ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಖ್ಯಾತ ಮಲಯಾಳಂ ನಟ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ 127ನೇ ಸಿನಿಮಾದಲ್ಲಿ ಮಾಲಿವುಡ್ ಸ್ಟಾರ್ ನಟ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ದಿಲ್ಲದೇ ಶಿವಣ್ಣನ ಹೊಸ ಸಿನಿಮಾ ಸಟ್ಟೇರಿದೆ. ಶಿವಣ್ಣನಿಗೆ ಆಕ್ಷನ್ ಕಟ್ ಹೇಳುತ್ತಿರೋ ಈ ನಿರ್ದೇಶಕ ಯಾರ್ ಗೊತ್ತಾ. ಈಗಾಗಲೇ ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ ಟೋಪಿವಾಲ ಅಂತ ಸಿನಿಮಾ ಮಾಡಿ ಗಮನ ಸೆಳೆದ ನಿರ್ದೇಶಕ ಆರ್ ಜೆ. ಶ್ರೀನಿ. ಆರ್.ಜೆ ಶ್ರೀನಿ ಈಗಾಗಲೇ ಶ್ರೀನಿವಾಸ ಕಲ್ಯಾಣ, ಬೀರ್ ಬಲ್ ಅಂತಹ ಸೂಪರ್ ಹಿಟ್ ಸಿನಿಮಾಗಳಲ್ಲಿ ನಿರ್ದೇಶಿಸಿ ನಟಿಸಿದ ಆರ್ ಜೆ ಶ್ರೀನಿ ಅವರು ಇದೀಗ ಶಿವಣ್ಣನಿಗೆ ಆಕ್ಷನ್ ಕಟ್ ಹೇಳಲು ಹೊರಟಿದ್ದಾರೆ. ಇನ್ನು ಈ ಸಿನಿಮಾದ ಹೆಸರು ಘೋಸ್ಟ್. ಇದು ಶಿವಣ್ಣನಿಗೆ 127ನೇ ಸಿನಿಮಾವಾಗಿದೆ.

ಈ ಘೋಸ್ಟ್ ಸಿನಿಮಾದಲ್ಲಿ ಶಿವಣ್ಣ ಅವರ ಜೊತೆ ಮಾಲಿವುಡ್ ಸ್ಟಾರ್ ನಟ ಜಯರಾಂ ಕೂಡ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಈಗಾಗಲೇ ಮಲೆಯಾಳಂನಲ್ಲಿ ಸೂಪರ್ ಸ್ಟಾರ್ ಆಗಿರೋ ಜಯರಾಂ ಅವರು ತೆಲುಗು, ತಮಿಳು ಮತ್ತು ಹಿಂದಿ ಭಾಷೆಯಲ್ಲಿಯೂ ಕೂಡ ನಟಿಸಿದ್ದಾರೆ. ಇದೀಗ ಘೋಸ್ಟ್ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೂ ಕೂಡ ಜಯರಾಂ ಎಂಟ್ರಿ ಆಗಿದ್ದಾರೆ. ಕನ್ನಡದಲ್ಲಿ ವರ್ಷಪೂರ್ತಿ ಬಿಝಿ಼ ಇರೋ ನಟ ಅಂದರೆ ಅದು ಶಿವಣ್ಣ. ಈಗಾಗಲೇ ಶಿವಣ್ಣ ಅವರ ಹೋಂ ಬ್ಯಾನರ್ ನಲ್ಲಿ ವೇದಾ ಸಿನಿಮಾ ತಯಾರಾಗುತ್ತಿದೆ. ಈ ಚಿತ್ರಕ್ಕೆ ಎ.ಹರ್ಷ ಆಕ್ಷನ್ ಕಟ್ ಹೇಳ್ತಿದ್ದಾರೆ. ಶಿವಣ್ಣ ಅವರು ಸದ್ಯಕ್ಕೆ ನೀ ಸಿಗೋವರೆಗೂ ಅನ್ನೋ ಸಿನಿಮಾ ಮಾಡ್ತಿದ್ದಾರೆ. ಇದು ಅವರ 124ನೇ ಸಿನಿಮಾ.

ಶಿವರಾಜ್ ಕುಮಾರ್ ಅವರು ನಟಿಸಿದ ಬೈರಾಗಿ ಸಿನಿಮಾ ಸೂಪರ್ ಹಿಟ್ ಆಯ್ತು. ಈ ಚಿತ್ರದ ನಂತರ ಶಿವಣ್ಣ ಅವರ ಮುಂದಿನ ಸಿನಿಮಾ ಯಾವ್ದು ಅನ್ನೋಷ್ಟರಲ್ಲಿ ಮತ್ತೊಂದು ಸಿನಿಮಾ ಸದ್ದಿಲ್ಲದೇ ಸಟ್ಟೇರಿದೆ. ಈ ಘೋಸ್ಟ್ ಸಿನಿಮಾಗೆ ಸಂದೇಶ್ ನಾಗರಾಜ್ ಅವರು ಬಂಡವಾಳ ಹೂಡಿಕೆ ಮಾಡುತ್ತಿದ್ದು, ಆರ್ ಜೆ ಶ್ರೀನಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸ್ಯಾಂಡಲ್ ವುಡ್ ಬಿಝಿಯೆಸ್ಟ್ ನಟರಲ್ಲಿ ಅಗ್ರಸ್ಥಾನ ಪಡೆಯುವ ಶಿವಣ್ಣ ಅವರ ಕೈಯಲ್ಲಿ ಘೋಸ್ಟ್ ಸಿನಿಮಾ ಸೇರಿದಂತೆ ಏಳರಿಂದ ಎಂಟು ಸಿನಿಮಾಗಳು ಇವೆ ಎಂದು ತಿಳಿದು ಬಂದಿದೆ. ಒಟ್ಟಾರೆಯಾಗಿ ಘೋಸ್ಟ್ ಸಿನಿಮಾ ಒಂದು ಹಾರರ್ ಥ್ರಿಲ್ಲರ್ ಸಸ್ಪೆನ್ಸ್ ಕಥಾಹಂದರ ಹೊಂದಿರಲಿದೆ ಅನ್ನೋದು ಟೈಟಲ್ ಕೇಳಿದಾಕ್ಷಣ ಅನಿಸೋದು ಸಹಜ, ಆದರೆ ಅದರ ನಿಜವಾದ ಏನು ಅನ್ನೋದು ಮಾತ್ರ ಮುಂದಿನ ದಿನಗಳಲ್ಲಿ ತಿಳಿಯಬೇಕಾಗಿದೆ.

Leave a Reply

%d bloggers like this: