತರ ಮತ್ತೇ ಹೆಡ್ ಬುಷ್ ಸಿನಿಮಾದಲ್ಲಿ ಪಡ್ಡೆ ಹುಡುಗರ ನಿದ್ದೆ ಗೆಡಿಸಲಿದ್ದಾರೆ ಅನ್ನಬಹುದು. ಡಾಲಿ ಧನಂಜಯ್, ವಸಿಷ್ಟ ಸಿಂಹ, ಲೂಸ್ ಮಾದ ಯೋಗಿ ಅಂತಹ ಸ್ಟಾರ್ ನಟರು ಇದೀಗ ರೌಡಿಗಳಾಗಿ ಹೆಡ್ ಬುಷ್ ಸಿನಿಮಾದಲ್ಲಿ ಆರ್ಭಟಿಸಲು ಇದೇ ಅಕ್ಟೋಬರ್ 21ರಂದು ಚಿತ್ರ ಮಂದಿರಗಳಿಗೆ ಬರುತ್ತಿದ್ದಾರೆ. ಹೆಡ್ ಬುಷ್ ಸಿನಿಮಾದ ಪ್ರಚಾರ ಕೂಡ ಭರ್ಜರಿ ಆಗಿದ್ದು, ಈ ಚಿತ್ರ ನೋಡಲು ಡಾಲಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

    Leave a Reply

    %d bloggers like this: