‘ಕಬ್ಜ’ ಚಿತ್ರ ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆ ಸೃಷ್ಟಿಸಲಿದೆ, ಕಬ್ಜ ಟೀಸರ್ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ ದಕ್ಷಿಣ ಭಾರತದ ಖ್ಯಾತ ನಟ

ರಿಯಲ್ ಸ್ಟಾರ್ ಉಪ್ಪಿ ಇಂಡಿಯನ್ ಸಿನಿಮಾ ಇಂಡಸ್ಟ್ರಿ ಕಬ್ಜ ಮಾಡಲು ಹೆಜ್ಜೆ ಇಟ್ಟಿದ್ದಾರೆ. ನಿನ್ನೆ ತಾನೇ ಕಬ್ಜ ಸಿನಿಮಾದ ಟೀಸರ್ ರಿಲೀಸ್ ಆಗಿದೆ‌. ಈ ಕಬ್ಜ ಸಿನಿಮಾದ ಟೀಸರ್ ರಿಲೀಸ್ ಮಾಡೋದಕ್ಕೆ ಅಂತಾನೇ ತೆಲುಗಿನ ಬಾಹುಬಲಿ ಸಿನಿಮಾ ಖ್ಯಾತಿಯ ನಟ ರಾಣಾ ದಗ್ಗುಬಾಟಿ ಬೆಂಗಳೂರಿಗೆ ಆಗಮಿಸಿದ್ದರು‌. ಕಬ್ಜ ಚಿತ್ರದ ಟೀಸರ್ ಲಾಂಚ್ ಮಾಡಿ ರಾಣಾ ದಗ್ಗುಬಾಟಿ ತಂಡಕ್ಕೆ ಶುಭ ಹಾರೈಸಿದರು. ಟೀಸರ್ ನೋಡಿದ ರಾಣಾ ಅವರು ಕಬ್ಜ ಸಿನಿಮಾ ಖಂಡಿತಾ ಭಾರತೀಯ ಚಿತ್ರರಂಗದಲ್ಲಿ ಒಂದು ಇತಿಹಾಸ ಸೃಷ್ಟಿಸಲಿದೆ ಎಂದು ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕನ್ನಡ ಸಿನಿಮಾರಂಗ ಇದೀಗ ಬೃಹತ್ ಮಟ್ಟದಲ್ಲಿ ಬೆಳೆಯುತ್ತಿದೆ. ಸೌತ್ ಸಿನಿಮಾಗಳ ಗುಣಮಟ್ಟವನ್ನ ಈಗ ಜಗತ್ತಿನ ಮಟ್ಟದಲ್ಲಿ ಹೊಗಳುವಂತಾಗಬೇಕು. ನಾವು 90ರ ದಶಕದಲ್ಲೇ ಉಪ್ಪಿ ಸರ್ ಅವರ ಪ್ಯಾನ್ ಇಂಡಿಯಾ ಸಿನಿಮಾಗಳನ್ನ ನೋಡಿದ್ದೇವೆ.

ಡಿಫ್ರೆಂಟ್ ಆಗಿ ಸಿನಿಮಾ ಮಾಡೋದನ್ನ ಉಪ್ಪಿ ಅವರನ್ನೇ ನೋಡಿ ಕಲಿತಿದ್ದು ಇದೆ. ಕಬ್ಜ ಸಿನಿಮಾದಲ್ಲಿ ಸುದೀಪ್ ಸರ್ ಇದ್ದಾರೆ. ನಿಜಕ್ಕೂ ಕೂಡ ಕಬ್ಜ ಸಿನಿಮಾ ಹೊಸದೊಂದು ಮೈಲಿಗಲ್ಲು ಸೃಷ್ಟಿಸಲಿದೆ ಎಂದು ಹೇಳಿದ್ದಾರೆ. ಅದೇ ಸಂಧರ್ಭದಲ್ಲಿ ಉಪ್ಪಿ ಮಾತನಾಡಿ ನೀವು ಬಾಹುಬಲಿ ಸಿನಿಮಾ ಮಾಡಿ 1600 ಕೋಟಿ ಕಲೆಕ್ಷನ್ ಮಾಡಿ ನಮ್ಮನ್ನ ಸೂಪರ್ ಸ್ಟಾರ್ ಅಂತೀರಲ್ಲ ಎಂದಾಗ ನಾವು ಪ್ಯಾನ್ ಇಂಡಿಯಾ ಆರಂಭ ಮಾಡಿದ್ವಿ ನೀವು ಕಬ್ಜ ಮಾಡ್ತಿದ್ದೀರಾ ಎಂದು ಪ್ರತಿಕ್ರಿಯಿಸಿ ಎಲ್ಲರ ಮೊಗದಲ್ಲಿ ನಗು ಮೂಡಿಸಿದರು. ಕಬ್ಜ ಸಿನಿಮಾದಲ್ಲಿ ನಾಯಕಿಯಾಗಿ ಯಾರು ನಟಿಸುತ್ತಾರೆ ಅನ್ನೋದು ಬಹುತೇಕರಿಗೆ ಗೊಂದಲವಾಗಿಯೇ ಉಳಿದಿತ್ತು. ಅದಕ್ಕೆ ಇದೀಗ ಸ್ಪಷ್ಟ ನಿಖರವಾದ ಮಾಹಿತಿ ಕೂಡ ಹೊರಬಿತ್ತು. ಇದರಲ್ಲಿ ಸೌತ್ ಸ್ಟಾರ್ ನಟಿ ಶ್ರೀಯಾ ಶರಣ್ ನಾಯಕಿಯಾಗಿದ್ದಾರೆ.

ಕನ್ನಡದಲ್ಲಿ ಲವ್ಲೀ ಸ್ಟಾರ್ ಪ್ರೇಮ್ ಅವರ ಜೊತೆ ಚಂದ್ರ ಎಂಬ ಸಿನಿಮಾದಲ್ಲಿ ನಟಿಸಿದ್ದ ಶ್ರೀಯಾ ಈಗ ಕಬ್ಜ ಸಿನಿಮಾದಲ್ಲಿ ನಟಿಸಿದ್ದಾರೆ. ಇದು ಕನ್ನಡದಲ್ಲಿ ಇವರಿಗೆ ಮೂರನೇ ಸಿನಿಮಾ ಅಂತ ಹೇಳ್ಬೋದು. ಮೊದಲಿಗೆ ಅಪ್ಪು ಅವರ ಅರಸು ಸಿನಿಮಾದಲ್ಲಿ ಕೂಡ ವಿಶೇಷ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಕಬ್ಜ ಸಿನಿಮಾ 1942 ಸ್ವಾತಂತ್ರ್ಯ ಪೂರ್ವದ ರೌಡಿಸಂ ಕಥಾಹಂದರ ಎಂದು ನಿರ್ದೇಶಕರು ಹೇಳುತ್ತಿದ್ದರು. ಆದರೆ ಟೀಸರ್ ನೋಡಿದಾಗ ಮದರ್ ಸೆಂಟಿಮೆಂಟ್ ಕೂಡ ಇದೆ ಎಂದು ತಿಳಿಯುತ್ತೆ. ಚಿತ್ರಕ್ಕೆ ರವಿ ಬಸ್ರೂರ್ ಸಂಗೀತ, ಎಜೆ ಅವರ ಕ್ಯಾಮೆರಾ ಕೈ ಚಳಕ, ಶಿವಕುಮಾರ್ ಅವರ ಕಲಾ ನಿರ್ದೇಶನ ಕಬ್ಜ ಸಿನಿಮಾವನ್ನ ಬೇರೆ ಲೆವೆಲ್ ಗೆ ತಗೊಂಡೋಗಿದೆ. ಒಟ್ನಲ್ಲಿ ರಾಣಾ ದಗ್ಗುಬಾಟಿ ಅಂತೂ ಕಬ್ಜ ಸಿನಿಮಾದ ಟೀಸರ್ ಕಂಡು ನಿಬ್ಬೆರಗಾಗಿ ಚಿತ್ರದ ಬಗ್ಗೆ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Leave a Reply

%d bloggers like this: