ಕನ್ನಡ ಚಿತ್ರರಂಗದ ಬಹುಬೇಡಿಕೆಯ ಖಳ ನಟ ಕಾಕ್ರೋಚ್ ಸುಧಿ ಅವರ ಪತ್ನಿ ಯಾರ್ ಗೊತ್ತಾ..! ನೋಡಿ ಒಮ್ಮೆ

ಸ್ಯಾಂಡಲ್ ವುಡ್ ನಲ್ಲಿ ಇತ್ತೀಚೆಗೆ ಸಖತ್ ಬೇಡಿಕೆಯಲ್ಲಿರುವ ಟಗರು ಸಿನಿಮಾ ಖ್ಯಾತಿಯ ಖಳ ನಟ ಸುಧಿ ಅವರ ಪತ್ನಿ ಯಾರ್ ಗೊತ್ತಾ..! ಹೌದು ಚಂದನವನದಲ್ಲಿ ಕೆಲವು ವರ್ಷಗಳ ಹಿಂದಿನಿಂದ ಹೊಸ ಪ್ರತಿಭೆಗಳದ್ದೇ ದರ್ಬಾರ್ ಎಂದು ಹೇಳಬಹುದು. ಏಕೆಂದರೆ ಕನ್ನಡ ಸಿನಿ ಪ್ರೇಕ್ಷಕರು ಸ್ಟಾರ್ ನಟರ ಸಿನಿಮಾಗಳನ್ನು ಅಪ್ಪಿಕೊಂಡು ಜೈಕಾರ ಹಾಕುವಂತೆ ಸ್ಯಾಂಡಲ್ ವುಡ್ ಗೆ ಎಂಟ್ರಿ ಆಗಿರುವ ಆಗುತ್ತಿರುವ ಅನೇಕ ಹೊಸ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಪ್ರತಿಭೆ ಇದ್ದರೆ ಎಂತವರನ್ನೂ ಕೂಡ ಕೈ ಹಿಡಿಯುತ್ತೇವೆ ಎಂದು ಹೇಳುತ್ತಾರೆ ಕನ್ನಡ ಸಿನಿ ಪ್ರೇಕ್ಷಕರು. ಅದರಂತೆ ದುನಿಯಾ ಸೂರಿ ನಿರ್ದೇಶನದಲ್ಲಿ ಮೂಡಿಬಂದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟನೆಯ ಟಗರು ಚಿತ್ರದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಸನ್ಶೇನಲ್ ಕ್ರಿಯೆಟ್ ಮಾಡಿದ ಖಳ ನಟ ಅಂದರೆ ಅದು ಸುಧಿ. ಕಾವ್ಯದಲ್ಲಿ ಎಂಬ ಪಾತ್ರದಲ್ಲಿ ಅಮೋಘವಾಗಿ ನಟಿಸುವ ಮೂಲಕ ಕನ್ನಡ ಸಿನಿ ಪ್ರೇಕ್ಷಕರ ಮನ ಗೆದ್ದ ನಟ ಸುದೀ ಅವರು ಸದ್ಯದ ಮಟ್ಟಿಗೆ ಕನ್ನಡ ಚಿತ್ರರಂಗದ ಜನಪ್ರಿಯ ಮತ್ತು ಬಹು ಬೇಡಿಕೆಯ ಖಳ ನಟನಾಗಿ ಮಿಂಚುತ್ತಿದ್ದಾರೆ.

ದುನಿಯಾ ಸೂರಿ ಅವರ ಗರಡಿಯಲ್ಲಿ ಪಳಗಿದ ಅನೇಕ ಕಲಾವಿದರು ಇಂದು ಸ್ಯಾಂಡಲ್ ವುಡ್ ನಲ್ಲಿ ಉತ್ತಮ ಕಲಾವಿದರಾಗಿ ಗುರುತಿಸಿಕೊಂಡಿದ್ದಾರೆ. ಅದರಂತೆ ತಮ್ಮ ಪ್ರತಿಭೆಗೆ ತಕ್ಕ ಹಾಗೆ ಅವಕಾಶ ಪಡೆದುಕೊಂಡು ಜನಪ್ರಿಯತೆಯನ್ನು ಕೂಡ ಉಳಿಸಿಕೊಂಡಿದ್ದಾರೆ. ಅದರಂತೆ ನಿರ್ದೇಶಕ ಸುಕ್ಕಾ ಸೂರಿ ಅವರ ಕಲ್ಪನೆಯಲ್ಲಿ ಮೂಡಿ ಬಂದ ವಿಭಿನ್ನವಾದ ಕಾಕ್ರೋಚ್ ಎಂಬ ಪಾತ್ರಕ್ಕೆ ನ್ಯಾಯ ಒದಗಿಸಿ ವಿಲನ್ ಅಂದರೆ ಹೀಗೂ ಕೂಡ ಡೈಲಾಗ್ ಮೂಲಕ ತಮ್ಮ ಒಂದಷ್ಟು ವಿಚಿತ್ರ ನಟನೆಯ ಮೂಲಕ ಕೂಡ ಸಿನಿ ಪ್ರೇಕ್ಷಕರನ್ನ ಮುಟ್ಟಬಹುದು ಎಂಬುದನ್ನು ತೋರಿಸಿ ಕೊಟ್ಟಿದ್ದಾರೆ ನಟ ಸುಧಿ ಅಲಿಯಾಸ್ ಕಾಕ್ರೋಚ್ ಸುದೀ.

ಟಗರು ಸಿನಿಮಾ ಸೂಪರ್ ಹಿಟ್ ಆಗಿದ್ದೇ ಆಗಿದ್ದು ಈ ಚಿತ್ರದಲ್ಲಿ ನಟಿಸಿದ ಬಹುತೇಕ ನಟರಿಗೆ ಅದೃಷ್ಟ ಖುಲಾಯಿಸಿತು. ಅಂತಹ ನಟರ ಪೈಕಿ ಧನಂಜಯ್ ಕೂಡ ಒಬ್ಬರು. ಕೇವಲ ನಟ ಧನಂಜಯ್ ಅವರಾಗಿದ್ದವರು ಟಗರು ಚಿತ್ರದ ಡಾಲಿ ಎಂಬ ಖಡಕ್ ವಿಲನ್ ಪಾತ್ರದ ಮೂಲಕ ಡಾಲಿ ಧನಂಜಯ್ ಆಗಿ ಹೊಸ ಇನ್ನಿಂಗ್ಸ್ ಆರಂಭಿಸಿದರು. ಅವರಂತೆ ಡಾಲಿ ತಮ್ಮನ ಪಾತ್ರ ಕಾಕ್ರೋಚ್ ಪಾತ್ರ ಮಾಡಿದ ನಟ ಸುಧೀ ಅವರಿಗೂ ಕೂಡ ಟಗರು ಸಿನಿಮಾ ಉತ್ತಮ ಹೆಸರು ತಂದುಕೊಟ್ಟಿತು. ಈ ಚಿತ್ರದ ನಂತರ ಮತ್ತಷ್ಟು ಮೈಲೈಜ್ ನೀಡಿದ್ದು ದುನಿಯಾ ವಿಜಯ್ ಅಭಿನಯದ ಜೊತೆ ಜೊತೆಗೆ ತಾವೇ ಸ್ವತಃ ನಿರ್ದೇಶನ ಮಾಡಿದ ಸಲಗ ಸಿನಿಮಾ.

ಸಲಗ ಸಿನಿಮಾ ದಲ್ಲಿ ಕಾಕ್ರೋಚ್ ಪಾತ್ರದಂತೆ ಸಾವಿತ್ರಿ ಎಂಬ ಪಾತ್ರದ ಮೂಲಕ ನಟ ಸುಧೀ ಅವರು ಮತ್ತಷ್ಟು ಜನಪ್ರಿಯ ಆದರು. ಇತ್ತೀಚೆಗೆ ತೆರೆಕಂಡ ಜೋಗಿ ಪ್ರೇಮ್ ನಿರ್ದೇಶನದ ಏಕ್ ಲವ್ ಯಾ ಚಿತ್ರದಲ್ಲಿ ಕೂಡ ವಿಲನ್ ಆಗಿ ಕಾಣಿಸಿಕೊಂಡಿದ್ದು. ಈ ಚಿತ್ರವೂ ಕೂಡ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಹೀಗೆ ನಟ ಸುಧಿ ಅವರು ಸಾಲು ಸಾಲು ಸಿನಿಮಾಗಳಲ್ಲಿ ಬಿಝಿ ಆಗಿದ್ದು ಕನ್ನಡದ ಬೇಡಿಕೆಯ ಖಳ ನಟನಾಗಿ ಗುರುತಿಸಿಕೊಂಡಿದ್ದಾರೆ. ಇನ್ನು ನಟ ಸುಧಿ ಅವರ ವೈಯುಕ್ತಿಕ ಬದುಕಿನ ಬಗ್ಗೆ ತಿಳಿಯುವುದಾದರೆ ಫಿಲ್ಮ್ ಪೋಸ್ಟರ್ ಡಿಸೈನ್ ಮಾಡುತ್ತಿದ್ದ ಸುಧಿ ಅವರಿಗೆ ನಿರ್ದೇಶಕ ಸೂರಿ ಅವರು ತಮ್ಮ ಟಗರು ಚಿತ್ರದಲ್ಲಿ ಅವಕಾಶ ನೀಡುತ್ತಾರೆ.

ಇದಕ್ಕ ಮೊದಲು ನಟ ಸುಧೀ ಅವರು ಅಲೆಮಾರಿ ಎಂಬ ಚಿತ್ರದಲ್ಲಿ ನಟಿಸಿರುತ್ತಾರೆ. ಆದರೆ ಹೇಳಿಕೊಳ್ಳುವಷ್ಟು ಯಶಸ್ಸು ಸಿಕ್ಕಿರುವುದಿಲ್ಲ. ಆದರೆ ಟಗರು ಚಿತ್ರದಲ್ಲಿ ಸಿಕ್ಕ ಈ ಒಂದು ಅವಕಾಶ ಸುದಿ ಅವರ ಜೀವನದ ದಿಕ್ಕನ್ನು ಬದಲಾಯಿಸಿ ಇಂದು ನಟರಾಗಿ ಬದುಕು ಕಟ್ಟಿಕೊಂಡಿದ್ದಾರೆ. ಇನ್ನು ನಟ ಸುದಿ ಅವರಿಗೆ ಈಗಾಗಲೇ ಮದುವೆ ಆಗಿದ್ದು, ತಮ್ಮ ಪತ್ನಿಯ ಫೋಟೋವನ್ನು ಸೋಶಿಯಲ್ ಮೀಡಿಯಾ ದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

Leave a Reply

%d bloggers like this: