ಕೈಮೇಲೆ ವಿಶೇಷವಾದ ಟ್ಯಾಟೂ ಹಾಕಿಸಿಕೊಂಡ ನಟಿ ಮೇಘನಾ ಸರ್ಜಾ ಅವರು

ಚಂದನವನದ ಖ್ಯಾತ ನಟಿ ಮೇಘನಾ ರಾಜ್ ಅವರು ಇತ್ತೀಚೆಗೆ ಒಂದಷ್ಟು ಸುದ್ದಿಗೆ ಕಾರಣವಾಗಿದ್ದಾರೆ. ದಿ.ನಟ ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್ ಅವರು ಪರಸ್ಪರ ಪ್ರೀತಿಸಿ ಮದುವೆ ಆದರು. ಆದರೆ ದುರಾದೃಷ್ಟವಶಾತ್ ಈ ಪ್ರೇಮಿ ಜೋಡಿಯನ್ನ ಒಟ್ಟಾಗಿ ಇರಲು ಆ ವಿಧಿ ಬಿಡಲಿಲ್ಲ‌. ಚೊಚ್ಚಲು ಹೆರಿಗೆ ಸಂಧರ್ಭದಲ್ಲಿಯೇ ನಟ ಚಿರಂಜೀವಿ ಅವರು ಅಕಾಲಿಕ ನಿಧನವೊಂದಿದರು. ಯಾವಾಗ ನಟ ಚಿರಂಜೀವಿ ಸರ್ಜಾ ಅವರು ಅಕಾಲಿಕ ಮರಣಕ್ಕೆ ತುತ್ತಾದರೋ ಅಲ್ಲಿಂದ ಮೇಘನಾ ರಾಜ್ ಅವರು ಕೂಡ ಮಾನಸಿಕ ಮತ್ತು ದೈಹಿಕವಾಗಿ ಕುಗ್ಗಿ ಹೋದರು. ತದ ನಂತರ ಗಂಡು ಮಗುವಿಗೆ ಜನ್ಮ ನೀಡಿದ ನಂತರ ಚಿರು ಸರ್ಜಾ ಅವರೇ ಮರಳಿ ಬಂದಿದ್ದಾರೆ ಎಂಬಂತೆ ಇದೀಗ ತಮ್ಮ ಮಗನಲ್ಲಿ ಚಿರಂಜೀವಿ ಅವರನ್ನ ಕಾಣುತ್ತಿದ್ದಾರೆ. ಮಗನ ಲಾಲನೆ ಪಾಲನೆಯಲ್ಲಿ ತೊಡಗಿಕೊಂಡಿರೋ ಮೇಘನಾ ರಾಜ್ ಅವರು ಅದರ ಜೊತೆಗೆ ಮತ್ತೆ ಬಣ್ಣದ ಜಗತ್ತಿಗೆ ರೀಎಂಟ್ರಿ ಕೊಟ್ಟಿದ್ದಾರೆ.

ರಿಯಾಲಿಟಿ ಶೋ ಮತ್ತು ಒಂದೆರಡು ಹೊಸ ಚಿತ್ರಗಳಿಗೆ ಸಹಿ ಮಾಡಿರೋ ಮೇಘನಾ ರಾಜ್ ಅವರಿಗೆ ಇತ್ತೀಚೆಗೆ ಅಂತರಾಷ್ಟ್ರೀಯ ಮಟ್ಟದ ಪ್ರಶಸ್ತಿಯೊಂದು ಮುಡಿಗೇರಿಸಿಕೊಳ್ಳುವ ಅವಕಾಶ ಒದಗಿಬಂದಿದೆ. ಅಮೆರಿಕಾದ ಕ್ಯಾಲಿಪೋರ್ನಿಯಾದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಫೆಡರೇಷನ್ ಆಫ್ ಇಂಡೋ ಅಮೇರಿಕನ್ಸ್ ಆಫ್ ನಾರ್ತೆನ್ ಕ್ಯಾಲಿಫೋರ್ನಿಯಾ ಅವರು ಆಯೋಜನೆ ಮಾಡಿರುವ ಫೆಸ್ಟಿವಲ್ ಗ್ಲೋಬ್ನ ಫಾಗ್ ಹೀರೋ ಪ್ರಶಸ್ತಿ ಮೇಘನಾ ರಾಜ್ ಅವರಿಗೆ ಲಭಿಸಿದೆ. ಭಾರತೀಯ ಸಿನಿ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಈ ಪ್ರಶಸ್ತಿಯನ್ನ ನೀಡಲಾಗುತ್ತದೆ. ಈ ವರ್ಷದ ಫಾಗ್ ಹೀರೋ ಪ್ರಶಸ್ತಿಗೆ ಮೇಘನಾ ರಾಜ್ ಅವರು ಆಯ್ಕೆ ಆಗಿದ್ದಾರೆ. ಸದ್ಯಕ್ಕೆ ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿ ಇರುವ ಮೇಘನಾ ರಾಜ್ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಒಂದು ಪೋಸ್ಟ್ ಅನ್ನ ಹಾಕಿದ್ದಾರೆ.

ಹೌದು ಮೇಘನಾ ರಾಜ್ ಅವರು ತಮ್ಮ ಕೈಯಲ್ಲಿ ಪ್ರೀತಿಯ ಪತಿ ಚಿರಂಜೀವಿ ಸರ್ಜಾ ಮತ್ತು ತಮ್ಮ ಮುದ್ದಿನ ಮಗ ರಾಯನ್ ರಾಜ್ ಸರ್ಜಾ ಹೆಸರ ಟ್ಯಾಟೋ ಹಾಕಿಸಿಕೊಂಡಿದ್ದಾರೆ. ಇದು ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇತ್ತೀಚೆಗೆ ಕೆಲವು ದಿನಗಳಿಂದೆ ನಟಿ ಮೇಘನಾ ರಾಜ್ ಅವರ ಎರಡನೇ ಮದುವೆಯ ಬಗ್ಗೆ ಒಂದಷ್ಟು ಮಾತುಗಳು ಹರಿದಾಡಿದ್ದವು. ಅದಕ್ಕೆ ಮೇಘನಾ ರಾಜ್ ಅವರು ನನಗೆ ಆ ಬಗ್ಗೆ ಯೋಚನೆ ಇಲ್ಲ‌. ನಾನು ನನ್ನ ಭವಿಷ್ಯದ ಬಗ್ಗೆ ಚಿಂತನೆ ಮಾಡುತ್ತಿಲ್ಲ. ವಾಸ್ತವದಲ್ಲಿ ನಾನು ಹೇಗೆ ಇದ್ದೇನೆ. ಅದರಲ್ಲಿ ನಾನು ಸಂತೋಷವಾಗಿ ಇರುತ್ತೇನೆ ಎಂದು ಹೇಳಿ ಮೌನ ವಹಿಸಿದ್ದರು. ಇದೀಗ ಕೈಯಲ್ಲಿ ಚಿರಂಜೀವಿ ಸರ್ಜಾ ಅವರ ಹೆಸರಿನ ಟ್ಯಾಟೋ ಹಾಕಿಸಿದ ನಂತರ ಎರಡನೇ ಮದುವೆಯ ಬಗ್ಗೆ ಮಾತನಾಡುತ್ತಿದ್ದವರ ಬಾಯಿಗೆ ಬೀಗ ಬಿದ್ದಂತಾಗಿದೆ.

Leave a Reply

%d bloggers like this: