ಕನ್ನಡದ ಬಹುಬೇಡಿಕೆಯ ಪೋಷಕ ನಟ ಅಚ್ಯುತ್ ಕುಮಾರ್ ಪತ್ನಿ ನಿಜಕ್ಕೂ ಯಾರು ಗೊತ್ತಾ? ನೋಡಿ ಒಮ್ಮೆ

ಕನ್ನಡ ಚಿತ್ರರಂಗದ ಜನಪ್ರಿಯ ಬಹು ಬೇಡಿಕೆಯ ಪೋಷಕ ನಟ ರಾಗಿರುವ ಅಚ್ಯುತ್ ಕುಮಾರ್ ಯಾರು ಗೊತ್ತಾ..ಅಗ್ನಿ ಶ್ರೀಧರ್ ಅವರ ಚೇತನ್ ಅಭಿನಯದ ಆ ದಿನಗಳು ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಗಮನ ಸೆಳೆದವರು ನಟ ಅಚ್ಯುತ್ ಕುಮಾರ್. ಆಯಿಲ್ ಕುಮಾರ್ ಆಗಿ ಕಾಣಿಸಿಕೊಂಡ ಅಚ್ಯುತ್ ಕುಮಾರ್ ಅವರು ತಮ್ಮ ಚೊಚ್ಚಲ ಚಿತ್ರದಲ್ಲಿ ತಮ್ಮ ಹಾವ ಭಾವ ನೈಜವಾದ ನಟನೆಯ ಮೂಲಕ ಕನ್ನಡಕ್ಕೆ ಒಬ್ಬ ಭರವಸೆಯ ಪೋಷಕ ನಟನಾಗಿ ಗುರುತಿಸಿಕೊಂಡರು. ಅಚ್ಯುತ್ ಕುಮಾರ್ ಅವರು ಮೂಲತಃ ರಂಗಭೂಮಿ ಕಲಾವಿದರು. ತುಮಕೂರಿನ ತಿಪಟೂರಿನವರಾದ ಅಚ್ಯುತ್ ಕುಮಾರ್ ಅವರಿಗೆ ಬಾಲ್ಯದಿಂದಾನು ನಟನೆ ಬಗ್ಗೆ ಅತೀವ ಆಸಕ್ತಿ ಇರುತ್ತದೆ. ಆದ್ದರಿಂದ ಅವರು ತಮ್ಮ ವಿಧ್ಯಾಭ್ಯಾಸ ಮುಗಿದ ನಂತರ ನೀನಾಸಂ ರಂಗ ಶಾಲೆಗೆ ಸೇರುತ್ತಾರೆ.

ಇದೇ ಸಂದರ್ಭದಲ್ಲಿ ಖ್ಯಾತ ನಿರ್ದೇಶಕರಾದ ಗಿರೀಶ್ ಕಾಸರವಳ್ಳಿಯವರು ಎಸ್. ಎಲ್. ಭೈರಪ್ಪನವರ ಗೃಹಭಂಗ ನಾಟಕದಲ್ಲಿ ಪ್ರಮುಖ ಪಾತ್ರವನ್ನು ನೀಡುತ್ತಾರೆ. ತಮಗೆ ಸಿಕ್ಕ ಪಾತ್ರವನ್ನು ಲೀಲಾಜಾಲವಾಗಿ ಮಾಡಿದ ಅಚ್ಯುತ್ ಕುಮಾರ್ ಒಳ್ಳೆಯ ಹೆಸರು ಗಳಿಸುತ್ತಾರೆ. ಬಳಿಕ ಒಂದಷ್ಟು ಸೀರಿಯಲ್ ಗಳಲ್ಲಿ ಬಣ್ಣ ಹಚ್ಚುತ್ತಾರೆ. ತದ ನಂತರದಲ್ಲಿ ಆ ದಿನಗಳು ಸಿನಿಮಾದಲ್ಲಿ ಆಯಿಲ್ ಕುಮಾರ್ ಆಗಿ ಎಂಟ್ರಿ ಕೊಡುತ್ತಾರೆ. ಅಂದಿನಿಂದ ಇಂದಿನವರೆಗೆ ನಟ ಅಚ್ಯುತ್ ಕುಮಾರ್ ಅವರು ನಿರಂತರವಾಗಿ ಕನ್ನಡ ಚಿತ್ರರಂಗದಲ್ಲಿ ಬೇಡಿಕೆ ಉಳಿಸಿಕೊಂಡು ನಟಿಸುತ್ತಾ ಬಂದಿದ್ದಾರೆ. ಇಂದು ಕನ್ನಡದ ಯಾವುದೇ ಸಿನಿಮಾ ನೋಡಿದರು ಅಲ್ಲಿ ಅಚ್ಯುತ್ ಕುಮಾರ್ ಇರುತ್ತಾರೆ. ಕಮರ್ಷಿಯಲ್ ಸಿನಿಮಾಗಳ ಜೊತೆಗೆ ಕಲಾತ್ಮಕ ಚಿತ್ರಗಳಲ್ಲಿ ಸಹ ಅಭಿನಯಿಸುತ್ತಿದ್ದಾರೆ.

ಜೊತೆಗೆ ಕನ್ನಡ ಸಿನಿಮಾ ಮಾತ್ರ ಅಲ್ಲದೆ ತಮಿಳು ಚಿತ್ರದಲ್ಲಿ ಕೂಡ ನಟಿಸಿದ್ದಾರೆ. ಇವರ ನಟನೆಯ ಪ್ರತಿಭೆಗೆ ಎರಡು ಬಾರಿ ರಾಜ್ಯ ಪ್ರಶಸ್ತಿ ಲಭಿಸಿದೆ. ಇನ್ನು ಇವರಿಗೆ ನಂದಿನಿ ಪಟವರ್ಧನ್ ಎಂಬುವರೊಟ್ಟಿಗೆ ಮದುವೆ ಆಗಿದ್ದಾರೆ. ನಂದಿನಿ ಅವರು ಕೂಡ ಒಂದಷ್ಟು ಕನ್ನಡ ಸೀರಿಯಲ್ ಗಳಲ್ಲಿ ಅಭಿನಯಿಸಿದ್ದಾರೆ. ಈ ದಂಪತಿಗಳಿಗೆ ಒಬ್ಬಳು ಮುದ್ದಾದ ಮಗಳು ಕೂಡ ಇದ್ದಾಳೆ. ಮೊಗ್ಗಿನ ಮನಸ್ಸು, ಆ ದಿನಗಳು ಸಿನೆಮಾಗಳಿಂದ ಆರಂಭವಾದ ಅಚ್ಯುತ್ ಕುಮಾರ್ ಅವರ ಸಿನಿ ಜರ್ನಿ ಇದೀಗ ಕೆಜಿಎಫ್ ಚಿತ್ರದವರೆಗೆ ಬಂದು ನಿಂತಿದೆ.

Leave a Reply

%d bloggers like this: