ಕನ್ನಡ ಚಿತ್ರರಂಗದ ನಟ ‘ಓಂ ಪ್ರಕಾಶ್ ರಾವ್’ ಈಗಿನ ಹೆಂಡತಿ ನಿಜಕ್ಕೂ ಯಾರು ಗೊತ್ತಾ? ನೋಡಿ ಒಮ್ಮೆ..

ಸ್ಯಾಂಡಲ್ ವುಡ್ ಖ್ಯಾತ ಆಕ್ಷನ್ ಡೈರೆಕ್ಟರ್ ಓಂ ಪ್ರಕಾಶ್ ರಾವ್ ಅಂದಾಕ್ಷಣ ಒಮ್ಮೆಲೆ ಮೈ ರೋಮಾಂಚನವಾಗುತ್ತದೆ. ಹೌದು ಏಕೆಂದರೆ ಅವರು ಮಾಡಿದಂತಹ ಸಿನಿಮಾಗಳೇ ಆ ರೀತಿಯಿವೆ. ಓಂ ಪ್ರಕಾಶ್ ರಾವ್ ಕೇವಲ ನಿರ್ದೇಶಕ ಮಾತ್ರ ಅಲ್ಲ. ಒಬ್ಬ ಉತ್ತಮ ನಟ ಮತ್ತು ನಿರ್ಮಾಪಕ ಕೂಡ ಹೌದು. ಇವರು ನಿರ್ದೇಶನ ಮಾಡಿದ ಸಿನಿಮಾಗಳು ಬಹುತೇಕ ರೋಚಕ ಸಾಹಸಮಯ ಚಿತ್ರಗಳೇ. 1994 ರಲ್ಲಿ ಪಾಳೆಗಾರ ಎಂಬ ಸಿನಿಮಾದ ಮೂಲಕ ಓಂ ಪ್ರಕಾಶ್ ರಾವ್ ಡೈರೆಕ್ಷನ್ ಕ್ಯಾಪ್ ತೊಟ್ಟರು. ಓಂ ಪ್ರಕಾಶ್ ರಾವ್ ತಮ್ಮ ಮೊದಲ ನಿರ್ದೇಶನದ ಪಾಳೆಗಾರ ಚಿತ್ರದಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ಅವರಿಗೆ ಆಕ್ಶನ್ ಕಟ್ ಹೇಳಿ ತಕ್ಕ ಮಟ್ಟಿಗೆ ಒಳ್ಳೆಯ ಹೆಸರು ಗಳಿಸುತ್ತಾರೆ. ಓಂ ಪ್ರಕಾಶ್ ರಾವ್ ಕನ್ನಡದ ಸುಪ್ರಸಿದ್ದ ಹಿರಿಯ ಹಾಸ್ಯ ನಟ ಎನ್.ಎಸ್‌.ರಾವ್ ಮತ್ತು ಯಶೋದಮ್ಮ ದಂಪತಿಗಳ ಪುತ್ರ. ತನ್ನ ತಂದೆ ಎನ್‌. ಎಸ್.ರಾವ್ ಅವರು ಸಿನಿಮಾದಲ್ಲಿ ಮಿಂಚುತ್ತಿದ್ದನ್ನ ಕಂಡ ಓಂ ಪ್ರಕಾಶ್ ರಾವ್ ಅವರು ತಾನೂ ಕೂಡ ಸಿನಿಮಾ ಕ್ಷೇತ್ರದಲ್ಲಿ ಮಿಂಚಬೇಕು ಎಂಬ ಆಸೆ ಹೊಂದುತ್ತಾರೆ‌.

ಆದರೆ ತೆರೆಯ ಮೇಲೆ ಇಲ್ಲದೆ ತೆರೆಯ ಹಿಂದೆ ಸೂತ್ರಧಾರನಾಗಿ ಚಿತ್ರ ನಿರ್ದೇಶನ ಮಾಡುತ್ತಾರೆ. ಇವರ ನಿರ್ದೇಶನದ ಬಹುತೇಕ ಆಕ್ಷನ್ ಸಿನಿಮಾಗಳು ಸೂಪರ್ ಹಿಟ್ ಆಗಿವೆ. ಅವುಗಳಲ್ಲಿ ಪ್ರಮುಖವಾಗಿ ಲಾಕಪ್ ಡೆತ್, ಸಿಂಹಾದ್ರಿಯ ಸಿಂಹ, ಎ.ಕೆ.47, ಕಲಾಸಿಪಾಳ್ಯ, ಅಯ್ಯ, ಮಂಡ್ಯ,ಅಣ್ಣಾವ್ರು, ಹುಬ್ಬಳಿ,ಭೀಮಾ ತೀರದಲ್ಲಿ, ಹುಚ್ಚ, ಇವುಗಳ ಜೊತೆಗೆ ಲವ್ ಸಬ್ಜೆಕ್ಟ್ ಸಿನಿಮಾಗಳನ್ನ ಕೂಡ ನಿರ್ದೇಶನ ಮಾಡಿ ಯಶಸ್ವಿಯಾಗಿದ್ದಾರೆ ನಿರ್ದೇಶಕ ಓಂ ಪ್ರಕಾಶ್ ರಾವ್. ಕೇವಲ ನಿರ್ದೇಶನ ಮಾತ್ರ ಅಲ್ಲದೆ ಓಂ ಪ್ರಕಾಶ್ ರಾವ್ ನಟನೆಯಲ್ಲಿಯೂ ಕೂಡ ಕನ್ನಡ ಸಿನಿ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಹೌದು ಡಕೋಟ ಎಕ್ಸ್ ಪ್ರೆಸ್ ಚಿತ್ರದಲ್ಲಿ ರಾಕ್ ಲೈನ್ ವೆಂಕಟೇಶ್ ಅವರೊಂದಿಗಿನ ಜುಗಲ್ ಬಂದಿಯಲ್ಲಿ ಇವರ ಹಾಸ್ಯ ನಟನೆಗೆ ಮನ ಸೋಲದವರೇ ಇಲ್ಲ ಎನ್ನಬಹುದು. ಇಂದಿಗೂ ಕೂಡ ಓಂ ಪ್ರಕಾಶ್ ರಾವ್ ಅಂದಾಕ್ಷಣ ಈ ಡೋಕೋಟ ಎಕ್ಸ್ ಪ್ರೆಸ್ ಸಿನಿಮಾದಲ್ಲಿನ ಸುಂದರ ಪಾತ್ರ ಕಣ್ಮುಂದೆ ಬಂದೋಗುತ್ತದೆ.

ಇದು ವರೆಗೂ ಓಂ ಪ್ರಕಾಶ್ ರಾವ್ ಅವರು ಇಪ್ಪತ್ತೇದಕ್ಕೂ ಅಧಿಕ ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿದ್ದು, ಹತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವುಗಳಲ್ಲಿ ಒಂದೆರಡು ಚಿತ್ರಗಳಲ್ಲಿ ನಾಯಕ ನಟರಾಗಿ ಅಭಿನಯಿಸಿದ್ದಾರೆ. ಸದ್ಯಕ್ಕೆ ಸಚ್ಚಿದಾನಂದ ಎಂಬ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ. ಇದರ ಜೊತೆಗೆ ಮತ್ತೊಂದು ಹೆಸರಿಡದ ಚಿತ್ರಕ್ಕೂ ಕೂಡ ಓಂ ಪ್ರಕಾಶ್ ರಾವ್ ಆಕ್ಷನ್ ಕಟ್ ಹೇಳುತ್ತಿದ್ದಾರಂತೆ. ಇನ್ನು ಈ ಎರಡು ಚಿತ್ರದಲ್ಲಿಯೂ ಹೊಸ ನಾಯಕ ಮತ್ತು ನಾಯಕಿಯನ್ನ ಪರಿಚಯಿಸುತ್ತಿದ್ದಾರೆ. ಇನ್ನು ನಟ, ನಿರ್ದೇಶಕ, ನಿರ್ಮಾಪಕ ಓಂ ಪ್ರಕಾಶ್ ಅವರ ವೈಯಕ್ತಿಕ ಜೀವನದ ಬಗ್ಗೆ ತಿಳಿಯುವುದಾದರೆ ಖ್ಯಾತ ನಟಿ ರೇಖಾ ದಾಸ್ ಅವರೊಂದಿಗೆ ಮದುವೆ ಆಗಿ ಇದೀಗ ಡಿವೋರ್ಸ್ ಕೂಡ ಆಗಿದೆ. ಇವರಿಗೆ ಒಬ್ಬ ಹೆಣ್ಣು ಮಗಳು ಕೂಡ ಇದ್ದಾರೆ ಅವರೇ ನಟಿ ಶ್ರಾವ್ಯ. ಇನ್ನು ಓಂ ಪ್ರಕಾಶ್ ಅವರಿಗೆ ಎರಡನೇ ಮದುವೆ ಡೆನಿಷಾ ಎಂಬುವರೊಟ್ಟಿಗೆ ಆಗಿದ್ದು ಇವರಿಗೂ ಕೂಡ ಗಣೇಶ್, ಸುಬ್ರಮಣಿ ಮತ್ತು ತ್ರಿಶಾ ಎಂಬ ಮೂವರು ಮಕ್ಕಳಿದ್ದಾರೆ.

Leave a Reply

%d bloggers like this: