ಕೈ ಮೇಲೆ ವಿಶೇಷ ಟ್ಯಾಟೂ ಹಾಕಿಸಿಕೊಂಡ ಜನಪ್ರಿಯ ನಟಿ ಶ್ವೇತಾ ಚೆಂಗಪ್ಪ ಅವರು

ಸರಿ ಸುಮಾರು ಎರಡು ದಶಕಗಳಿಂದ ಕನ್ನಡ ಕಿರುತೆರೆ ಮತ್ತು ಬೆಳ್ಳಿತೆರೆಯಲ್ಲಿ ಅಪಾರ ಹೆಸರು ಮಾಡಿರೋ ನಟಿ ಶ್ವೇತಾ ಚಂಗಪ್ಪ. ದಶಕಗಳ ಹಿಂದೆ ಖಾಸಗಿ ವಾಹಿನಿಯಲ್ಲಿ ಪ್ರಸಾರ ಆಗುತ್ತಿದ್ದ ಸುಮತಿ, ಕಾದಂಬರಿ, ಅರುಂಧತಿ ಧಾರಾವಾಹಿಗಳ ಮೂಲಕ ಕನ್ನಡ ಕಿರುತೆರೆಯನ್ನ ವರ್ಷಾನುಗಟ್ಟಲೇ ನಟಿ ಶ್ವೇತಾ ಚಂಗಪ್ಪ ಅವರು ಆಳಿದ್ದಾರೆ. ಅದರಲ್ಲಿಯೂ ಕಾದಂಬರಿ ಧಾರಾವಾಹಿಯೂ ನಾಡಿನಾದ್ಯಂತ ಮನೆ ಮನಗಳಲ್ಲಿ ಅಪಾರ ಜನಪ್ರಿಯತೆ ಪಡೆದಿತ್ತು. ಕನ್ನಡಿಗರ ಮನೆ ಮಗಳಾಗಿ ಶ್ವೇತಾ ಚಂಗಪ್ಪ ಮನೆ ಮಾತಾಗಿದ್ದರು. ಕಿರುತೆರೆ ಮಾತ್ರ ಅಲ್ಲದೆ ಡಾ.ವಿಷ್ಣು ವರ್ಧನ್ ಅವರ ವರ್ಷ ಸಿನಿಮಾದಲ್ಲಿ ವಿಷ್ಣು ವರ್ಧನ್ ಅವರ ತಂಗಿ ಪಾತ್ರದಲ್ಲಿ ನಟಿಸಿದ್ದಾರೆ. ಅದರ ಜೊತೆಗೆ ದರ್ಶನ್ ಅವರ ತಂಗಿಗಾಗಿ ಚಿತ್ರದಲ್ಲಿಯೂ ಕೂಡ ಶ್ವೇತಾ ಚೆಂಗಪ್ಪ ತಂಗಿ ಪಾತ್ರದಲ್ಲಿ ನಟಿಸಿದ್ದಾರೆ.

ಇತ್ತೀಚೆಗೆ ಕೆಲವು ವರ್ಷಗಳಿಂದೀಚೆಗೆ ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಆಗಿದ್ದ ಮಜಾ ಟಾಕೀಸ್ ನಲ್ಲಿ ರಾಣಿ ಪಾತ್ರದಲ್ಲಿ ಬೇರೆಯದ್ದೇ ರೂಪದಲ್ಲಿ ಕಾಣಿಸಿಕೊಂಡು ನಗೆಗಡಲಲ್ಲಿ ತೇಲಿಸಿದ್ರು. ಕಿರಣ್ ಎಂಬುವರೊಟ್ಟಿಗೆ ದಾಂಪತ್ಯ ಜೀವನಕ್ಕೆ ಹೆಜ್ಜೆ ಇಟ್ಟ ಶ್ವೇತಾ ಚೆಂಗಪ್ಪ ಅವರು ಇದೀಗ ಮುದ್ದಾದ ಗಂಡು ಮಗುವಿನ ತಾಯಿ. ತಾಯಿಯಾದ ನಂತರ ತಮ್ಮ ಮಗನೊಟ್ಟಿಗೆ ಕಾಲ ಕಳೆಯುತ್ತಿರೋ ಶ್ವೇತಾ ಚೆಂಗಪ್ಪ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಮಗನೊಟ್ಟಿಗೆ ಇರೋ ಫೋಟೋಗಳನ್ನ ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಅದರಂತೆ ಇತ್ತೀಚೆಗೆ ಶ್ರೀ ಕೃಷ್ಣಾ ಜನ್ಮಾಷ್ಠಮಿ ಹಬ್ಬದಂದು ತಾವು ಯಶೋಧ ಮತ್ತು ಮಗನಿಗೆ ಕೃಷ್ಣನ ವೇಷ ತೊಡಿಸಿ ಪೋಟೋ ತೆಗೆಸಿಕೊಂಡಿದ್ದರು. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಅದರಂತೆ ಇದೀಗ ನಟಿ ಶ್ವೇತಾ ಚೆಂಗಪ್ಪ ಅವರು ತಮ್ಮ ಮುದ್ದಿನ ಮಗ ಜಿಯಾನ್ ಹೆಸರನ್ನ ಕೈಯಲ್ಲಿ ಟ್ಯಾಟೋ ಹಾಕಿಸಿಕೊಂಡಿದ್ದಾರೆ.

ಈ ಫೋಟೋವನ್ನ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ನಟಿ ಶೇರ್ ಮಾಡಿಕೊಂಡಿದ್ದಾರೆ. ಇತ್ತೀಚೆಗೆ ಶ್ವೇತಾ ಚೆಂಗಪ್ಪ ಅವರು ರಿಯಾಲಿಟಿ ಶೋವೊಂದರ ನಿರೂಪಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬಿಡುವಿಲ್ಲದೆ ನಿರಂತರವಾಗಿ ಶೂಟಿಂಗ್ ಇದ್ದಾಗ ತಮ್ಮ ಮಗ ‘ಜಿಯಾನ್’ ಅನ್ನ ಮಿಸ್ ಮಾಡಿಕೊಳ್ತಾರಂತೆ. ಹಾಗಾಗಿ ತಮ್ಮ ಮಗನ ಹೆಸರನ್ನ ಶ್ವೇತಾ ಅವರು ಕೈ ಮೇಲೆ ಟ್ಯಾಟೋ ಹಾಕಿಸಿಕೊಂಡಿದ್ದಾರೆ. ಮದುವೆಯಾದ ನಂತರ ಕೆಲವು ನಟಿಯರು ತಮ್ಮ ಸೌಂದರ್ಯದ ಬಗ್ಗೆ ಕಾಳಜಿ ಮಾಡಿದರೆ ನಟಿ ಶ್ವೇತಾ ಚೆಂಗಪ್ಪ ಅವರು ತಮ್ಮ ಸೌಂದರ್ಯವನ್ನ ಹಾಗೇ ಕಾಪಾಡಿಕೊಂಡು ಇಂದಿಗೂ ಕೂಡ ಆರಂಭದ ದಿನಗಳಲ್ಲಿ ಹೇಗಿದ್ದರೋ ಅದೇ ರೀತಿ ಎಂಗ್ ಆಗಿ ಕಾಣಿಸುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿರೋ ಅವರ ಫೋಟೋಗಳು ಸಖತ್ ಬೋಲ್ಡ್ ಅಂಡ್ ಆಕರ್ಷಕವಾಗಿ ಕಾಣುತ್ತವೆ.