ಕಡಿಮೆ ಆಗುತ್ತಿಲ್ಲ ಬ್ರಹ್ಮಾಸ್ತ್ರದ ಓಟ, ಇಲ್ಲಿ ತನಕ ಬ್ರಹ್ಮಾಸ್ತ್ರ ಚಿತ್ರದ ಎಷ್ಟು ಟಿಕೆಟ್‌ಗಳು ಮಾರಾಟವಾಗಿವೆ ಗೊತ್ತೇ

ಸಾಲು ಸಾಲು ಸ್ಟಾರ್ ಸಿನಿಮಾಗಳೇ ಸೋತು ಕಂಗೆಟ್ಟಿರುವ ಬಾಲಿವುಡ್ಗೆ ಎನರ್ಜಿ ಬೂಸ್ಟ್ ಆಗುತ್ತಾ ಬ್ರಹ್ಮಾಸ್ತ್ರ ಸಿನಿಮಾ. ಈ ರೀತಿಯ ಪ್ರಶ್ನೆಯೊಂದು ಇದೀಗ ಬಾಲಿವುಡ್ ಅಂಗಳದಲ್ಲಿ ಜೋರಾಗಿ ಕೇಳಿ ಬರುತ್ತಿದೆ. ಯಾಕಪ್ಪಾ ಅಂದ್ರೆ ಬಾಲಿವುಡ್ ಸಿನಿಮಾಗಳು ಅದೂ ಕೂಡ ಸ್ಟಾರ್ ನಟರಾದ ಶಾರುಖ್ ಖಾನ್, ಅಮೀರ್ ಖಾನ್, ಅಕ್ಷಯ್ ಕುಮಾರ್ ಅಂತಹ ದಿಗ್ಗಜ ನಟರ ಸಿನಿಮಾಗಳೇ ಬಾಕ್ಸ್ ಅಫೀಸ್ ನಲ್ಲಿ ಸೋತು ಸುಣ್ಣವಾಗಿ ನೂರಾರು ಕೋಟಿ ನಷ್ಟವನ್ನ ಅನುಭವಿಸಿವೆ. ಪರಿಸ್ಥಿತಿ ಹೀಗಿರೋವಾಗ ಬರೋಬ್ಬರಿ 400 ಕೋಟಿಗೂ ಅಧಿಕ ವೆಚ್ಚದಲ್ಲಿ ತಯಾರಾಗಿರೋ ಬ್ರಹ್ಮಾಸ್ತ್ರ ಸಿನಿಮಾದ ಕಥೆ ಏನು ಅನ್ನೋ ಪ್ರಶ್ನೆ ಮೂಡಿದೆ. ಆದರೆ ಇದೇ ಮೊದಲ ಬಾರಿಗೆ ರಣ್ ಬೀರ್ ಕಪೂರ್ ಮತ್ತು ನಟಿ ಆಲಿಯಾ ಭಟ್ ತೆರೆ ಹಂಚಿಕೊಂಡಿರೋ ಬ್ರಹ್ಮಾಸ್ತ್ರ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಸದ್ದು ಮಾಡುವ ಮುನ್ಸೂಚನೆ ನೀಡಿದೆ.

ನಟಿ ಆಲಿಯಾ ಭಟ್ ಸದ್ಯಕ್ಕೆ ಭಾರತೀಯ ಚಿತ್ರರಂಗದಲ್ಲಿ ಅಪಾರ ಜನಪ್ರಿಯತೆ ಹೊಂದಿದ್ದು ಸಾಲು ಸಾಲು ಹಿಟ್ ಸಿನಿಮಾಗಳನ್ನ ನೀಡುವ ಭಾರಿ ಬೇಡಿಕೆಯ ನಟಿಯಾಗಿ ಮಿಂಚುತ್ತಿದ್ದಾರೆ. ಆಲಿಯಾ ಭಟ್ ಅವರಿಗೆ ಈಗಾಗಲೇ ಸಖತ್ ಕ್ರೇಜ಼್ ಇದೆ. ಫ್ಯಾಂಟಸಿ ಅಡ್ವೆಂಚರ್ ಕಥಾ ಹಂದರ ಹೊಂದಿರೋ ಬ್ರಹ್ಮಾಸ್ತ್ರ ಸಿನಿಮಾ ಮೂರು ಭಾಗಗಳಾಗಿ ಮೂಡಿ ಬರುತ್ತಿದೆ. ಚಿತ್ರದ ನಾಯಕರಾಗಿ ರಣ್ ಬೀರ್ ಕಪೂರ್, ನಾಯಕಿಯಾಗಿ ಆಲಿಯಾ ಭಟ್ ನಟಿಸಿದ್ದು, ಪ್ರಧಾನ ಪಾತ್ರಗಳಲ್ಲಿ ಅಮಿತಾಬ್ ಬಚ್ಚನ್, ಅಕ್ಕಿನೇನಿ ನಾಗರ್ಜುನ್, ಮೌನಿರಾಯ್, ಡಿಂಪಲ್ ಕಪಾಡಿಯಾ ಕಾಣಿಸಿಕೊಂಡಿದ್ದಾರೆ. ಇದೇ ಸೆಪ್ಟೆಂಬರ್ 9ಕ್ಕೆ ಪ್ಯಾನ್ ಇಂಡಿಯಾ ಬ್ರಹ್ಮಾಸ್ತ್ರ ಭಾಗ1 ಶಿವ ಚಿತ್ರ ವಿಶ್ವದಾದ್ಯಂತ ಅದ್ದೂರಿಯಾಗಿ ರಿಲೀಸ್ ಆಗಲಿದೆ.

ಬರೋಬ್ಬರಿ ಎಂಟು ಸಾವಿರ ಪರದೆಗಳಲ್ಲಿ ಬ್ರಹ್ಮ್ಮಾಸ್ತ್ರ ಸಿನಿಮಾ ರಾರಾಜಿಸಲಿದೆ. ಈಗಾಗಲೇ ಅಡ್ವಾನ್ಸ್ ಬುಕ್ಕಿಂಗ್ ಆರಂಭವಾಗಿದ್ದು, ಮಲ್ಟಿಪ್ಲೆಕ್ಸ್, ಪಿವಿಆರ್ ಸಿನಿಮಾಸ್ ಗಳಲ್ಲಿ ಸರಿ ಸುಮಾರು ಅರವತ್ತು ಸಾವಿರಕ್ಕೂ ಅಧಿಕ ಟಿಕೆಟ್ ಗಳು ಸೋಲ್ಡ್ ಔಟ್ ಆಗಿವೆ. ಈ ಬ್ರಹ್ಮಾಸ್ತ್ರ ಸಿನಿಮಾ ನೋಡಲು ಪ್ರೇಕ್ಷಕರು ತುದಿಗಾಲಲ್ಲಿ ನಿಂತಿದ್ದಾರೆ. ಅದರ ಜೊತೆಗೆ ಇಡೀ ಬಾಲಿವುಡ್ ರಂಗವೇ ಈ ಬ್ರಹ್ಮಾಸ್ತ್ರ ಸಿನಿಮಾದ ಬಗ್ಗೆ ಅಪಾರ ನಿರೀಕ್ಷೆ ಇಟ್ಟುಕೊಂಡಿದೆ. ಅಯಾನ್ ಮುಖರ್ಜಿ ಆಕ್ಷನ್ ಕಟ್ ಹೇಳಿರೋ ಬ್ರಹ್ಮಾಸ್ತ್ರ ಸಿನಿಮಾಗೆ ನಟ ರಣ್ ಬೀರ್ ಕಪೂರ್, ಕರಣ್ ಜೋಹಾರ್ ಜೊತೆಗೆ ಅಪೂರ್ವ ಮೆಹ್ತಾ, ನಮಿತ್ ಮಲ್ಹೋತ್ರಾ, ಮರೀಜ್ ಕೆ ಡಿಸೋಜಾ ಸೇರಿದಂತೆ ನಿರ್ದೇಶಕ ಅಯಾನ್ ಅವರು ಕೂಡ ಬಂಡವಾಳ ಹೂಡಿಕೆ ಮಾಡಿದ್ದಾರೆ.

ಬ್ರಹ್ಮಾಸ್ತ್ರ ಸಿನಿಮಾ ಈಗಾಗಲೇ ಅಡ್ವಾನ್ಸ್ ಬುಕ್ಕಿಂಗ್ ಮೂಲಕವೇ ಕೋಟಿ ಕೋಟಿ ಬಾಚುತ್ತಿದೆ. ಬ್ರಹ್ಮಾಸ್ತ್ರ ಸಿನಿಮಾ ಹಿಂದಿ ಸೇರಿದಂತೆ ಕನ್ನಡ, ತೆಲುಗು, ತಮಿಳು, ಮಲೆಯಾಳಂ ಭಾಷೆಗಳಲ್ಲಿ ರಿಲೀಸ್ ಆಗುತ್ತಿದ್ದು ಮೂಲಗಳ ಪ್ರಕಾರ ಈ ಚಿತ್ರ ಮೊದಲ ದಿನದಲ್ಲೇ ಸರಿ ಸುಮಾರು 20-22 ಕೋಟಿವರೆಗೆ ಕಲೆಕ್ಷನ್ ಮಾಡುತ್ತದೆ ಎಂದು ಲೆಕ್ಕಾಚಾರ ಹಾಕಿದ್ದಾರೆ. ಇನ್ನೊಂದು ಪ್ರಮುಖ ವಿಚಾರ ಏನಪ್ಪಾ ಅಂದ್ರೆ ಟಾಲಿವುಡ್ ಖ್ಯಾತ ನಿರ್ದೇಶಕ ರಾಜಮೌಳಿ ಅವರು ತೆಲುಗಿನಲ್ಲಿ ಈ ಬ್ರಹ್ಮಾಸ್ತ್ರ ಸಿನಿಮಾವನ್ನ ಪ್ರೆಸೆಂಟ್ ಮಾಡುತ್ತಿದ್ದಾರೆ. ಬ್ರಹ್ಮಾಸ್ತ್ರ ಸಿನಿಮಾಗೆ ಅತಿ ದೊಡ್ಡ ಪ್ಲಸ್ ಪಾಯಿಂಟ್ ಅಂದ್ರೆ ಈ ಸಮಯದಲ್ಲಿ ಯಾವುದೇ ಸ್ಟಾರ್ ನಟರ ಸಿನಿಮಾಗಳು ರಿಲೀಸ್ ಆಗುತ್ತಿಲ್ಲ. ಹಾಗಾಗಿ ಬ್ರಹ್ಮಾಸ್ತ್ರ ಸಿನಿಮಾ ಒಂದೊಳ್ಳೆ ಓಪನಿಂಗ್ ಪಡೆದುಕೊಳ್ಳುವ ಸಾಧ್ಯತೆಯಿದೆ ಎಂದು ಹೇಳಲಾಗ್ತಿದೆ.

Leave a Reply

%d bloggers like this: