ಕನ್ನಡದ ಖ್ಯಾತ ನಟರ ಜಾತಿ, ಧರ್ಮ ಯಾವುದು ಗೊತ್ತಾ, ನೋಡಿ ಒಮ್ಮೆ

ಸಾಮಾನ್ಯವಾಗಿ ಈ ಸಮಾಜದಲ್ಲಿ ನಾವೆಲ್ಲರು ಒಂದೇ.ನಾವು ವಿಶ್ವ ಮಾನವರು.ಹೀಗೆ ಎಷ್ಟೇ ಭಾಷಣ, ಹಿತವಚನಗಳನ್ನು ಹೇಳಿದರು,ಕೇಳಿದರು ಕೂಡ ನಮಗೆ ಗೊತ್ತೋ,ಗೊತ್ತಿಲ್ಲದಂತೆ ಈ ಜಾತಿ,ಧರ್ಮದ ಸಂಕೋಲೆ ಒಳಗೆ ನಾವು ಸಿಲುಕಿಕೊಳ್ಳುತ್ತೇವೆ.ನಮ್ಮ ಸಮಾಜದಲ್ಲಿ ಹಲವಾರು ಸಮುದಾಯಗಳಿವೆ.ಜಾತಿ ಧರ್ಮ, ಪಂಗಡಗಳಿವೆ. ಇದು ಹೆಚ್ಚಾಗಿ ನಮ್ಮ ರಾಜಕೀಯ ಕ್ಷೇತ್ರದಲ್ಲಿ ಕಾಣಬಹುದಾಗಿರುತ್ತದೆ.ತಮ್ಮ ತಮ್ಮ ಸಮುದಾಯದ ಏಳ್ಗೆಗಾಗಿ ಆ ಸಮುದಾಯದ ನಾಯಕನನ್ನೇ ಜನ ಪ್ರತಿನಿಧಿಯಾಗಿ ಆಯ್ಕೆ ಮಾಡುತ್ತಾರೆ.ಅವರು ಆ ಸಮುದಾಯಕ್ಕೆ ನೆರವು ಉತ್ತಮ ಕೆಲಸ ಮಾಡುತ್ತಾರೋ ಇಲ್ಲವೊ ಅದು ಎರಡನೇ ಮಾತು.ಆದರೆ ತಮ್ಮ ಸಮುದಾಯದ ಜನ,ನಾಯಕ ಎಂಬ ಭಾವನೆ ಮಾತ್ರ ಇದ್ದೇ ಇರುತ್ತದೆ. ಇದು ಕೇವಲ ರಾಜಕೀಯ ಮಾತ್ರವಲ್ಲ. ಸಿನಿಮಾರಂಗದಲ್ಲಿಯೂ ಕೂಡ ಇದೆ.ತಮ್ಮ ನೆಚ್ಚಿನ ನಟರು ಯಾವ ಸಮುದಾಯದವರು,ಧರ್ಮಕ್ಕೆ ಸೇರಿದ್ದವರಾಗಿದ್ದಾರೆ ಎಂಬುದು ಕಾಡುತ್ತಿರುತ್ತಲೇ ಇರುತ್ತದೆ.

ಅದನ್ನ ತಿಳಿಕೊಳ್ಳುವ ಕುತೂಹಲ ಇದ್ದೇ ಇರುತ್ತದೆ.ಇನ್ನು ಕನ್ನಡ ಚಿತ್ರರಂಗದ ದಿಗ್ಗಜ ನಟರು ಯಾವ ಜಾತಿ ಧರ್ಮಕ್ಕೆ ಸೇರಿದ್ದವರಾಗಿದ್ದಾರೆ ಎಂಬುದನ್ನ ತಿಳಿಯುವುದಾದರೆ.ಅದರಂತೆ ಕನ್ನಡಡ ಖ್ಯಾತ ನಟರಾದ ಲೋಕೇಶ್ ನಾಯ್ಡು ಸಮುದಾಯದವರಾಗಿದ್ದು,ಅವರ ಪುತ್ರ ಸೃಜನ್ ಲೋಕೇಶ್ ಸದ್ಯಕ್ಕೆ ಕಿರುತೆರೆ ಮತ್ತು ಬೆಳ್ಳಿತೆರೆಯಲ್ಲಿ ಮಿಂಚುತ್ತಿದ್ದಾರೆ.ಇನ್ನು ಕನ್ನಡದ ಪ್ರಸಿದ್ದ ಅಪಾರ ಜನಪ್ರಿಯತೆ ಗಳಿಸಿರುವ ಹಾಸ್ಯ ನಟರಾದ ಸಾಧುಕೋಕಿಲ ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದವರಾಗಿದ್ದಾರೆ. ಇನ್ನು ಬಜಾ಼ರ್ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಕೊಟ್ಟ ಡಿ ಬಾಸ್ ಅಪ್ಪಟ ಅಭಿಮಾನಿಯಾಗಿರುವ ನಟ ಧನ್ವೀರ್ ಒಕ್ಕಲಿಗ ಸಮುದಾಯಕ್ಕೆ ಸೇರಿದ್ದಾರೆ.

ಇವರು ತಮ್ಮ ಮೊದಲ ಸಿನಿಮಾದಲ್ಲಿಯೇ ತಮ್ಮ ಲುಕ್ಕು,ಖಡಕ್ ಡೈಲಾಗ್ ಡೆಲಿವರಿ ಉತ್ತಮ ನಟನೆಯ ಮೂಲಕ ಜನ ಮೆಚ್ಚುಗೆ ಪಡೆದಿದ್ದಾರೆ.ಇವರಿಗೆ ಅನೇಕ ಫೀಮೆಲ್ ಫ್ಯಾನ್ಸ್ ಕೂಡ ಇದ್ದಾರೆ.ಇನ್ನು ಗೋಲ್ಡನ್ ಸ್ಟಾರ್ ಗಣೇಶ್ ನೇಪಾಳಿ ಮೂಲದವರಾಗಿದ್ದರು ಕೂಡ ಇವರ ತಾಯಿ ಒಕ್ಕಲಿಗರಾಗಿರುವುದರಿಂದ ಒಕ್ಕಲಿಗ ಸಮುದಾಯಕ್ಕೆ ಸೇರುತ್ತಾರೆ.ಅದರಂತೆ ಡೈನಾಮಿಕ್ ಪ್ರಿನ್ಸ್ ದೇವರಾಜ್ ಕೂಡ ಒಕ್ಕಲಿಗರಾಗಿದ್ದಾರೆ.ಇನ್ನು ದುನಿಯಾ ವಿಜಯ್,ಲೂಸ್ ಮಾದ ಯೋಗೇಶ್,ಆಕ್ಷನ್ ಪ್ರಿನ್ಸ್ ಧೃವಸರ್ಜಾ ಕುರುಬ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಕನ್ನಡ ಚಿತ್ರರಂಗದ ಹಿರಿಯ ದಿಗ್ಗಜ ನಟರಾದ ದಿವಂಗತ.ಡಾ ಅಂಬರೀಷ್,ಜಗ್ಗೇಶ್ ಒಕ್ಕಲಿಗರಾಗಿದ್ದು,ಕ್ರೇಜಿ಼ ಸ್ಟಾರ್ ವಿ.ರವಿಚಂದ್ರನ್ ತಮಿಳಿನ ಮಡಿಯಾರ್ ಸಮುದಾಯದವರಾಗಿದ್ದಾರೆ.

ಟೈಗರ್ ಪ್ರಭಾಕರ್ ಕ್ರಿಶ್ಚಿಯನ್ ಅವರಾಗಿದ್ದು ಇವರ ಪುತ್ರ ವಿನೋದ್ ಪ್ರಭಾಕರ್ ಕೂಡ ಒಂದಷ್ಟು ಸಿನಿಮಾಗಳಲ್ಲಿ ನಟಿಸುವ ಮೂಲಕ ಚಿತ್ರರಂಗದಲ್ಲಿ ಸಕ್ರೀಯರಾಗಿ ತೊಡಗಿಸಿಕೊಂಡಿದ್ದಾರೆ.ಸಾಹಸಸಿಂಹ ಡಾ.ವಿಷ್ಣುವರ್ಧನ್,ನಟ, ನಿರ್ದೇಶಕ ಉಪೇಂದ್ರ ಬ್ರಾಹ್ಮಣರಾಗಿದ್ದಾರೆ.ನಟ ರಮೇಶ್ ಅರವಿಂದ್ ಅಯ್ಯಂಗಾರಿ ಸಮುದಾಯದವರಾಗಿದ್ದಾರೆ. ಸಿಂಪಲ್ ಸ್ಟಾರ್ ನಟ ರಕ್ಷಿತ್ ಶೆಟ್ಟಿ ಬಂಟ್ ಸಮುದಾಯದವರಾಗಿದ್ದಾರೆ.ಇನ್ನು ಕಿಚ್ಚ ಸುದೀಪ್,ಸುಪ್ರೀಂ ಹೀರೋ ಶಶಿಕುಮಾರ್,ಬಿಗ್ ಬಾಸ್ ಕನ್ನಡ ಸೀಸನ್ 8 ರ ವಿನ್ನರ್ ಮಂಜು ಪಾವಗಡ ವಾಲ್ಮೀಕಿ ಸಮುದಾಯದವರಾಗಿದ್ದಾರೆ.

ಚಾಲೇಂಜಿಂಗ್ ಸ್ಟಾರ್ ದರ್ಶನ್ ,ಖ್ಯಾತ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ನಾಯ್ಡು ಸಮುದಾಯದವರಾಗಿದ್ದಾರೆ.ಇನ್ನು ನಟ ಸಾರ್ವಭೌಮ ಡಾ.ರಾಜ್ ಕುಮಾರ್ ಅವರು ಈಡಿಗ ಸಮುದಾಯದವರಾಗಿದ್ದು, ಇವರ ಮಕ್ಕಳಾದ ಶಿವರಾಜ್ ಕುಮಾರ್,ಪುನೀತ್ ರಾಜ್ ಕುಮಾರ್,ರಾಘವೇಂದ್ರ ರಾಜ್ ಕುಮಾರ್ ಕನ್ನಡ ಚಿತ್ರರಂಗದ ಜನಪ್ರಿಯ ನಟರಾಗಿದ್ದಾರೆ.ಡಾ.ರಾಜ್ ಕುಟುಂಬದ ಮೂರನೇ ತಲೆಮಾರಿನಲ್ಲಿ ವಿನಯ್ ರಾಜ್ ಕುಮಾರ್,ಯುವ ರಾಜ್ ಕುಮಾರ್,ಧೀರೆನ್ ರಾಮ್ ಕುಮಾರ್ ಧನ್ಯಾ ರಾಮ್ ಕುಮಾರ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.ಒಟ್ಟಾರೆಯಾಗಿ ಹೇಳುವುದಾದರೆ ಕಲಾವಿದರಿಗೆ ಯಾವುದೇ ಜಾತಿ, ಧರ್ಮ, ಭಾಷೆಯ ಗಡಿಯಿರುವುದಿಲ್ಲ.