ಕಬ್ಜನ ರಾಣಿಗೆ ಒಂದು ಕೋಟಿ ಬೆಲೆಯ ಡೈಮಂಡ್ ನೆಕ್ಲೇಸ್ ಹಾಗೂ ದುಬಾರಿ ಸೀರೆಗಳು

ಸ್ಯಾಂಡಲ್ ವುಡ್ ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಕಬ್ಜ ಸಿನಿಮಾದ ಟೀಸರ್ ಇತ್ತೀಚೆಗೆ ಬೆಂಗಳೂರಿನ ಓರಾಯನ್ ಮಾಲ್ ನಲ್ಲಿ ಗ್ರ್ಯಾಂಡ್ ಆಗಿ ರಿಲೀಸ್ ಆಯ್ತು. ಈ ಕಬ್ಜ ಚಿತ್ರದ ಟೀಸರ್ ಅನ್ನ ತೆಲುಗಿನ ಸ್ಟಾರ್ ನಟ ರಾಣಾ ದಗ್ಗುಬಾಟಿ ಅವರು ಲಾಂಚ್ ಮಾಡಿದ್ರು. ಈ ಟೀಸರ್ ಲಾಂಚ್ ಇವೆಂಟ್ ಕಾರ್ಯಕ್ರಮಕ್ಕೆ ನಿರ್ಮಾಪಕ ಕೆಪಿ ಶ್ರೀಕಾಂತ್, ರಾಣಾ ದಗ್ಗುಬಾಟಿ, ನಟಿ ಶ್ರೀಯಾ ಶರಣ್, ಉದ್ಯಮಿ ಬಿ.ಆರ್.ಶೆಟ್ಟಿ ಸೇರಿದಂತೆ ಒಂದಷ್ಟು ಮಂದಿ ಗಣ್ಯರು ಭಾಗವಹಿಸಿದ್ದರು. ಕಬ್ಜ ಸಿನಿಮಾದ ಟೀಸರ್ ಕಂಡು ಎಲ್ಲರೂ ಕೂಡ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು. ಈಗಾಗಲೇ ಈ ಕಬ್ಬ ಟೀಸರ್ ಬರೋಬ್ಬರಿ ಇಪ್ಪತ್ತೈದು ಮಿಲಿಯನ್ ಅಂದರೆ ಎರಡುವರೆ ಕೋಟಿಗೂ ಅಧಿಕ ವೀಕ್ಷಣೆ ಪಡೆದು ದಾಖಲೆ ನಿರ್ಮಾಣ ಮಾಡುವತ್ತ ಹೊರಟಿದೆ.

ಟೀಸರ್ ನಲ್ಲಿ ಅದ್ದೂರಿ ಮೇಕಿಂಗ್, ದುಬಾರಿ ಬೆಲೆಯ ಸೆಟ್ ಗಳನ್ನ ಕಾಣಬಹುದು. ಅದೇ ರೀತಿಯಾಗಿ ನಿರ್ದೇಶಕ ಆರ್.ಚಂದ್ರು ಅವರೇ ಸ್ವತಃ ಹೇಳಿದಂತೆ ಪ್ರತಿಯೊಂದು ಪಾತ್ರಗಳಿಗೂ ಕೂಡ ಬಹಳ ಪ್ರಾಮುಖ್ಯತೆ ನೀಡಿದ್ದು, ಆಯಾಯ ಪಾತ್ರಕ್ಕೆ ಬೇಕಾದ ಎಲ್ಲಾ ರೀತಿಯ ವಸ್ತ್ರ ವಿನ್ಯಾಸ, ಉಡುಗೆ ತೊಡುಗೆಗಳನ್ನ ಹಾಕಲಾಗಿದೆಯಂತೆ. ಈ ಕಬ್ಜ ಸಿನಿಮಾದ 70-80ರ ದಶಕದ ಅಂಡರ್ ವರ್ಲ್ಢ್ ಕಥೆ ಆಗಿರೋದ್ರಿಂದ ಈ ಚಿತ್ರದ ಪ್ರತಿಯೊಂದು ಸನ್ನಿವೇಶ, ಅಂದಿನ ದಿನಗಳಲ್ಲಿ ಇದ್ದಂತಹ ಉಡುಪುಗಳು, ವೇಷ ಭೂಷಣ ಎಲ್ಲವೂ ಕೂಡ ಹಳೆ ಕಾಲದಂತೆ ಇದ್ದಂತೆ ಪಾತ್ರಗಳಿಗೆ ಒದಗಿಸಬೇಕಾಗಿರುತ್ತದೆ. ಹಾಗಾಗಿ ಆರ್.ಚಂದ್ರು ಅವರು ಕಬ್ಜ ಸಿನಿಮಾದಲ್ಲಿನ ಪ್ರತಿಯೊಂದು ಪಾತ್ರ ಕೂಡ 70-80ರ ದಶಕದಲ್ಲಿ ಇದ್ದಂತಹ ಉಡುಡು ವೇಷ ಭೂಷಣ ಒಡವೆಗಳನ್ನ ಹಾಕಲಾಗಿದೆಯಂತೆ.

ಕೆಜಿಎಫ್ ಚಿತ್ರದಲ್ಲಿ ರಾಣಿಯಾಗಿ ಕಾಣಿಸಿಕೊಂಡಿದ್ದ ಶ್ರೀ ನಿಧಿ ಶೆಟ್ಟಿ ಹಾಕಿದ್ದ ಒಡವೆಗಿಂತಲೂ ಕಬ್ಜ ಸಿನಿಮಾದಲ್ಲಿ ರಾಣಿ ಆಗಿ ಕಾಣಿಸಿಕೊಂಡಿರೋ ನಟಿ ಶ್ರೀಯಾ ಶರಣ್ ಅವರು ಧರಿಸಿರೋ ಒಡವೆ ಭಾರಿ ದುಬಾರಿಯಂತೆ. ಕಬ್ಜ ಸಿನಿಮಾದಲ್ಲಿ ರಾಣಿಯಾಗಿ ಕಾಣಿಸಿಕೊಂಡಿರೋ ನಟಿ ಶ್ರೀಯಾ ಶರಣ್ ಅವರು ಧರಿಸಿದ್ದ ಒಡವೆ ಬೆಲೆ ಬರೋಬ್ಬರಿ ಕೋಟಿ ರೂ.ಮೌಲ್ಯದ್ದು ಎಂದು ತಿಳಿದು ಬಂದಿದೆ. ಈ ವಿಚಾರ ಸ್ಯಾಂಡಲ್ ವುಡ್ ಮಂದಿಗೆ ಅಚ್ಚರಿ ಉಂಟು ಮಾಡಿದೆ. ಇನ್ನು ಕಬ್ಜ ಸಿನಿಮಾದ ಟೀಸರ್ ನೋಡಿದವರು ಇದು ಕೆಜಿಎಫ್ ರೀತಿಯೇ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಅದಕ್ಕೆ ಕಾರಣ ಕೆಜಿಎಫ್ ಚಿತ್ರಕ್ಕೆ ಕೆಲಸ ಮಾಡಿದ್ದ ಕಲಾ ನಿರ್ದೇಶಕ ಶಿವಕುಮಾರ್, ಮ್ಯೂಸಿಕ್ ಡೈರೆಕ್ಟರ್ ರವಿ ಬಸ್ರೂರ್ ಅವರೇ ಕಬ್ಜ ಸಿನಿಮಾಗೆ ಕೆಲಸ ಮಾಡಿದ್ದಾರೆ. ಹಾಗಾಗಿಯೇ ಕಬ್ಜ ಸಿನಿಮಾದ ಮೇಕಿಂಗ್, ಬಿಜಿಎಮ್ ಕ್ವಾಲಿಟಿ ಕೆಜಿಎಫ್ ಚಿತ್ರದಂತೆ ಕಾಣುತ್ತಿದೆ.
ಇನ್ನು ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ ಈ ಕಬ್ಜ ಸಿನಿಮಾ ರಾಷ್ಟ್ರ ಮಟ್ಟದಲ್ಲಿ ಮತ್ತೆ ಒಂದು ಬಿಗ್ ಬ್ರೇಕ್ ನೀಡಲಿದೆ ಎಂದು ಹೇಳಲಾಗ್ತಿದೆ. ಕಬ್ಜ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಿಚ್ಚ ಸುದೀಪ್ ಕೂಡ ಕಾಣಿಸಿಕೊಂಡಿದ್ದಾರೆ. ಟೀಸರ್ ನಲ್ಲಿ ಅವರ ಲುಕ್ ಕಂಡು ಅವರ ಅಭಿಮಾನಿಗಳು ಸಖತ್ ಸರ್ಪ್ರೈಸ್ ಆಗಿದ್ದಾರೆ. ಒಟ್ಟಾರೆಯಾಗಿ ಕಬ್ಜ ಸಿನಿಮಾ ಕೆಜಿಎಫ್ ಅಂತೆಯೇ ಬಹಳ ರಿಚ್ ಆಗಿಯೇ ಮೂಡಿ ಬಂದಿದೆ ಎಂದು ಸಿನಿ ಪ್ರೇಕ್ಷಕರು ಮಾತನಾಡುತ್ತಿದ್ದಾರೆ.

Leave a Reply

%d bloggers like this: