ಕಳ್ಳತನ ಮಾಡಿ ಸಿಕ್ಕಿಬಿದ್ದ ಖ್ಯಾತ ನಟಿ!.. ಇವರೇ ನೋಡಿ ಒಮ್ಮೆ

ಸಿನಿಮಾ ಮತ್ತು ಕಿರುತೆರೆ ತಾರಾ ಮಣಿಗಳು ಸಾಮಾನ್ಯವಾಗಿ ಸಿನಿಮಾ ಅಥವಾ ತಮ್ಮ ಹೊಸ ಧಾರಾವಾಹಿಯ ಮೂಲಕ ಭಾರಿ ಸುದ್ದಿ ಆಗುತ್ತಾರೆ. ಅದರಲ್ಲೂ ಇತ್ತೀಚೆಗೆ ಅಂತೂ ಈ ಬಣ್ಣದ ಲೋಕದ ಮಂದಿ ಐಷಾರಾಮಿ ಜೀವನ ನಡೆಸುವ ಮೂಲಕ ಸಖತ್ ಸುದ್ದಿಯಲ್ಲಿದ್ದಾರೆ. ಅದರಂತೆ ಇಲ್ಲೊಬ್ಬ ಬಾಲಿವುಡ್ ನಟಿ ಭಾರತೀಯ ಚಿತ್ರರಂಗದಾದ್ಯಂತ ಭಾರಿ ಸುದ್ದಿ ಆಗಿದ್ದಾರೆ. ಆದರೆ ಇವರು ಯಾವುದೇ ಕಿರುತೆರೆ ಮತ್ತು ಬೆಳ್ಳಿತೆರೆಯ ವಿಚಾರವಾಗಿ ಅಲ್ಲ. ಹೌದು ಕಳ್ಳತನ ಮಾಡುವ ಮೂಲಕ ಈ ನಟಿ ಸುದ್ದಿ ಆಗಿದ್ದಾರೆ. ಇದು ಬಿ ಟೌನ್ ನಲ್ಲಿ ಈಗ ಎಲ್ಲರಿಗೂ ಅಚ್ಚರಿಯ ಸುದ್ದಿ ಆಗಿದೆ. ಹೌದು ಬಹುತೇಕರಿಗೆ ಸಿನಿಮಾ ಕಿರುತೆರೆ ಧಾರಾವಾಹಿ ಜನರೆಂದರೆ ಅದೇನೋ ಎಲ್ಲಿಲ್ಲದ ಆ ಕುತೂಹಲ ಉಕ್ಕಿ ಬರುತ್ತಿದೆ. ಅವರ ಸಿನಿಮಾ ಮತ್ತು ಧಾರಾವಾಹಿ ವಿಚಾರಕ್ಕಿಂತ ಹೆಚ್ಚು ಅವರ ವೈಯಕ್ತಿಕ ಬದುಕಿನ ಕುರಿತು ತಿಳಿದುಕೊಳ್ಳುವ ಆಸಕ್ತಿ ಇರುತ್ತದೆ ಅಭಿಮಾನಿಗಳಿಗೆ. ಇದೀಗ ಕಳ್ಳತನ ಮಾಡಿ ತಗ್ಲಾಕೊಂಡಿರುವ ಆ ನಟಿ ಯಾರು ಗೊತ್ತಾ ಅವರೇ ನಟಿ ರೂಪಾ ದತ್ತಾ.

ನಟಿ ರೂಪದತ್ತಾ ಅವರು 2005 ರಲ್ಲಿ ತೆಲುಗಿನ ಸತಿ ಎಂಬ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರದ ನಂತರ ಅವರಿಗೆ ಟಾಲಿವುಡ್ ನಲ್ಲಿ ಅವಕಾಶ ಹೆಚ್ಚಾಗಿ ಸಿಗುವುದಿಲ್ಲ. ಆಗ ಮುಂಬೈನತ್ತ ಪಯಣ ಬೆಳೆಸುತ್ತಾರೆ ನಟಿ ರೂಪಾದತ್ತಾ. ಬಾಲಿವುಡ್ ಗೆ ಎಂಟ್ರಿ ಕೊಟ್ಟು ಒಂದೆರಡು ಚಿತ್ರದಲ್ಲಿ ನಟಿಸಿ ನಂತರ ಹಿಂದಿಯ ಸೀರಿಯಲ್ ನಲ್ಲಿ ಜನಪ್ರಿಯತೆ ಪಡೆಯುತ್ತಾರೆ. ಇದಾದ ನಂತರ ಅನೇಕ ಹಿಂದಿ ಸೀರಿಯಲ್ ನಲ್ಲಿ ಬಿಝಿ಼ ಆಗುತ್ತಾರೆ. ಎಲ್ಲವೂ ಸರಿ ಇದೆ ಎಂದುಕೊಳ್ಳುತ್ತಿರುವಾಗ ರೂಪಾದತ್ತ ಅವರಿಗೆ ಇದ್ದಕಿದ್ದಂತೆ ಅವಕಾಶ ಕೊರತೆ ಉಂಟಾಗುತ್ತದೆ. ಬಳಿಕ ಆರ್ಥಿಕ ಸಮಸ್ಯೆಗೆ ಒಳಗಾದ ರೂಪದತ್ತಾ ಅವರು ಕಳ್ಳತನದ ದಾರಿ ಹಿಡಿದಿದ್ದಾರೆ ಎಂಬುದು ಬಿ ಟೌನ್ ನಲ್ಲಿ ಕೇಳಿ ಬರುತ್ತಿರುವ ಸುದ್ದಿ . ಆದರೆ ಇದಕ್ಕೆಲ್ಲಾ ಪೊಲೀಸರ ವಿಚಾರಣೆಯ ನಂತರ ಸಂಪೂರ್ಣ ಮಾಹಿತಿ ತಿಳಿಯಲಿದೆ. ಕೊಲ್ಕತ್ತಾ ಮೂಲದವರಾದ ನಟಿ ರೂಪದತ್ತಾ ಅವರು ಅಂತರಾಷ್ಟ್ರೀಯ ಪುಸ್ತಕ ಮೇಳವೊಂದಕ್ಕೆ ಹೋಗಿರುತ್ತಾರೆ.

ಅಲ್ಲಿ ರೂಪಾ ದತ್ತ ಅವರು ಜನ ಸಂದಣಿ ತಿಳಿದು ಅನೇಕರ ಪರ್ಸ್ ಕದ್ದಿದ್ದಾರೆ. ಈ ವಿಚಾರ ಬಿಧಾನಗರ ಪೊಲೀಸ್ ಅವರಿಗೆ ತಿಳಿದು ನಟಿ ರೂಪಾದತ್ತ ಅವರನ್ನ ಬಂಧಿಸಿದ್ದಾರೆ. ಸದ್ಯಕ್ಕೆ ವಿಚಾರಣೆ ನಡೆಯುತ್ತಿದೆ. ವಿಚಾರಣೆಯಲ್ಲಿ ನಟಿ ರೂಪಾದತ್ತ ಅವರಿಂದ ಎಪ್ಪತ್ತೈದು ಸಾವಿರ ರೂ. ಗಳ ಡೈರಿ ಸಿಕ್ಕಿದ್ದು, ನಟಿ ರೂಪದತ್ತಾ ಅವರು ಒಂದೇ ಕಡೆ ಮಾತ್ರ ಅಲ್ಲದೆ ಜನ ದಟ್ಟಣಿ ಸೇರುವ ಜಾತ್ರೆ, ವಸ್ತು ಪ್ರದರ್ಶನ ಮತ್ತು ಇನ್ನಿತರೆ ಪುಸ್ತಕ ಪ್ರದರ್ಶನಗಳಲ್ಲಿ ಹೋಗಿ ಅಲ್ಲಿ ಪಿಕ್ ಪಾಕೆಟ್ ಮಾಡುತ್ತಿದ್ದರಂತೆ. ತಾನು ಎಲ್ಲೆಲ್ಲಿ ಎಷ್ಟೆಷ್ಟು ಕಳ್ಳತನ ಮಾಡಿದ್ದೇನೆ ಎಂಬ ಲೆಕ್ಕಾಚಾರದ ವಿವರಗಳನ್ನು ನಟಿ ರೂಪದತ್ತಾ ಅವರು ಡೈರಿಯಲ್ಲಿ ಬರೆದಿಡುತ್ತಿದ್ದರಂತೆ. ಒಟ್ಟಾರೆಯಾಗಿ ನಟಿ ಒಬ್ಬರು ಈ ರೀತಿ ಕಳ್ಳತನ ಮಾಡಿ ಪೊಲೀಸರ ಬಲೆಗೆ ಬಿದ್ದಿರುವುದನ್ನು ಕಂಡು ಬಂಗಾಳಿ ಮತ್ತು ಬಿಟೌನ್ ಸೆಲೆಬ್ರಿಟಿಗಳು ಅಚ್ಚರಿ ವ್ಯಕ್ತಪಡಿಸಿದ್ದಾರೆ.

Leave a Reply

%d bloggers like this: