ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಮತ್ತೊಬ್ಬ ನಟಿ

ಸ್ಯಾಂಡಲ್ ವುಡ್ ಗೆ ಮತ್ತೊಬ್ಬ ಬಟ್ಟಲುಗಣ್ಣುಚೆಲುವೆ ಎಂಟ್ರಿಯಾಗಿದೆ. ಹೌದು ಈಗಾಗಲೇ ಬಟ್ಟಲುಗಣ್ಣು ಚೆಲುವೆಯಾಗಿ ನಟಿ ಪ್ರಣೀತಾ ಸುಭಾಷ್ ಅವರು ಸಿನಿ ರಸಿಕರ ಮನ ಗೆದ್ದು ಚಂದನವನದಲ್ಲಿ ತಮ್ಮದೇಯಾದ ಛಾಪನ್ನು ಮೂಡಿಸಿ ಜನಪ್ರಿಯ ನಟಿಯಾಗಿ ಹೆಸರುವಾಸಿಯಾಗಿದ್ದಾರೆ. ಇದೀಗ ಈಗಾಗಲೇ ತೆಲುಗು, ತಮಿಳು ಭಾಷೆಯ ಸಿನಿಮಾಗಳಲ್ಲಿ ಆಫರ್ ಗಿಟ್ಟಿಸಿಕೊಂಡು ಅಲ್ಲಿಯೂ ಸಹ ಫೇಮಸ್ ಆಗಲು ಹೊರಟಿರೋ ನಮ್ಮ ಕನ್ನಡತಿ ನಟಿಯಾಗಿರೋ ಇಶಾನ ನಮ್ಮ ಕನ್ನಡ ಸಿನಿಮಾರಂಗಕ್ಕೂ ಕೂಡಾ ಕಾಲಿಟ್ಟಿದ್ದಾರೆ. ಹೌದು ಕನ್ನಡದ ಅನೇಕ ಸಿನಿಮಾಗಳಿಗೆ ಗೀತೆ ರಚಿಸಿ ಅಪಾರ ಜನ ಮೆಚ್ಚುಗೆ ಪಡೆದ ಹಾಡುಗಳ ಸರದಾರ ಆಗಿರೋ ಖ್ಯಾತ ಚಿತ್ರ ಸಾಹಿತಿ ಗೌಸ್ ಪೀರ್ ಅವರು ಇದೀಗ ಡೈರೆಕ್ಷನ್ ಮಾಡುತ್ತಿರೋ ಹೊಸ ಚಿತ್ರಕ್ಕೆ ನಟಿ ಇಶಾನ ನಾಯಕಿ ಆಗಿ ಆಯ್ಕೆ ಆಗಿದ್ದಾರೆ.

ನಟಿ ಇಶಾನ ಅವರು ಮೂಲತಃ ಉತ್ತರ ಕರ್ನಾಟಕದವರು. ಇವರ ತಂದೆ ವೈದ್ಯರಾಗಿದ್ದು, ಇವರ ಕುಟುಂಬ ಬೆಂಗಳೂರಿನಲ್ಲಿಯೇ ವಾಸವಾಗಿದ್ದಾರೆ. ಬಿಕಾಂ ಎಂಬಿಎ ಪದವೀಧರೆ ಆಗಿರೋ ಇಶಾನ ಅವರಿಗೆ ಕಾಲೇಜು ದಿನಗಳಿಂದಾನೂ ಸಿನಿಮಾಗಳಲ್ಲಿ ಆಫರ್ ಬರ್ತಿತ್ತಂತೆ. ಆದರೆ ಮೊದಲು ಓದಿಗೆ ಪ್ರಾಶಸ್ತ್ಯ ನೀಡಿ, ತಮ್ಮ ವಿಧ್ಯಾಭ್ಯಾಸ ಮುಗಿಸಿ ಇದೀಗ ಬಣ್ಣದ ಲೋಕಕ್ಕೆ ಹೆಜ್ಜೆ ಇಟ್ಟಿದ್ದಾರೆ ನಟಿ ಇಶಾನ. ಇಶಾನ ಅವರು ಈಗಾಗಲೇ ತಮಿಳಿನಲ್ಲಿ ರೇಟ್ಲ ಎಂಬ ಸಿನಿಮಾದಲ್ಲಿ ನಟಿಸಿದ್ದು, ತೆಲುಗಿನಲ್ಲಿ ಕರ್ಮ ಅನ್ನೋ ಚಿತ್ರ ಕೂಡ ಮಾಡಿದ್ದಾರೆ. ಇದೀಗ ಕನ್ನಡದಲ್ಲಿಯೂ ಸಹ ಅವಕಾಶ ಪಡೆದುಕೊಂಡು ಚಂದನವನಕ್ಕೆ ಇಶಾನ ಪಾದಾರ್ಪಣೆ ಮಾಡ್ತಿದ್ದಾರೆ.

ಗೌಸ್ ಪೀರ್ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರೋ ಚಿತ್ರಕ್ಕೆ ನಾಯಕರಾಗಿ ಪ್ರಭುದೇವ ಅವರು ನಟಿಸುತ್ತಿದ್ದಾರೆ. ಈ ಸಿನಿಮಾಗೆ ಇನ್ನೂ ಕೂಡ ಶೀರ್ಷಿಕೆ ಅಂತಿಮವಾಗಿಲ್ಲ. ಇನ್ನೂ ಈ ಚಿತ್ರವನ್ನ ಗೌಸ್ ಪೀರ್ ಅವರು ತಮ್ಮ ವಿ ಕ್ಯಾನ್ ಎಂಟರ್ಟೈನ್ ಬ್ಯಾನರ್ ಅಡಿಯಲ್ಲಿ ತಯಾರು ಮಾಡುತ್ತಿದ್ದಾರೆ. ನಮ್ಮ ಕನ್ನಡತಿ ನಟಿ ಇಶಾನ ಅವರು ತೆಲುಗು, ತಮಿಳು ಭಾಷೆಯ ಸಿನಿಮಾಗಳಲ್ಲಿ ನಟಿಸೋದರ ಜೊತೆಗೆ ಈಗ ನಮ್ಮ ಕನ್ನಡ ಸಿನಿಮಾಗಳಲ್ಲಿಯೂ ಕೂಡ ಅವಕಾಶ ಗಿಟ್ಟಿಸಿಕೊಂಡಿರೋದು ಅವರಿಗೆ ಸಖತ್ ಸಂತೋಷವಾಗುತ್ತಿದೆಯಂತೆ.

Leave a Reply

%d bloggers like this: