ಕನ್ನಡ ಚಿತ್ರರಂಗಕ್ಕೆ ಖಡಕ್ಕಾಗಿ ಎಂಟ್ರಿ ಕೊಟ್ಟ ಜನಾರ್ದನ ರೆಡ್ಡಿ ಅವರ ಪುತ್ರ, ವಿಭಿನ್ನವಾಗಿದೆ ಚಿತ್ರದ ಟೈಟಲ್

ರಾಜಕೀಯ ಕ್ಷೇತ್ರ ಮತ್ತು ಸಿನಿಮಾ ಕ್ಷೇತ್ರಕ್ಕೆ ಒಂದು ಅವಿನಾಭಾವ ಸಂಬಂಧ ಇದ್ದೇ ಇದೆ. ಹಾಗಾಗಿಯೇ ಇಂದು ಅನೇಕ ರಾಜಕಾರಣಿಗಳ ಮಕ್ಕಳು ಸಿನಿಮಾರಂಗಕ್ಕೆ ಪ್ರವೇಶ ಮಾಡುತ್ತಿದ್ದಾರೆ. ಅವರ ಸಾಲಿಗೆ ಇದೀಗ ಗಣಿಧಣಿ ಗಾಲಿ ಜನಾರ್ಧನ ರೆಡ್ಡಿ ಅವರ ಪುತ್ರ ಕೂಡ ಸೇರ್ಪಡೆ ಆಗಿದ್ದಾರೆ. ಹೌದು ಜನಾರ್ಧನ ರೆಡ್ಡಿ ಅವರ ಮಗ ಕಿರೀಟಿ ರೆಡ್ಡಿ ಸ್ಯಾಂಡಲ್ ವುಡ್ ಗೆ ಖಡಕ್ ಆಗಿ ಎಂಟ್ರಿ ಕೊಡುತ್ತಿದ್ದಾರೆ. ಕಿರೀಟಿ ರೆಡ್ಡಿ ತಮ್ಮ ಚೊಚ್ಚಲ ಸಿನಿಮಾವನ್ನೆ ಆಕ್ಷನ್ ಕಥಾ ಹಂದರ ಹೊಂದಿರೋ ಸಿನಿಮಾ ಆಯ್ಕೆ ಮಾಡಿಕೊಂಡಿದ್ದಾರೆ. ಈ ಸಿನಿಮಾ ಕನ್ನಡ ಸೇರಿದಂತೆ ತೆಲುಗು, ತಮಿಳು ಸೇರಿದಂತೆ ಪಂಚ ಭಾಷೆಗಳಲ್ಲಿ ಅದ್ದೂರಿಯಾಗಿ ತಯಾರಾಗಲಿದೆ ಎಂದು ತಿಳಿದು ಬಂದಿದೆ. ಕಿರೀಟಿ ರೆಡ್ಡಿ ಚೊಚ್ಚಲ ನಟನೆಯ ಸಿನಿಮಾವನ್ನ ವಾರಾಹಿ ಚಿತ್ರ ನಿರ್ಮಾಣ ಸಂಸ್ಥೆ ಅದ್ದೂರಿಯಾಗಿ ನಿರ್ಮಾಣ ಮಾಡುತ್ತಿದೆ.

ರಾಧಾಕೃಷ್ಣ ರೆಡ್ಡಿ ಅವರು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಆಕ್ಷನ್ ಸಿನಿಮಾ ಆಗಿರೋ ಈ ಚಿತ್ರಕ್ಕೆ ಇದೀಗ ‘ಜ್ಯೂನಿಯರ್’ ಎಂಬ ಟೈಟಲ್ ಫೈನಲ್ ಆಗಿದೆ. ಈಗಾಗಲೇ ಈ ಜ್ಯೂನಿಯರ್ ಸಿನಿಮಾದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಕಿರೀಟಿ ರೆಡ್ಡಿ ಅವರ ಜ್ಯೂನಿಯರ್ ಸಿನಿಮಾಗೆ ಅತಿದೊಡ್ಡ ಪ್ಲಸ್ ಪಾಯಿಂಟ್ ಅಂದರೆ ಈ ಚಿತ್ರಕ್ಕೆ ಟಾಲಿವುಡ್ ಸೂಪರ್ ಸ್ಟಾರ್ ಮ್ಯೂಸಿಕ್ ಡೈರೆಕ್ಟರ್ ದೇವಿ ಶ್ರೀ ಪ್ರಸಾದ್ ಅವರು ಮ್ಯೂಸಿಕ್ ಮಾಡ್ತಾ ಇದ್ದಾರೆ. ಅದೇ ರೀತಿಯಾಗಿ ಜ್ಯೂನಿಯರ್ ಪಕ್ಕಾ ಆಕ್ಷನ್ ಲವ್ ಎಂಟರ್ಟೈನ್ ಮೆಂಟ್ ಸಿನಿಮಾ ಆಗಿರೋದ್ರಿಂದ ಈ ಚಿತ್ರಕ್ಕೆ ಸಾಹಸ ನಿರ್ದೇಶಕರಾಗಿ ಸುಪ್ರಸಿದ್ದ ಫೈಟ್ ಮಾಸ್ಟರ್ ಪೀಟರ್ ಹೆನ್ ಸಾಹಸ ದೃಶ್ಯಗಳನ್ನ ಕಂಪೋಸ್ ಮಾಡ್ತಿದ್ದಾರೆ. ಕಿರೀಟಿ ರೆಡ್ಡಿ ಅವರು ಮೊದಲ ಬಾರಿಗೆ ನಾಯಕ ನಟರಾಗಿ ನಟಿಸುತ್ತಿದ್ದು, ಇವರಿಗೆ ಜೋಡಿಯಾಗಿ ಮುದ್ದು ಬೆಡಗಿ ಶ್ರೀ ಲೀಲಾ ನಟಿಸುತ್ತಿದ್ದಾರೆ. ಜ್ಯೂನಿಯರ್ ಸಿನಿಮಾದಲ್ಲಿ ಕ್ರೇಜಿ಼ಸ್ಟಾರ್ ವಿ.ರವಿಚಂದ್ರನ್, ಬಾಲಿವುಡ್ ಖ್ಯಾತ ನಟ ರಿತೇಶ್ ದೇಶಮುಖ್ ಮತ್ತು ಖ್ಯಾತ ನಟಿ ಜೆನಿಲಿಯಾ ಕಾಣಿಸಿಕೊಳ್ಳುತ್ತಿದ್ದಾರೆ.

Leave a Reply

%d bloggers like this: