ಕನ್ನಡ ಚಿತ್ರರಂಗದ ಖ್ಯಾತ ಬಾಲ ಕಲಾವಿದೆ ಈಗ ಐಎಎಸ್ ಅಧಿಕಾರಿ! ಯಾರದು?

ಈ ಬಾಲ ಕಲಾವಿದೆ 100 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದರು ಮತ್ತು ಕಲ್ಯಾಣ್ ಕುಮಾರ್, ಶಶಿಕುಮಾರ್, ರಮೇಶ್, ಉಪೇಂದ್ರ ಮತ್ತು ಇತರ ಪ್ರಸಿದ್ಧ ನಟರೊಂದಿಗೆ ನಟಿಸಿದ್ದಾರೆ. ಬಾಲ ಕಲಾವಿದೆಯಾಗಿ ಅವರ ಅಭಿನಯಕ್ಕಾಗಿ ಅವರು ಹಲವಾರು ಪ್ರಶಸ್ತಿಗಳನ್ನು ಪಡೆದರು. ಅವರು ತಮ್ಮ ಗಮನಾರ್ಹ ನಟನಾ ಕೌಶಲ್ಯಕ್ಕಾಗಿ ರಾಷ್ಟ್ರೀಯ ಮಕ್ಕಳ ಪ್ರಶಸ್ತಿ ಮತ್ತು ರಾಜ್ಯ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಗಂಗಾ ಯಮುನಾ ಸಿನಿಮಾದಲ್ಲಿ ಶಿವಣ್ಣ ಹಾಗೂ ಮಾಲಾಶ್ರೀಯರ ಮುದ್ದು ಮಗಳಾಗಿ ಅಭಿನಯಿಸಿದ್ದ ಬಾಲನಟಿ ನಿಮಗೆ ನೆನಪಿದ್ದಾರಾ? ಆ ಹುಡುಗಿಯ ಹೆಸರು ಕೀರ್ತನ.

ಅಂದು ಬಾಲನಟಿಯಾಗಿದ್ದ ಕೀರ್ತನ ಇಂದು ಎಷ್ಟೆಲ್ಲಾ ಸಾಧನೆ ಮಾಡಿದ್ದಾರೆ ಗೊತ್ತಾ. ಒಂದು ಕಾಲದಲ್ಲಿ ಬಾಲ ಕಲಾವಿದೆಯಾಗಿ ತನ್ನ ಸಿನಿಮಾ ಮತ್ತು ಟಿವಿ ಕಾರ್ಯಕ್ರಮಗಳ ಮೂಲಕ ಕನ್ನಡ ವೀಕ್ಷಕರನ್ನು ರಂಜಿಸಿದ ಎಚ್‌ಎಸ್ ಕೀರ್ತನಾ ಈಗ ಐಎಎಸ್ ಅಧಿಕಾರಿಯಾಗಿ ಬೆಳೆದಿದ್ದಾರೆ  . ಕೀರ್ತನಾ ಅವರು 15 ನೇ ವಯಸ್ಸಿನವರೆಗೆ ಕನ್ನಡ ಚಿತ್ರರಂಗದಲ್ಲಿ ತುಂಬಾ ಸಕ್ರಿಯರಾಗಿದ್ದರು. ನಂತರ, ಅವರು ತಮ್ಮ ತಂದೆಯ ಕನಸುಗಳನ್ನು ನನಸಾಗಿಸಲು ತನ್ನ ಅಧ್ಯಯನದತ್ತ ಹೋದರು. ಕೀರ್ತನಾರವರು ತಂದೆಯನ್ನು ಕಳೆದುಕೊಂಡು, ಮನೆಯಲ್ಲಿ ಬಡತನವಿದ್ದರೂ ಛಲ ಬಿಡದೇ ಅನೇಕ ಅಡೆ ತಡೆಗಳನ್ನು ಎದುರಿಸಿ ಇಂದು ಈ ನಾಡಿನ ಒಂದು ದೊಡ್ಡ ಸಾಧನೆಯ ಗುರಿ ಮುಟ್ಟಿ ಯಶಸ್ವಿಯಾಗಿದ್ದಾರೆ.

ಅವರ ತಾಯಿ, ತಮ್ಮ ಹಾಗೂ ಅವರ ಪತಿಯ ಪ್ರೋತ್ಸಾಹ ಮತ್ತು ಸಹಕಾರ ದೊಂದಿಗೆ ಇಂದು ಈ ಒಂದು ಸಾಧನೆಗೆ ಭಾಜನರಾಗಿದ್ದಾರೆ. ವರನಟ ಡಾ.ರಾಜ್ ಕುಮಾರ್ ಅವರಿಂದಲೂ ಸಹ ಸಿಹಿ ತಿನ್ನಿಸಿಕೊಂಡಿದ್ದಾರೆ. ಚಿಗುರು, ಜನನಿ, ಸುನೀಲ್ ಪುರಾಣಿಕ್ ಅವರ ಪುಟಾಣಿ ಏಜೆಂಟ್ ಸೀರಿಯಲ್ ನಲ್ಲಿ ನಟಿಸಿದ್ದಾರೆ. ”ಅಂತರ್ಜಲ” ಎಂಬ ಒಂದು ಶಾರ್ಟ್ ಮೂವಿ ಅವರ ಜೀವನದ ಮೇಲೆ ಪರಿಣಾಮ ಬೀರಿತಂತೆ. ಆಗಿನಿಂದಲೇ ಸೇವಾ ಕ್ಷೇತ್ರಕ್ಕೆ ಬರಬೇಕು ಎಂದು ತೀರ್ಮಾನ ಮಾಡಿದರಂತೆ. ಖಾಸಗಿ ವಾಹಿನಿಯಲ್ಲಿ ನಿರೂಪಣೆ ಕೂಡ ಮಾಡಿದ್ದರು ಕೀರ್ತನ ಜೊತೆಗೆ ಇಂಜಿನಿಯರಿಂಗ್ ಓದಿರುವ ಇವರು, ಇಂಜಿನಿಯರ್ ಆಗಿ ಕೂಡ ಎರಡು ವರ್ಷ ಕೆಲಸ ಮಾಡಿದ್ದಾರೆ.

Leave a Reply

%d bloggers like this: