ಕನ್ನಡ ಚಿತ್ರಗಳಲ್ಲಿ ಹಾಡುವ ಗಾಯಕಿ-ಗಾಯಕರು ಪಡೆಯುವ ಸಂಭಾವನೆ ಎಷ್ಟಿದೆ ಗೊತ್ತಾ

ಕನ್ನಡ ಚಿತ್ರಗಳಲ್ಲಿ ಹಾಡುವ ಗಾಯಕಿ-ಗಾಯಕರು ಪಡೆಯುವ ಸಂಭಾವನೆ ಎಷ್ಟಿದೆ ಗೊತ್ತಾ..ಒಂದೇ ಒಂದು ಹಾಡಿಗೆ ಲಕ್ಷ ಲಕ್ಷ ಗಟ್ಟಲೇ ಸಂಭಾವನೆ ಪಡೆಯುತ್ತಾರೆ ಕನ್ನಡದ ಈ ಸುಪ್ರಸಿದ್ದ ಸಿಂಗರ್ಸ್.ಬಣ್ಣದ ಲೋಕದಲ್ಲಿ ನಿರಂತರವಾಗಿ ಹಣ ಹರಿದು ಬರದೇ ಹೋದರು ಸಹ ಒಮ್ಮೆ ತಾವು ಮಾಡುವ ನಟನೆ,ಕೆಲಸ ಕಾರ್ಯಗಳಿಗೆ ಒಮ್ಮೆಲೆ ಕೈ ತುಂಬಾ ಹಣ ಗಳಿಸುತ್ತಾರೆ.ಸಿನಿಮಾದಲ್ಲಿ ನಟಿಸುವಂತಹ ಅನುಭವಿ ಜನಪ್ರಿಯತೆಯ ಆಧಾರದ ಮೇಲೆ ನಟ-ನಟಿಯರಿಗೆ ಕೋಟಿ ಕೋಟಿ ಸಂಭಾವನೆ ನೀಡಲಾಗುತ್ತದೇ.ಅದರಂತೆ ಚಿತ್ರದ ಸೂತ್ರಧಾರರಾಗಿ ಕಾರ್ಯ ನಿರ್ವಹಿಸುವ ನಿರ್ದೇಶಕರು,ತಂತ್ರಜ್ಞರು ಸಂಗೀತ ನಿರ್ದೇಶಕರು ಸೇರಿದಂತೆ ಎಲ್ಲಾ ಸಿಬ್ಬಂದಿ ವರ್ಗದವರಿಗೆ ನಿಗದಿ ಮಾಡಿರುವ ವೇತನ ಸಂಭಾವನೆಯನ್ನ ನೀಡುತ್ತಾರೆ. ಚಿತ್ರಗಳ ಜೀವಾಳ ಅಂದರೆ ಅದು ಸಂಗೀತ,ಸಾಹಿತ್ಯ.

ಈ ಸಂಗೀತಕ್ಕೆ ತಕ್ಕ ಹಾಗೆ ಸಾಹಿತ್ಯ ಕೂಡಿಸಿ ತಮ್ಮ ಇಂಪಾದ ದನಿ ನೀಡುವ ಗಾಯಕರಿಗೆ ಒಂದೇ ಒಂದು ಹಾಡಿಗೆ ಲಕ್ಷ ಲಕ್ಷ ಸಂಭಾವನೆ ನೀಡುತ್ತಾರೆ.ಅದರಂತೆ ಕನ್ನಡ ಚಿತ್ರರಂಗದ ಖ್ಯಾತ ಗಾಯಕರಾದ ರಾಜೇಶ್ ಕೃಷ್ಣನ್ ಅವರು ಒಂದು ಹಾಡಿನ ಗಾಯನಕ್ಕೆ ಒಂದು ಲಕ್ಷ ಸಂಭಾವನೆ ಪಡೆಯುತ್ತಿದ್ದಾರೆ.ಹಿಂದಿಯ ಸ್ಲಂ ಡಾಗ್ ಚಿತ್ರದ ಜೈಹೋ ಹಾಡಿನ ಮೂಲಕ ದೇಶಾದ್ಯಂತ ಹೆಸರುವಾಸಿಯಾದ ಗಾಯಕ ವಿಜಯ್ ಪ್ರಕಾಶ್ ಒಂದು ಹಾಡಿಗೆ ಬರೋಬ್ಬರಿ ಒಂದೂವರೆ ಲಕ್ಷ ಪಡೆಯುತ್ತಾರೆ.ತನ್ನ ಕಂಠದ ಮೂಲಕ ನಾಡಿನಾದ್ಯಂತ ಅಪಾರ ಜನಪ್ರಿಯತೆ ಗಳಿಸಿರುವ ಯುವ ಪ್ರತಿಭೆ ಸಂಜಿತ್ ಹೆಗ್ಡೆ ಒಂದು ಹಾಡಿಗೆ ಬರೋಬ್ಬರಿ ಅರವತ್ತು ಸಾವಿರ ರೂ. ಸಂಭಾವನೆ ಪಡೆಯುತ್ತಾರೆ.ಸದ್ಯದ ಮಟ್ಟಿಗೆ ಬಹು ಬೇಡಿಕೆಯ ಗಾಯಕನಾಗಿ ಮಿಂಚುತ್ತಿದ್ದಾರೆ ಸಂಜಿತ್ ಹೆಗ್ಡೆ.

ಅದರಂತೆ ಗಾಯಕಿಯರಲ್ಲಿ ಅನುರಾಧ ಭಟ್ ಐವತ್ತರಿಂದ ಎಪ್ಪತ್ತು ಸಾವಿರ.ರೂ.ಸಂಭಾವನೆ ಪಡೆದರೆ,ನಂದಿತಾ ನಲವತ್ತು ಸಾವಿರ,ಅರ್ಚನಾ ಉಡುಪ ಮೂವತ್ತು ಸಾವಿರ ರೂ.ಗಳ ಸಂಭಾವನೆ ಪಡೆಯುತ್ತಾರೆ.ದಶಕಗಳ ಹಿಂದೆ ಸಿನಿಮಾದ ಎಲ್ಲಾ ಹಾಡುಗಳನ್ನ ಒಬ್ಬರು ಗಾಯಕ ಮತ್ತು ಒಬ್ಬರು ಗಾಯಕಿ ಮಾತ್ರ ಹಾಡುತ್ತಿದ್ದರು.ಆದರೆ ಈಗ ಸಿನಿಮಾದ ಒಂದೊಂದು ಹಾಡುಗಳನ್ನ ಒಬ್ಬೊಬ್ಬರು ಗಾಯಕ-ಗಾಯಕಿಯರು ಹಾಡುತ್ತಾರೆ.ಅದರಂತೆ ಸಂಗೀತ ಒಬ್ಬರು ನೀಡಿದರೆ,ಹಿನ್ನೆಲೆ ಸಂಗೀತ ಮತ್ತೊಬ್ಬರು ನೀಡುತ್ತಾರೆ.