ಕನ್ನಡ ಚಿತ್ರರಂಗದಲ್ಲಿ ಈ ವರ್ಷ ನೂರು ಕೋಟಿ ಕ್ಲಬ್ ಸೇರಿದ ನಟರಿವರು

ಸ್ಯಾಂಡಲ್ ವುಡ್ ಗೆ ಈ 2022ರ ವರ್ಷ ಸುವರ್ಣ ಯುಗ ಅಂತಾನೇ ಕರೆಯಬಹುದು. ಯಾಕಂದ್ರೆ ಕೆಜಿಎಫ್ ಭಾಗ1 ಕನ್ನಡ ಸಿನಿಮಾರಂಗಕ್ಕೆ ಪ್ಯಾನ್ ಇಂಡಿಯಾ ಎಂಬ ಒಂದು ಹೊಸ ಬುನಾದಿ ಹಾಕಿಕೊಟ್ಟು ಕನ್ನಡ ಸಿನಿಮಾಗಳಿಗೆ ಮಾರುಕಟ್ಟೆಯನ್ನ ವಿಸ್ತರಣೆ ಮಾಡಿಕೊಟ್ಟಿತು. ಕೆಜಿಎಫ್ ನಂತರ ಕೆಜಿಎಫ್2, ಜೇಮ್ಸ್, 777 ಚಾರ್ಲಿ, ವಿಕ್ರಾಂತ್ ರೋಣ, ಈಗ ಕಾಂತಾರ ಈ ಎಲ್ಲಾ ಸಿನಿಮಾಗಳು ಪ್ಯಾನ್ ಇಂಡಿಯಾಗಳಾಗಿ ಭಾರಿ ಸೌಂಡ್ ಮಾಡಿದವು. ಅದರಲ್ಲೂ ರಾಕಿಂಗ್ ಸ್ಟಾರ್ ಯಶ್ ಅವರ ಕೆಜಿಎಫ್2 ಸಿನಿಮಾ ಅಂತೂ ಕನ್ನಡ ಚಿತ್ರರಂಗದಲ್ಲಿ ಒಂದು ಹೊಸ ಮೈಲಿಗಲ್ಲನ್ನ ಸೃಷ್ಟಿ ಮಾಡಿತು. ಈ ಸಿನಿಮಾ ಭಾರತೀಯ ಚಿತ್ರರಂಗದ ಬಾಕ್ಸ್ ಆಫೀಸ್ ನಲ್ಲಿ ಬರೋಬ್ಬರಿ 1400 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ದಾಖಲೆ ನಿರ್ಮಿಸಿತು.

ಮತ್ತೊಂದು ಗಮನಾರ್ಹವಾದ ದಾಖಲೆ ಅಂದರೆ ಬಾಲಿವುಡ್ ನಲ್ಲಿ ಅಲ್ಲಿನ ಸ್ಟಾರ್ ನಟರ ಸಿನಿಮಾಗಳೇ ಮಕಾಡೆ ಮಲಿಗಿದ್ದ ಸಂಧರ್ಭದಲ್ಲಿ ಯಶ್ ಅವರ ಕೆಜಿಎಫ್2 ಸಿನಿಮಾ ಬಾಲಿವುಡ್ ನಲ್ಲಿ ಬರೋಬ್ಬರಿ 400 ಕೋಟಿಯಷ್ಟು ಗಳಿಕೆ ಮಾಡಿದ್ದು ಅಲ್ಲಿನ ಸ್ಟಾರ್ ನಟ ನಟಿಯರು ನಿರ್ದೇಶಕರು ನಿಬ್ಬೆರಗಾಗುವಂತೆ ಮಾಡಿತು. ಅದಲ್ಲದೆ ನಮ್ಮ ರಕ್ಷಿತ್ ಶೆಟ್ಟಿ ಅವರ 777 ಚಾರ್ಲಿ ಸಿನಿಮಾ ಕೂಡ ಪಂಚಭಾಷೆಗಳಲ್ಲಿ ರಿಲೀಸ್ ಆಗಿ ಸರಿ ಸುಮಾರು 150 ಕೋಟಿಯಷ್ಟು ಗಳಿಕೆ ಮಾಡಿತು. ಇನ್ನು ಕಿಚ್ಚ ಸುದೀಪ್ ಅವರ ವಿಕ್ರಾಂತ್ ರೋಣ ಸಿನಿಮಾ ಕೂಡ ಪ್ರಪಂಚದಾದ್ಯಂತ ರಿಲೀಸ್ ಆಗಿ ಬರೋಬ್ಬರಿ 160 ಕೋಟಿಯಷ್ಟು ಕಲೆಕ್ಷನ್ ಮಾಡಿತು.

ಇನ್ನು ಅಪ್ಪು ಅವರು ನಾಯಕರಾಗಿ ನಟಿಸಿದ ಕೊನೆಯ ಸಿನಿಮಾ ಆಗಿದ್ದ ಜೇಮ್ಸ್ ಸಿನಿಮಾ ಕೂಡ ಬರೋಬ್ಬರಿ ನೂರು ಐವತ್ತೊಂದು ಕೋಟಿ ಕಲೆಕ್ಷನ್ ಮಾಡುವ ಮೂಲಕ ಸದ್ದು ಮಾಡಿತು. ಇತ್ತ ಈಗ ರಿಷಬ್ ಶೆಟ್ಟಿ ಅವರ ಕಾಂತಾರ ಸಿನಿಮಾ ಕೂಡ ಪ್ಯಾನ್ ಇಂಡಿಯಾ ಸಿನಿಮಾ ಆಗಿ ರಿಲೀಸ್ ಆಗಿದ್ದು, ಇದೀಗ ಈ ಕಾಂತಾರ ಸಿನಿಮಾ ನೂರು ಕೋಟಿಗೂ ಅಧಿಕ ಗಳಿಕೆ ಮಾಡಿ ಗಲ್ಲಾ ಪೆಟ್ಟಿಗೆಯಲ್ಲಿ ನಿರೀಕ್ಷೆಗೂ ಮೀರಿ ದಾಖಲೆಯ ಮಟ್ಟದಲ್ಲಿ ಕಲೆಕ್ಷನ್ ಮಾಡುತ್ತಿದೆ. ಒಟ್ಟಾರೆಯಾಗಿ ಪರಭಾಷೆಯ ಸಿನಿಮಾ ಮೇಕರ್ಸ್ ನಮ್ಮ ಕನ್ನಡ ಸಿನಿಮಾಗಳ ಹವಾ ಕಂಡು ಈ ವರ್ಷ ಭಾರಿ ದಿಗ್ಬ್ರಮೆ ಆಗಿದ್ದಾರೆ ಅಂದರೆ ತಪ್ಪಾಗಲಾರದು.

Leave a Reply

%d bloggers like this: