ಕನಸಿನ ದುಬಾರಿ ಮನೆ ಖರೀದಿ ಮಾಡಿದ ರಚಿತಾರಾಮ್! ಇವರ ಒಟ್ಟು ಆಸ್ತಿ ಎಷ್ಟು ಕೋಟಿ ಇದೆ ಗೊತ್ತಾ

ಚಂದನವನದ ಗುಳಿಕೆನ್ನೆ ಚೆಲುವೆ ನಟಿ ರಚಿತಾ ರಾಮ್ ಕನ್ನಡದ ಬಹುಬೇಡಿಕೆಯ ನಟಿಯಾಗಿ ಮಿಂಚುತ್ತಿದ್ದಾರೆ.ಕನ್ನಡದ ಎಲ್ಲಾ ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಂಡಿರುವ ರಚ್ಚು ಅವರ ಸಂಭಾವನೆ ಯಾವ ಸ್ಟಾರ್ ನಟನಿಗೂ ಕಮ್ಮಿ ಇಲ್ಲ ಎಂದೇಳುತ್ತಿದೆ ಗಾಂಧಿನಗರ.ಅರಸಿ ಧಾರಾವಾಹಿ ಮೂಲಕ ಬಣ್ಣದ ಲೋಕಕ್ಕೆ ಹೆಜ್ಜೆ ಇಟ್ಟ ರಚಿತಾ ರಾಮ್ ತಮ್ಮ ಮೊದಲ ಸೀರಿಯಲ್ ನಲ್ಲಿಯೇ ಕೌಟುಂಬಿಕ ಪ್ರೇಕ್ಷಕರನ್ನ ತನ್ನತ್ತ ಸೆಳೆದುಕೊಂಡರು.ತದ ನಂತರ ಒಂದಷ್ಟು ವರ್ಷಗಳ ಕಾಲ ಅಲ್ಪ ವಿರಾಮದ ಬಳಿಕ ಏಕಾ ಏಕಿ ಕಾಣಿಸಿಕೊಂಡಿದ್ದು ಬೆಳ್ಳಿ ಪರದೆಯಲ್ಲಿ,ಅದೂ ಕೂಡ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೇಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ನಾಯಕಿಯಾಗಿ.ಹೌದು 2013 ರಲ್ಲಿ ದರ್ಶನ್ ಅವರ ಹೋಂ ಪ್ರೊಡಕ್ಷನ್ ತೂಗುದೀಪ ಸಂಸ್ಥೆಯಡಿಯಲ್ಲಿ ನಿರ್ಮಾಣವಾದ ಬುಲ್ ಬುಲ್ ಚಿತ್ರದಲ್ಲಿ ದರ್ಶನ್ ಅವರಿಗೆ ಜೋಡಿಯಾಗುವುದರ ಮೂಲಕ ರಚಿತಾ ರಾಮ್ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟರು.

ಈ ಬುಲ್ ಬುಲ್ ಚಿತ್ರ ಯಶಸ್ಸಿನ ನಂತರ ನಟಿ ರಚಿತಾ ರಾಮ್ ಹಿಂತಿರುಗಿ ನೋಡಿದ್ದೇ ಇಲ್ಲ.ಒಂದರ ಮೇಲೊಂದು ಸಾಲು ಸಾಲು ಚಿತ್ರಗಳಲ್ಲಿ ನಟಿಸಿದರು.ಬೆರಳೆಕೆಯಷ್ಟು ಚಿತ್ರಗಳನ್ನು ಬಿಟ್ಟರೆ ರಚ್ಚು ನಟಿಸಿದ ಬಹುತೇಕ ಸಿನಿಮಾಗಳು ಸೂಪರ್ ಹಿಟ್ ಆದವು.ದರ್ಶನ್ ,ಸುದೀಪ್,ಪುನೀತ್ ರಾಜ್ ಕುಮಾರ್,ಗಣೇಶ್,ದುನಿಯಾ ವಿಜಯ್,ಶಿವರಾಜ್ ಕುಮಾರ್,ಶ್ರೀ ಮುರುಳಿ,ನೀನಾಸಂ ಸತೀಶ್ ಸೇರಿದಂತೆ ಕನ್ನಡದ ಎಲ್ಲಾ ಸ್ಟಾರ್ ನಟರೊಂದಿಗೆ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ.ಇತ್ತೀಚೆಗೆ ಸೆಟ್ಟೇರಿದ ನಟ ದರ್ಶನ್ ಅವರ ಕ್ರಾಂತಿ ಸಿನಿಮಾದಲ್ಲಿ ನಟಿಸುವ ಮೂಲಕ ದಚ್ಚು ಜೊತೆ ರಚ್ಚು ಹ್ಯಾಟ್ರಿಕ್ ಬಾರಿಸಲಿದ್ದಾರೆ.ಸದ್ಯಕ್ಕೆ ನಟಿ ರಚಿತಾ ರಾಮ್ ಅವರ ಕೈಯಲ್ಲಿ ಲವ್ ಯೂ ರಚ್ಚು,ಶಬರಿ ಸರ್ಚಿಂಗ್ ಫಾರ್ ರಾವಣ,ಮಾನ್ಸುನ್ ರಾಗ,ಬ್ಯಾಡ್ ಮ್ಯಾನರ್ಸ್,ಮ್ಯಾಟಿನಿ,ಡಾಲಿ ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುವ ಮೂಲಕ ಕನ್ನಡ ಚಿತ್ರರಂಗದ ಸಖತ್ ಬಿಝಿ಼ ಇರುವ ನಟಿಯಾಗಿದ್ದಾರೆ.

ನಟಿ ರಚಿತಾ ರಾಮ್ ಅವರು ಸಿನಿಮಾವೊಂದಕ್ಕೆ ಬರೋಬ್ಬರಿ ಐವತ್ತು ಲಕ್ಷ ರೂ.ಸಂಭಾವನೆ ಪಡೆಯುತ್ತಾರೆ ಎಂದು ತಿಳಿದು ಬಂದಿದೆ.ಅಷ್ಟೇ ಅಲ್ಲದೆ ಕಲರ್ಸ್ ಸೂಪರ್ ನಲ್ಲಿ ಮಜಾಭಾರತ ಕಾಮಿಡಿ ಶೋ ಮೂಲಕ ಕೂಡ ಇಂತಿಷ್ಟು ಆದಾಯ ಗಳಿಸುತ್ತಾರೆ. ಹೀಗೆ ಇಪ್ಪತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ರಚಿತಾ ಅವರ ಬಳಿ ಫಾರ್ಚೂನರ್ ಮತ್ತು ಹೋಂಡಾ ಕ್ರೇಟಾ ಕಾರ್ ಮತ್ತು ಭವ್ಯವಾದ ಬಂಗಲೆಯೊಂದನ್ನು ಹೊಂದಿದ್ದು,ಪ್ರತ್ಯೇಕವಾಗಿ 15-ರಿಂದ 20 ಕೋಟಿ ಆಸ್ತಿಯನ್ನು ಹೊಂದಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.ಸದ್ಯಕ್ಕೆ ನಟಿ ರಚಿತಾ ರಾಮ್ ಅವರು ವಿ.ಹರಿಕೃಷ್ಣ ನಿ ರ್ದೇಶನದ ದರ್ಶನ್ ಅಭಿನಯದ ಕ್ರಾಂತಿ ಸಿನಿಮಾಗೆ ಸಹಿ ಮಾಡಿದ್ದಾರೆ.

Leave a Reply

%d bloggers like this: