ಕನ್ನಡ ಚಲನಚಿತ್ರದ ಖ್ಯಾತ ನಟ ‘ಪ್ರೋಮೊದ್ ಶೆಟ್ಟಿ’ ಹೆಂಡತಿ ನಿಜಕ್ಕೂ ಯಾರು ಗೊತ್ತಾ? ನೋಡಿ ಒಮ್ಮೆ ಅವರು ಕೂಡ ಖ್ಯಾತ ನಟಿ

ಪೋಷಕ ಪಾತ್ರಗಳ ಮೂಲಕವೇ ಚಂದನವನದಲ್ಲಿ ಸಖತ್ ಶೈನ್ ಆಗುತ್ತಿರುವ ಈ ನಟ ಇದೀಗ ಬಹು ಬೇಡಿಕೆಯ ನಟರಾಗಿ ಹೊರ ಹೊಮ್ಮಿದ್ದಾರೆ. ಹೌದು ಸಾಮಾನ್ಯವಾಗಿ ಸಿನಿಮಾಗಳಲ್ಲಿ ಮೇನ್ ಲೀಡ್ ರೋಲ್ ಮಾಡಿದಂತಹ ನಟ – ನಟಿಯರಿಗೇನೇ ಅವಕಾಶ ಸಿಗುವುದು ಕಷ್ಟ. ಅಂತಾದ್ರಲ್ಲಿ ತನಗೆ ಸಿಕ್ಕಂತಹ ಸಣ್ಣ ಪುಟ್ಟ ಪಾತ್ರಗಳಿಗೆ ಜೀವ ತುಂಬಿ ನಟಿಸಿ ತಮ್ಮ ವಿಶಿಷ್ಟ ಅಭಿನಯದ ಮೂಲಕವೇ ಗಮನ ಸೆಳೆದು ಕನ್ನಡ ಚಿತ್ರರಂಗದ ಬೇಡಿಕೆ ನಟರಾಗಿ ಗುರುತಿಸಿಕೊಳ್ಳುತ್ತಿದ್ದಾರೆ ನಟ ಪ್ರಮೋದ್ ಶೆಟ್ಟಿ. ಪ್ರಮೋದ್ ಶೆಟ್ಟಿ ಅಂದಾಕ್ಷಣ ಕೊಂಚ ಗೊಂದಲ ಉಂಟಾಗುತ್ತದೆ. ಆದರೆ ನಟ, ನಿರ್ದೇಶಕ ರಿಷಬ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿಬಂದ ಸರ್ಕಾರಿ ಹಿರಿಯ ಪ್ರಾಥಾಮಿಕ ಶಾಲೆ ಸಿನಿಮಾದಲ್ಲಿ ಶಾಂತಾರಾಮ ಉಪಧ್ಯಾಯ ಪಾತ್ರದಲ್ಲಿ ಯಕ್ಷಗಾನ ನೃತ್ಯದ ಉಡುಪು ಧರಿಸಿ ನಟಿಸಿ ಕನ್ನಡ ಸಿನಿ ಪ್ರೇಕ್ಷಕರಿಗೆ ಮಸ್ತ್ ಮನರಂಜನೆ ನೀಡಿದ ನಟ ಪ್ರಮೋದ್ ಶೆಟ್ಟಿ. ಈ ಸಿನಿಮಾದಲ್ಲಿನ ಅಭಿನಯಕ್ಕೆ ಪ್ರೇಕ್ಷಕರು ಮನ ಸೋತಿದ್ದರು.

ನಟ ಪ್ರಮೋದ್ ಶೆಟ್ಟಿ ಅವರು ಬೆಳ್ಳಿ ಪರದೆಯಲ್ಲಿ ಮಿಂಚುವ ಮುನ್ನ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ ಅನುರೂಪ ಎಂಬ ಸೀರಿಯಲ್ ನಲ್ಲಿ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿರುತ್ತಾರೆ. ಇದಾದ ಬಳಿಕ ರಕ್ಷಿತ್ ಶೆಟ್ಟಿ ಅವರ ನಾಯಕತ್ವದ ಕಿರಿಕ್ ಪಾರ್ಟಿ ಚಿತ್ರದಲ್ಲಿ ಅವಕಾಶ ಪಡೆದು ಜ್ಞಾನೇಶ್ ಎಂಬ ಪಾತ್ರದಲ್ಲಿ ನಟಿಸುತ್ತಾರೆ. ಈ ಕಿರಿಕ್ ಪಾರ್ಟಿ ಚಿತ್ರದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ವಿಶೇಷವಾಗಿ ಗಮನ ಸೆಳೆಯುತ್ತಾರೆ. ನಟ ಪ್ರಮೋದ್ ಶೆಟ್ಟಿ ರಿಷಭ್ ಮತ್ತು ರಕ್ಷಿತ್ ಶೆಟ್ಟಿ ಅವರ ಎಲ್ಲಾ ಚಿತ್ರಗಳಲ್ಲಿ ಒಂದಲ್ಲ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುತ್ತಾರೆ. ಅಂತೆಯೇ ಇದೀಗ ರಿಷಬ್ ಶೆಟ್ಟಿ ಅವರ ನಿರ್ಮಾಣ ಸಂಸ್ಥೆಯಡಿಯಲ್ಲಿ ನಿರ್ಮಾಣ ಆಗುತ್ತಿರುವ ಲಾಫಿಂಗ್ ಬುದ್ದ ಎಂಬ ಚಿತ್ರದಲ್ಲಿ ಪ್ರಧಾನ ಪಾತ್ರ ನಿರ್ವಹಿಸುತ್ತಿದ್ದಾರೆ. ನಟ ಪ್ರಮೋದ್ ಶೆಟ್ಟಿ ಅವರು ಒಂದು ರೀತಿಯಾಗಿ ಈ ರಕ್ಷಿತ್ ಶೆಟ್ಟಿ, ರಿಶಬ್ ಶೆಟ್ಟಿ ಸಿನಿಮಾಗಳ ಖಾಯಂ ನಟರಂತೆ ಅವರ ಎಲ್ಲಾ ಚಿತ್ರಗಳಲ್ಲಿಯೂ ಇರುತ್ತಾರೆ.

ನಟ ಪ್ರಮೋದ್ ಶೆಟ್ಟಿ ಉಳಿದವರು ಕಂಡಂತೆ, ಕಿರಿಕ್ ಪಾರ್ಟಿ, ರಿಕ್ಕಿ, ಅವನೇ ಶ್ರೀಮನ್ನಾರಯಣ, ಸರ್ಕಾರಿ ಹಿರಿಯ ಪ್ರಾಥಾಮಿಕ ಪಾಠ ಶಾಲೆ, ಬೆಲ್ ಬಾಟಂ, ಗುಬ್ಬಿ ಮೇಲೆ ಬ್ರಹ್ಮಾಸ್ತ್ರ,ಹೀಗೆ ಅನೇಕ ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ. ಸದ್ಯಕ್ಕೆ ಹತ್ತು ಹಲವು ಸಿನಿಮಾಗಳನ್ನ ಹಿಡಿದಿಟ್ಟುಕೊಂಡಿರುವ ನಟ ಪ್ರಮೋದ್ ಶೆಟ್ಟಿ ಸ್ಯಾಂಡಲ್ ವುಡ್ ನ ಬೇಡಿಕೆಯ ನಟರಾಗಿದ್ದಾರೆ. ಇನ್ನು ಇವರ ವೈಯಕ್ತಿಕ ವಿಚಾರ ತಿಳಿಯುವುದಾದರೆ 2010 ರಲ್ಲಿ ಸುಪ್ರೀತಾ ಶೆಟ್ಟಿ ಎಂಬುವರನ್ನ ತಮ್ಮ ಬಾಳ ಸಂಗಾತಿಯಾಗಿ ಸ್ವೀಕರಿಸಿದ್ದು, ಈ ದಂಪತಿಗಳಿಗೆ ಇಬ್ಬನಿ ಎಂಬ ಮುದ್ದಾದ ಹೆಣ್ಣು ಮಗಳು ಮತ್ತು ಇತ್ತೀಚೆಗೆ ಕಳೆದ ವರ್ಷ ತಾನೇ ಜನಿಸಿದ ಗಂಡು ಮಗುವಿಗೆ ಮನೋಜ್ ಶೆಟ್ಟಿ ಎಂದು ಹೆಸರಿಟ್ಟಿದ್ದಾರೆ. ಹೀಗೆ ಪ್ರಮೋದ್ ಶೆಟ್ಟಿ ಅವರು ತಮ್ಮಿಬ್ಬರ ಮಕ್ಕಳು, ಮಡದಿಯೊಂದಿಗೆ ಸುಂದರವಾದ ಬದುಕನ್ನ ಕಟ್ಟಿಕೊಂಡಿದ್ದಾರೆ.