ಕನ್ನಡ ಆಯಿತು ಈಗ ಹಿಂದಿಯಿಂದಲೂ ರಿಷಬ್ ಶೆಟ್ಟಿ ಅವರಿಗೆ ಬಿಗ್ ಆಫರ್, ಆದರೆ ರಿಷಬ್ ಅವರು

ಇತ್ತೀಚೆಗೆ ಕಳೆದ ಮೂರ್ನಾಲ್ಕು ವರ್ಷದಿಂದ ಕನ್ನಡ ಚಿತ್ರರಂಗ ವರ್ಲ್ಢ್ ವೈಡ್ ಸಖತ್ ಶೈನ್ ಆಗ್ತಿದೆ. ಕನ್ನಡ ಸಿನಿಮಾಗಳ ಗತ್ತು ಏನೆಂಬುದು ಈಗ ವಿಶ್ವದ ಚಿತ್ರರಂಗಕ್ಕೆ ಗೊತ್ತಾಗಿದೆ. ಇದಕ್ಕೆ ಬಹು ಮುಖ್ಯ ಕಾರಣ ಅಂದರೆ ಕನ್ನಡದ ಗೋಲ್ಡನ್ ಸಿನಿಮಾ ಅಂತಾನೇ ಕರೆಸಿಕೊಳ್ಳುವ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಸಿನಿಮಾ. ಈ ಸಿನಿಮಾದಲ್ಲಿನ ಮೇಕಿಂಗ್ ಕಂಡು ಇಡೀ ಭಾರತೀಯ ಚಿತ್ರರಂಗವೇ ನಿಬ್ಬೆರಗಾಗಿತ್ತು. ಅಷ್ಟರ ಮಟ್ಟಗೆ ಕೆಜಿಎಫ್ ಸಿನಿಮಾ ಹಾಲಿವುಡ್ ರೇಂಜ್ ಗೆ ಅದ್ದೂರಿತನದಲ್ಲಿ ಮೂಡಿ ಬಂದಿತ್ತು. ಇದಾದ ಬಳಿಕ ಬಂದಂತಹ ಜೇಮ್ಸ್, ಕೆಜಿಎಫ್2, 777 ಚಾರ್ಲಿ, ವಿಕ್ರಾಂತ್ ರೋಣ ಸಿನಿಮಾ ಇದರ ಜೊತೆಗೆ ಇತ್ತೀಚೆಗಷ್ಟೇ ಬಿಡುಗಡೆಯಾಗಿ ವರ್ಲ್ಢ್ ವೈಡ್ ಸದ್ದು ಮಾಡುತ್ತಿರುವ.

ರಿಷಬ್ ಶೆಟ್ಟಿ ಅವರ ಕಾಂತಾರ ಸಿನಿಮಾ ನಮ್ಮ ಕನ್ನಡ ಸಿನಿಮಾಗಳ ಹಿರಿಮೆಯನ್ನ ಮತ್ತಷ್ಟು ಹಿಗ್ಗಿಸಿದೆ. ಒಂದೆಡೆ ಕನ್ನಡ ಸಿನಿಮಾರಂಗ ತನ್ನ ಮಾರುಕಟ್ಟೆಯನ್ನ ವಿಸ್ತಾರ ಮಾಡಿಕೊಳ್ಳೋದರ ಜೊತೆಗೆ ನಮ್ಮ ಕನ್ನಡದ ನಟ ನಟಿಯರಿಗೆ ಬೇರೆ ಬೇರೆ ಭಾಷೆಯ ಸಿನಿಮಾಗಳಲ್ಲಿ ಅವಕಾಶಗಳ ಮಹಾಪೂರವೇ ಹರಿದು ಬರುತ್ತಿದೆ. ಹೌದು ರಿಷಬ್ ಶೆಟ್ಟಿ ಅವರಿಗೆ ಈಗ ಬಾಲಿವುಡ್ ನಿಂದ ಅವಕಾಶ ಬಂದಿದೆ. ಆದರೆ ರಿಷಬ್ ಶೆಟ್ಟಿ ಅವರು ಮೊದಲು ಕನ್ನಡ ಸಿನಿಮಾಗೆ ಆದ್ಯತೆ ನೀಡುತ್ತೇನೆ ಎಂದು ತಿಳಿಸಿದ್ದಾರೆ. ಈಗಾಗಲೇ ಕನ್ನಡದಲ್ಲಿ ಬೆಲ್ ಬಾಟಮ್2 ಸೇರಿದಂತೆ.

ಒಂದಷ್ಟು ಪ್ರಾಜೆಕ್ಟ್ ಗಳಿಗೆ ಒಪ್ಪಂದ ಮಾಡಿಕೊಂಡಿರೋದ್ರಿಂದ ಈ ಸಿನಿಮಾಗಳನ್ನೆಲ್ಲಾ ಮುಗಿಸಿ ತದ ನಂತರ ಹಿಂದಿ ಭಾಷೆಯ ಸಿನಿಮಾದಲ್ಲಿ ನಟಿಸುತ್ತೇನೆ ಎಂದು ತಿಳಿಸಿದ್ದಾರಂತೆ. ಸದ್ಯಕ್ಕೆ ಕಾಂತಾರ ಸಿನಿಮಾ ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲೆಯಾಳಂ, ಹಿಂದಿ ಸೇರಿದಂತೆ ಪಂಚ ಭಾಷೆಗಳಲ್ಲಿ ಭಾರತದಾದ್ಯಂತ ಮಾತ್ರ ಅಲ್ಲದೆ ವರ್ಲ್ಡ್ ವೈಡ್ ಬರೋಬ್ಬರಿ ಮುನ್ನೂರು ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಬಾಕ್ಸ್ ಅಫೀಸ್ ನಲ್ಲಿ ಧೂಳೆಬ್ಬಿಸುತ್ತಿದೆ. ಕಾಂತಾರ ಸಿನಿಮಾ ಒಂದು ರೀತಿ ಕ್ಲಾಸಿಕ್ ಹಿಸ್ಟರಿ ಅಂತಾನೇ ದಾಖಲೆ ಮಾಡಿ ಭಾರತೀಯ ಚಿತ್ರರಂಗದ ಖ್ಯಾತ ನಟ ನಟಿಯರು, ನಿರ್ದೇಶಕರು ಸಿನಿಮಾ ನೋಡಿ ಅಪಾರ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Leave a Reply

%d bloggers like this: