ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಜಮೀರ್ ಖಾನ್ ಅವರ ಪುತ್ರ, ಚಿತ್ರದ ರಿಲೀಸ್ ಡೇಟ್ ಘೋಷಣೆ

ಸ್ಯಾಂಡಲ್ ವುಡ್ ಗೆ ಮತ್ತೊಬ್ಬ ನಟನ ಎಂಟ್ರಿ ಆಗಿದೆ. ಇವರ ಸ್ಮಾರ್ಟ್ ಲುಕ್ ಅಂಡ್ ಆಕ್ಟಿಂಗ್ ಕಂಡು ಈಗಾಗಲೇ ಸಿನಿ ಪ್ರೇಕ್ಷಕರು ಫಿಧಾ ಆಗಿದ್ದಾರೆ. ಯಾರು ಯುವ ನಟ ಅನ್ನೋದು ನಿಮಗೆ ಈಗಾಗಲೇ ಕ್ಲ್ಯೂ ಸಿಕ್ಕೇ ಸಿಕ್ಕಿರುತ್ತದೆ. ಆ ಯುವ ನಟ ಬೇರಾರು ಅಲ್ಲ
ಅವರೇ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ಅವರ ಪುತ್ರ ಝೈದ್ ಖಾನ್. ಝೈದ್ ಖಾನ್ ಅವರ ಚೊಚ್ಚಲ ಚಿತ್ರವೇ ಪ್ಯಾನ್ ಇಂಡಿಯಾ ಸಿನಿಮಾ ಆಗ್ತಿದೆ. ಹೌದು ಝೈದ್ ಖಾನ್ ನಟನೆಯ ಬನಾರಸ್ ಚಿತ್ರದ ಟ್ರೈಲರ್ ಇತ್ತೀಚೆಗೆ ಬೆಂಗಳೂರಿನಲ್ಲಿ ಅದ್ದೂರಿಯಾಗಿ ಲಾಂಚ್ ಆಗಿದೆ. ಈ ಟ್ರೈಲರ್ ಲಾಂಚ್ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಕ್ರೇಜಿ಼ ಸ್ಟಾರ್ ವಿ.ರವಿಚಂದ್ರನ್ ಅವರು ಆಗಮಿಸಿ ಚಿತ್ರಕ್ಕೆ ಶುಭ ಹಾರೈಸಿದ್ದಾರೆ.

ಒಲವೇ ಮಂದಾರ, ಟೋನಿ, ಬ್ಯೂಟಿಫುಲ್ ಮನಸುಗಳು, ಬೆಲ್ ಬಾಟಮ್ ಅಂತಹ ಸೂಪರ್ ಹಿಟ್ ಸಿನಿಮಾಗಳನ್ನ ನೀಡಿರೋ ನಿರ್ದೇಶಕ ಜಯತೀರ್ಥ ಅವರು ಈ ಬನಾರಸ್ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಬನಾರಸ್ ಸಿನಿಮಾದ ಮೆಲೋಡಿ ಸಾಂಗ್ ರಿಲೀಸ್ ಆದಾಗ ಈ ಸಿನಿಮಾ ಒಂದು ಪ್ಯೂರ್ ರೊಮ್ಯಾಂಟಿಕ್ ಲವ್ ಸ್ಟೋರಿ ಇರ್ಬೋದು ಅಂತ ಹೇಳಲಾಗ್ತಿತ್ತು. ಆದರೆ ಇದೀಗ ಬನಾರಸ್ ಸಿನಿಮಾದ ಟ್ರೈಲರ್ ನೋಡಿದಾಗ ಈ ಚಿತ್ರ ಕೇವಲ ಲವ್ ಸ್ಟೋರಿ ಮಾತ್ರ ಅಲ್ಲ ಜೊತೆಗೆ ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಜಾನರ್ ಸಿನಿಮಾ ಕೂಡ ಹೌದು ಎಂದು ತಿಳಿಯಬಹುದಾಗಿದೆ. ಇನ್ನು ಬನಾರಸ್ ಸಿನಿಮಾದಲ್ಲಿ ಝೈದ್ ಖಾನ್ ಅವರಿಗೆ ಜೋಡಿಯಾಗಿ ಸೋನಲ್ ಮೊಂಥೆರೋ ನಟಿಸಿದ್ದಾರೆ. ಈ ಚಿತ್ರ ಇದೇ ನವೆಂಬರ್ ತಿಂಗಳ 4ಕ್ಕೆ ಕನ್ನಡ, ತೆಲುಗು, ತಮಿಳು, ಮಲೆಯಾಳಂ ಮತ್ತು ಹಿಂದಿ ಭಾಷೆಯಲ್ಲಿ ದೇಶಾದ್ಯಂತ ಅದ್ದೂರಿಯಾಗಿ ರಿಲೀಸ್ ಆಗುತ್ತಿದೆ. ಬನಾರಸ್ ಸಿನಿಮಾಗೆ ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ ಮಾಡಿದ್ದು, ಎನ್.ಕೆ ಪ್ರೊಡಕ್ಷನ್ಸ್ ಅಡಿಯಲ್ಲಿ ತಿಲಕ್ ರಾಜ್ ಬಲ್ಲಾಳ್ ಬಂಡವಾಳ ಹೂಡಿದ್ದಾರೆ.