ಕಚ್ಚಾ ಬಾದಾಮ್ ಗಾಯಕ ‘ಬುಬನ್ ಬಡ್ಯಾಕರ್’ ಅಪಘಾತ ಗಾಯಗೊಂಡು ಆಸ್ಪತ್ರೆಗೆ ದಾಖಲು

ಕಚ್ಚಾ ಬಾದಾಮ್ ಹಾಡಿನ ಮೂಲಕ ದೇಶಾದ್ಯಂತ ಅಪಾರ ಜನಪ್ರಿಯತೆ ಪಡೆದು ಗಾಯಕರಾಗಿ ಮಿಂಚುತ್ತಿರುವ ಬುಬನ್ ಬಡ್ಯಾಕರ್ ಅವರಿಗೆ ಅಪಘಾತವಾಗಿದೆ. ಇದೀಗ ಸದ್ಯಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೌದು ಕಳೆದ ಕೆಲವು ತಿಂಗಳೀಚೆಗೆ ಸೋಶಿಯಲ್ ಮೀಡಿಯಾ ಪೂರಾ ಸಖತ್ ಸದ್ದು ಮಾಡುತ್ತಿರುವ ಹಾಡು ಅಂದರೆ ಅದು ಕಚ್ಚಾ ಬಾದಮ್ ಹಾಡು. ಸಾಮಾನ್ಯ ಜನರಿಂದ ಹಿಡಿದು ಇಂಡಿಯನ್ ಸಿನಿಮಾದ ಬಹುತೇಕ ಸ್ಟಾರ್ ನಟ-ನಟಿಯರು ಕಚ್ಚಾ ಬಾದಾಮ್ ರೀಮಿಕ್ಸ್ ಹಾಡಿಗೆ ರೀಲ್ಸ್ ಮಾಡಿ ಮಸ್ತ್ ಮಸ್ತ್ ಹೆಜ್ಜೆ ಇಡುತ್ತಿದ್ದಾರೆ. ಈ ಮೂಲಕ ಕಚ್ಚಾ ಬಾದಾಮ್ ಹಾಡು ಪ್ರಸಿದ್ದ ಆಗುತ್ತಿದ್ದಂತೆ ಇದರ ಮೂಲ ಗಾಯಕ ಬೂಬನ್ ಅವರು ದಿನ ಬೆಳಗಾಗದರೊಳಗೆ ಸ್ವಾರ್ ಗಾಯಕರಾಗಿ ಜನಪ್ರಿಯತೆ ಪಡೆದುಕೊಳ್ಳುತ್ತಿದ್ದಾರೆ. ಪಶ್ಚಿಮ ಬಂಗಾಳ ದ ಬೂಬನ್ ಅವರು ಸಾಮಾನ್ಯ ಕಡ್ಲೆ ಕಾಯಿ ವ್ಯಾಪಾರಿಯಾಗಿದ್ದು, ಈ ಕಡ್ಲೆ ಕಾಯಿ ಮಾರಾಟ ಮಾಡಿಕೊಂಡು ತನ್ನ ಕುಟುಂಬ ನಿರ್ವಹಣೆ ಮಾಡುತ್ತಿರುತ್ತಾರೆ.

ಆದರೆ ತನ್ನ ಕಡಲೆಕಾಯಿ ವ್ಯಾಪಾರ ಕಡಿಮೆ ಆದ ಕಾರಣ ರಾಗಬದ್ದವಾಗಿ ಕಚ್ಚಾ ಬಾದಾಮ್ ಕಚ್ಚಾ ಬಾದಾಮ್ ಎಂದು ಪದ ಕಟ್ಟಿ ಹಾಡುತ್ತಾ ಊರೂರಿಗೆ ಹೋಗಿ ವ್ಯಾಪಾರ ಮಾಡುತ್ತಿರುತ್ತಾರೆ. ಇದೇ ಸಾಂಗ್ ಅನ್ನು ರ್ಯಾಪರ್ ಯೂಟ್ಯೂಬರ್ ಒಬ್ಬರು ರೀಮಿಕ್ಸ್ ಮಾಡಿ ಕಚ್ಛಾ ಬಾದಾಮ್ ಎಂದು ಆಲ್ಬಂ ಸಾಂಗ್ ಮಾಡುತ್ತಾರೆ. ಇದು ರಾತ್ರೋ ರಾತ್ರಿ ಯೂಟ್ಯೂಬ್ ನಲ್ಲಿ ಭಾರಿ ಜನಪ್ರಿಯತೆ ಪಡೆದುಕೊಂಡು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತದೆ. ಅದು ಯಾವ ಮಟ್ಟಿಗೆ ಅಂದರೆ ದೇಶಾದ್ಯಂತ ಯುವ ಜನರು ಅದರಲ್ಲೂ ಅಪಾರ ಸಂಖ್ಯೆಯಲ್ಲಿ ಹುಡುಗಿಯರು ಈ ಕಚ್ಚಾ ಬಾದಾಮ್ ಆಲ್ಬಂ ಹಾಡಿಗೆ ರೀಲ್ಸ್ ಮಾಡಿ ಸಖತ್ ಸ್ಟೆಪ್ ಹಾಕುತ್ತಿದ್ದಾರೆ.

ಇದೀಗ ಕಚ್ಚಾ ಬಾದಾಮ್ ಹಾಡು ಎಲ್ಲ ಕಡೆ ಸಖತ್ ಫೇಮಸ್ ಆಗಿದೆ. ಅದರಂತೆ ಈ ಹಾಡಿನ ಮೂಲ ಗಾಯಕ ಬುಬನ್ ಬಡ್ಯಾಕರ್ ಅವರು ಕೂಡ ಅಪಾರ ಜನಪ್ರಿಯತೆ ಪಡೆದುಕೊಂಡ ಲಕ್ಷಾಧೀಶ್ವರ ಆಗುತ್ತಾರೆ. ಅದರಂತೆ ತಮಗೆ ಬಂದ ಹಣದಲ್ಲಿ ಸೆಕೆಂಡ್ ಹ್ಯಾಂಡ್ ಕಾರ್ ವೊಂದನ್ನು ಖರೀದಿ ಮಾಡುತ್ತಾರೆ. ಖರೀದಿಸಿದ ಕಾರಿನಲ್ಲಿ ಡ್ರೈವಿಂಗ್ ಕಲಿಯುತ್ತಿದ್ದಾಗ ಅಪಘಾತವಾಗಿದೆ. ಈ ಅಪಘಾತದಲ್ಲಿ ಬುಬನ್ ಅವರಿಗೆ ಕೊಂಚ ಗಾಯ ಕೂಡ ಆಗಿದೆ. ತದ ನಂತರ ಇದೀಗ ಪ್ರತಿಷ್ಟಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದುಚೇತರಿಸಿಕೊಳ್ಳುತ್ತಿದ್ದಾರಂತೆ. ಒಟ್ಟಾರೆಯಾಗಿ ತನ್ನ ಹೊಟ್ಟೆ ಪಾಡಿಗಾಗಿ ಮಾಡಿದ ಹಾಡೊಂದು ರಾತ್ರೋ ರಾತ್ರಿ ಸ್ಟಾರ್ ಪಟ್ಟ ತಂದುಕೊಟ್ಟು ಇಂದು ದೇಶಾದ್ಯಂತ ಹೆಸರು ವಾಸಿಯಾಗಿದ್ದಾರೆ.

Leave a Reply

%d bloggers like this: