ಕಚ್ಚಾ ಬಾದಾಮ್ ಒಂದೇ ಒಂದು ಹಾಡಿನಿಂದ ಈತ ಗಳಿಸಿದ ಮೊತ್ತ ಹಣವೆಷ್ಟು ಗೊತ್ತಾ? ನೋಡಿ ಒಮ್ಮೆ

ತನ್ನ ವ್ಯಾಪಾರಕ್ಕಾಗಿ ತಾನೇ ಪದಕಟ್ಟಿ ಹಾಡಿದ ಈ ಹಾಡು ಇದೀಗ ಸೋಶಿಯಲ್ ಮೀಡಿಯಾ ಮೂಲಕ ಜಗತ್ತಿನಾದ್ಯಂತ ಪ್ರಸಿದ್ದವಾಗಿ ಈ ವ್ಯಕ್ತಿಗೆ ಇದೀಗ ಸ್ಟಾರ್ ಸಿಂಗರ್ ಆಗಿದ್ದಾನೆ. ಅಷ್ಟೇ ಅಲ್ಲದೆ ಅಚ್ಚರಿಯಂತೆ ತಾನು ದಿನ ಬೆಳಗಾಗೋದೊರಳಗೆ ಪಡೆದ ಜನಪ್ರಿಯತೆ ಕಂಡು ನಿಬ್ಬೆರಗಾಗಿದ್ದಾನೆ. ಹೌದು ಅದೃಷ್ಟ ಎಂಬ ರೇಖೆಯೊಂದು ಯಾವಾಗ ಯಾರನ್ನ ಏನು ಬೇಕಾದರು ಮಾಡಬಹುದು. ಅದೂ ಬೀದಿಯಲ್ಲಿ ಹೋಗುತ್ತಿರುವನ್ನ ದಿನ ಬದಲಾಗುವಷ್ಟರಲ್ಲಿ ಕೋಟ್ಯಾಧೀಶ್ವರನಾಗಿ ಮಾಡಬಹುದು. ಆದರೆ ಇದು ಎಲ್ಲಾರಿಗೂ ಸಾಧ್ಯವಾಗುತ್ತದೆ ಎಂದು ಹೇಳಲಾಗುವುದಿಲ್ಲ. ಋಣಾನುಬಂಧ ರೂಪೇಣ ಪಶುಪತಿ ಸುತಾಲಯ ಅನ್ನುವ ಹಾಗೇ ಯಾರಿಗೆ ಯಾವ ಕ್ಷೇತ್ರದಲ್ಲಿ ಹೆಸರು ಬರೆದಿರುತ್ತದೆಯೋ ಅವರು ಆ ಕ್ಷೇತ್ರದಲ್ಲಿ ಮುಂಚೂಣಿಗೆ ಬಂದು ಹೊಸದೊಂದು ಸಂಚಲನ ಸೃಷ್ಟಿ ಮಾಡಿಯೇ ಮಾಡುತ್ತಾರೆ.

ಅಂತೆಯೇ ಇದೀಗ ಪಶ್ಚಿಮ ಬಂಗಾಳದ ಕಡಲೆಕಾಯಿ ವ್ಯಾಪಾರಿಯೊಬ್ಬ ತನ್ನ ವ್ಯಾಪಾರ ಹೆಚ್ಚಾಗಲಿ ಎಂದು ಪ್ರಾಸಬದ್ದವಾಗಿ ಪದ ಕಟ್ಟಿಕೊಂಡು ಹಾಡೊಂದನ್ನ ರಚಿಸಿಕೊಂಡಿರುತ್ತಾನೆ. ಈ ಕಡ್ಲೆಕಾಯಿ ವ್ಯಾಪಾರಿಯ ಹೆಸರು ಬೂಬನ್ ಬಡಿಯಾಂಕರ್. ಇವನು ಪಶ್ಚಿಮ ಬಂಗಾಳದ ಒಂದು ಪುಟ್ಟ ಗ್ರಾಮದ ಬಡ ಕಡೆಲೆಕಾಯಿ ವ್ಯಾಪಾರಿ. ಈತ ಸೈಕಲ್ ಹಿಂದೆ ಬುಟ್ಟಿ ಕಟ್ಟಿಕೊಂಡು ಊರೂರು ಸುತ್ತುತ್ತಾ ಹೀಗೆ ತನ್ನ ಕಡೆಲೆಕಾಯಿ ವ್ಯಾಪಾರ ಮಾಡುತ್ತಿರುತ್ತಾನೆ. ಅದ್ಯಾಕೋ ತನ್ನ ವ್ಯಾಪಾರ ಪರಿಣಾಮಕಾರಿ ಆಗುತ್ತಿರಲಿಲ್ಲ. ಆಗ ವಿಭಿನ್ನವಾಗಿ ಒಂದು ಆಲೋಚನೆ ಮಾಡುತ್ತಾನೆ ಈ ಬೂಬನ್ ಬಡಿಯಾಂಕರ್.

ಅದೇನಪ್ಪಾ ಅಂದರೆ ತನ್ನ ಕಡೆಲೆಕಾಯಿ ಸೇಲ್ ಆಗುವಂತೆ ಪ್ರಾಸಬದ್ದವಾಗಿ ಕಚ್ಚಾ ಬಾದಮ್ ಕಚ್ಚಾ ಬಾದಮ್ ಎಂದು ಹಾಡನ್ನ ಹಾಡುವ ಮೂಲಕ ಗ್ರಾಹಕರನ್ನ ತನ್ನತ್ತ ಗಮನ ಹರಿಸುವಂತೆ ಮಾಡುತ್ತಾನೆ‌. ಈತ ತನ್ನ ಕಡಿಮೆ ಬೆಲೆಯ ಕಡೆಲೆಕಾಯಿ ಎಂಬುದನ್ನ ಬೆಂಗಾಲಿ ಭಾಷೆಯಲ್ಲಿ ಕಚ್ಚಾ ಬಾದಾಮ್ ಎಂದು ಊರೂರು ಸುತ್ತುತ್ತಾ ಕಡ್ಲೆಕಾಯಿ ವ್ಯಾಪಾರ ಮಾಡುತ್ತಿರುತ್ತಾನೆ. ಇವರ ವ್ಯಾಪಾರಿ ಶೈಲಿಯನ್ನ ಕಂಡ ದಾರಿ ಹೋಕರೊಬ್ಬರು ಈ ಬಬೂನ್ ಹಾಡು ಹೇಳುತ್ತ ಕಡ್ಲೆ ಕಾಯಿ ವ್ಯಾಪಾರ ಮಾಡುತ್ತಿಲುವುದನ್ನ ವೀಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿ ಬಿಡುತ್ತಾನೆ. ಈ ಕಚ್ಚಾ ಬಾದಮ್ ಎಂಬ ಹಾಡಿನ ತುಣುಕು ಸೋಶೀಯಲ್ ಮೀಡಿಯಾದಲ್ಲಿ ದಿನ ಬೆಳಗಾಗದೊರೊಳಗೆ ಭಾರಿ ವೈರಲ್ ಆಗಿ ಬಿಡುತ್ತದೆ.

ಬಹು ತೇಕ ಹುಡುಗಿಯರು ಹುಡುಗರು ಈ ಕಚ್ಚಾ ಬಾದಾಮ್ ಹಾಡಿಗೆ ರೀಲ್ಸ್ ಮಾಡಲು ಆರಂಭ ಮಾಡುತ್ತಾರೆ. ಇಂದು ಸೋಶಿಯಲ್ ಮೀಡಿಯಾದಲ್ಲಿ ಈ ಕಚ್ಚಾ ಬಾದಮ್ ಹಾಡಿನ ರೀಲ್ಸ್ ಹುಡುಗಿಯರಿಗೆ ಮಾತ್ರ ಅಲ್ಲದೆ ಪುಟಾಣಿ ಮಕ್ಕಳಿಂದ ಹಿಡಿದು ವಯೋವೃದ್ದರಿಗೂ ಕೂಡ ಈ ಹಾಡು ಭಾರಿ ಇಷ್ಟವಾಗಿದೆ. ಈ ಕಚ್ಚಾ ಬಾದಾಮ್ ಹಾಡಿಗೆ ಒಬ್ಬರಿಗಿಂತ ಒಬ್ಬರು ತಾನು ಹೆಚ್ಚು ತಾನು ಹೆಚ್ಚು ಎಂಬಂತೆ ಪೈಪೋಟಿಗೆ ಬಿದ್ದವರಂತೆ ರೀಲ್ಸ್ ಈ ಕಚ್ಚಾ ಬಾದಮ್ ಹಾಡಿಗೆ ಸಖತ್ ಸ್ಟೆಪ್ ಹಾಕುತ್ತಿದ್ದಾರೆ. ಗಮನ ಸೆಳೆಯುತ್ತಿರುವುದು ಅಂದರೆ ಸೋಶಿಯಲ್ ಮೀಡಿಯಾದಲ್ಲಿ ಬಹುತೇಕ ಸಿನಿಮಾ, ಧಾರಾವಾಹಿ ಸ್ಟಾರ್ಸ್ಸ್ ಸೇರಿದಂತೆ ಬಹುತೇಕ ಯುವತಿಯರು ತಮ್ಮ ಡ್ಯಾನ್ಸ್ ಟ್ಯಾಲೆಂಟ್ ಅನ್ನು ಬೂಬನ್ ಅವರ ಈ ಕಚ್ಚಾ ಬಾದಾಮ್ ಹಾಡಿನ ಮೂಲಕ ಪ್ರದರ್ಶನ ಮಾಡುತ್ತಿದ್ದಾರೆ.

ಇನ್ನು ಈ ಕಚ್ಚಾ ಬಾದಾಮ್ ಹಾಡಿನ ರುವಾರಿಯಾಗಿರುವ ಬೂಬನ್ ಬಡಿಯಾಂಕಾರ್ ಈ ಹಾಡಿನ ಮೂಲಕ ಸ್ಟಾರ್ ಸಿಂಗರ್ ಆಗಿ ಬಿಟ್ಟಿದ್ದಾರೆ. ಕಚ್ಚಾ ಬಾದಾಮ್ ಹಾಡನ್ನ ರೀಮಿಕ್ಸ್ ಆಲ್ಬಂ ಸಾಂಗ್ ಮಾಡಿರುವ ಒಂದಿಷ್ಟು ಯೂಟ್ಯೂಬರ್ಸ್ ಬೂಬನ್ ಅವರಿಂದಾನೇ ಈ ಕಚ್ಚಾ ಬಾದಾಮ್ ಆಲ್ಬಂ ಸಾಂಗ್ ಹಾಡಿಸಿದ್ದಾರೆ. ಅವರಿಗೆ ಲಕ್ಷಾಂತರ ರೂ. ಗಳ ಪೇಮೆಂಟ್ ಕೂಡ ನೀಡಿದ್ದಾರೆ. ಈ ನಮ್ಮ ಲೇಖನ ನಿಮಗೆ ಇಷ್ಟವಾದಲ್ಲಿ ಶೇರ್ ಮಾಡಿ ಮತ್ತು ಲೈಕ್ ಮಾಡಿ. ಮತ್ತಷ್ಟು ಹೊಸ ಹೊಸ ಸುದ್ದಿಗಳಿಗಾಗಿ ನಮ್ಮ ಪೇಜ್ ನ್ನು ತಪ್ಪದೆ ಲೈಕ್ ಮಾಡಿ.

Leave a Reply

%d bloggers like this: