‘ಕಬ್ಜಾ’ ಚಿತ್ರಕ್ಕೆ ಬಂಗಾರದ ಬೆಲೆ, ಭಾರತ ಅಷ್ಟೇ ಅಲ್ಲ ವಿದೇಶಗಳಿಂದಲೂ ಬೇಡಿಕೆ

ಕಬ್ಜ ಸಿನಿಮಾ ಟೀಸರ್ ನೋಡಿ ದಂಗಾದ ಸಿನಿಮಾ ವಿತರಣೆ ಹಕ್ಕು ಕೊಳ್ಳಲು ಮುಗಿಬಿದ್ದ ಪರಭಾಷಾ ಸಿನಿಮಾ ವಿತರಕರು. ಸ್ಯಾಂಡಲ್ ವುಡ್ ರಿಯಲ್ ಸ್ಟಾರ್ ಉಪೇಂದ್ರ ಮತ್ತು ಕಿಚ್ಚ ಸುದೀಪ್ ಅಭಿನಯದ ಕಬ್ಜ ಸಿನಿಮಾದ ಟೀಸರ್ ಲಾಂಚ್ ಆಗಿದ್ದೇ ತಡ ಇಡೀ ಭಾರತೀಯ ಚಿತ್ರರಂಗ ಕೆಜಿಎಫ್ ರೀತಿಯಾಗಿ ಕನ್ನಡದ ಮತ್ತೊಂದು ಸಿನಿಮಾ ಬರ್ತಿದೆ ಅಂತ ಮಾತನಾಡಿಕೊಳ್ತಿದೆ. ಅಷ್ಟರ ಮಟ್ಟಿಗೆ ಕಬ್ಜ ಸಿನಿಮಾದ ಮೇಕಿಂಗ್, ಬಿಜಿಎಮ್ ಅದ್ದೂರಿಯಾಗಿ ಮೂಡಿ ಬಂದಿದೆ. ಕಬ್ಜ ಸಿನಿಮಾ ಟೀಸರ್ ನೋಡಿದ ಪ್ರತಿಯೊಬ್ಬರು ಕೂಡ ಅಪಾರ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಕಬ್ಜ ಸಿನಿಮಾದ ನಿರ್ದೇಶಕ ಕಮ್ ನಿರ್ಮಾಪಕ ಆರ್.ಚಂದ್ರು ಅವರು ಉಪ್ಪಿ ಬರ್ಥ್ ಡೇ ದಿನದವರೆಗೆ ಯಾವುದೇ ರೀತಿಯ ಅಪ್ ಡೇಟ್ ಕೊಟ್ಟಿರಲಿಲ್ಲ. ಆದರೆ ಉಪ್ಪಿ ಅವರ ಜನ್ಮದಿನದ ಹಿಂದಿನ ದಿನ ಕಬ್ಜ ಸಿನಿಮಾದ ಟೀಸರ್ ಅನ್ನ ಅದ್ದೂರಿಯಾಗಿ ರಿಲೀಸ್ ಮಾಡಿದ್ರು.

ಯಾರಿಗೂ ಕಬ್ಜ ಸಿನಿಮಾದ ಟೀಸರ್ ಈ ಮಟ್ಟಿಗೆ ರಿಚ್ ಆಗಿ ಇರುತ್ತದೆ ಎಂದು ನಿರೀಕ್ಷೆಯೇ ಇರ್ಲಿಲ್ಲ. ಆದ್ರೇ ಯಾವಾಗ ಡೈನಾಮೆಟ್ ಸಿಡಿಯೋ ಹಾಗೇ ಕಬ್ಜ ಸಿನಿಮಾ ಟೀಸರ್ ಲಾಂಚ್ ಆಯ್ತೋ ಆಗ ಕಬ್ಜ ಸಿನಿಮಾದ ಬಗ್ಗೆ ಕೇವಲವಾಗಿ ಮಾತನಾಡ್ತಿದ್ದವರೆಲ್ಲಾ ಒಮ್ಮೆಲೆ ಸೈಲೆಂಟ್ ಆಗ್ಬಿಟ್ರು. ಕಬ್ಜ ಸಿನಿಮಾದ ಟೀಸರ್ ಲಾಂಚ್ ಮಾಡಿದ ಟಾಲಿವುಡ್ ಸ್ಟಾರ್ ನಟ ರಾಣಾ ದಗ್ಗುಬಾಟಿ ಶಾಕ್ ಆಗ್ಭಿಟ್ರು. ಇದೀಗ ಎಲ್ಲೆಡೆ ಒಂದೇ ಮಾತು. ಅದೇನಪ್ಪಾ ಅಂದರೆ ಕಬ್ಜ ಸಿನಿಮಾ ಕೆಜಿಎಫ್ ದಾಖಲೆಯನ್ನ ಉಡೀಸ್ ಮಾಡುತ್ತಾ ಎಂದು ಲೆಕ್ಕಾಚಾರ ಹಾಕ್ತಿದ್ದಾರೆ. ಸಿನಿಮಾ ಪಂಡಿತರು ಪ್ರಕಾರ ಕಬ್ಜ ಸಿನಿಮಾ ಸಾವಿರ ಕೋಟಿ ಗಡಿಯನ್ನ ಸುಲಭವಾಗಿ ಮುಟ್ಟುತ್ತೆ ಎಂದು ಹೇಳುತ್ತಿದ್ದಾರೆ. ಯಾಕಂದ್ರೆ ಕಬ್ಜ ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾ. ಟೀಸರ್ ರಿಲೀಸ್ ಗೂ ಮುನ್ನ ಐದು ಭಾಷೆಗಳಲ್ಲಿ ರಿಲೀಸ್ ಆಗುತ್ತೆ ಎಂದು ಹೇಳುತ್ತಿದ್ದರು.

ಆದರೆ ಕಬ್ಜ ಸಿನಿಮಾದ ಟೀಸರ್ ರಿಲೀಸ್ ಆದ ಒಂದೇ ದಿನದಲ್ಲಿ ಬರೋಬ್ಬರಿ ಎರಡೂವರೆ ಕೋಟಿಗೂ ಅಧಿಕ ದಾಖಲೆಯ ವೀಕ್ಷಣೆ ಕಂಡು ಎಲ್ಲರ ನಿಬ್ಬೆರಗಾಗಿಸಿತು. ಇದು ಚಿತ್ರತಂಡಕ್ಕೂ ಕೂಡ ಬಿಗ್ ಸರ್ಪ್ರೈಸ್ ಆಗಿತ್ತು. ಟೀಸರ್ ಈ ಮಟ್ಟಕ್ಕೆ ರೀಚ್ ಆದ್ಮೇಲೆ ಕಬ್ಜ ಸಿನಿಮಾವನ್ನ ಐದಲ್ಲ ಏಳಲ್ಲ ಸರಿ ಸುಮಾರು ಒಂಭತ್ತು ಭಾಷೆಗಳಲ್ಲಿ ರಿಲೀಸ್ ಮಾಡುವುದಕ್ಕಾಗಿ ನಿರ್ದೇಶಕ ಕಮ್ ನಿರ್ಮಾಪಕ ಆರ್.ಚಂದ್ರು ಅವರು ಯೋಜನೆ ಹಾಕಿಕೊಳ್ತಿದ್ದಾರೆ. ಕೇವಲ ಕನ್ನಡ ಸಿನಿಮಾ ವಿತರಕರು ಮಾತ್ರ ಅಲ್ಲ ಪರಭಾಷಾ ಸಿನಿಮಾ ವಿತರಕರು ಕೂಡ ಕಬ್ಜ ಸಿನಿಮಾ ವಿತರಣೆ ಹಕ್ಕು ಪಡೆಯಲು ತುದಿಗಾಲಲ್ಲಿ ನಿಂತಿದ್ದಾರೆ. ಈ ಚಿತ್ರಕ್ಕೆ ನೇಪಾಳ ಹಾಗೂ ಪಾಕಿಸ್ತಾನದಿಂದಲೂ ಬೇಡಿಕೆಗಳು ಹರಿದು ಬರುತ್ತಿದ್ದು ನೇಪಾಳಿದಲ್ಲಿ ಈ ಚಿತ್ರ ಕೆಜಿಎಫ್ ಚಿತ್ರಕ್ಕಿಂತ ಜಾಸ್ತಿ ಮೊತ್ತಕ್ಕೆ ಮಾರಾಟವಾಗುವ ಸಾಧ್ಯತೆ ಹೆಚ್ಚಾಗಿದೆ. ಕಬ್ಜ ಚಿತ್ರದಲ್ಲಿ ನಾಯಕಿಯಾಗಿ ಉಪೇಂದ್ರ ಅವರಿಗೆ ಜೋಡಿಯಾಗಿ ನಟಿ ಶ್ರೀಯಾ ಶರಣ್ ನಟಿಸಿದ್ದು, ವಿಶೇಷ ಪಾತ್ರದಲ್ಲಿ ಕಿಚ್ಚ ಸುದೀಪ್ ಅವರು ಖಡಕ್ ಪೊಲೀಸ್ ಆಫೀಸರ್ ಆಗಿ ಕಾಣಿಸಿಕೊಂಡಿದ್ದಾರೆ. ತಂತ್ರಜ್ಞಾನ ವಿಭಾಗದಲ್ಲಿ ಕಲಾ ನಿರ್ದೇಶಕರಾಗಿ ಶಿವಕುಮಾರ್, ಛಾಯಾಗ್ರಾಹಕ ಎಜಿ ಅವರಿದ್ದು, ರವಿ ಬಸ್ರೂರ್ ಅವರ ಅದ್ಭುತ್ ಮ್ಯೂಸಿಕ್ ಮೋಡಿ ಮಾಡಿದೆ.

Leave a Reply

%d bloggers like this: