ಕಾಶ್ಮೀರ್ ಫೈಲ್ಸ್ ನಂತರ ಸಿದ್ಧವಾಗುತ್ತಿದೆ ಮತ್ತೊಂದು ಚಿತ್ರ! ಕಂಗನಾ ಜೊತೆ ನಡೆಯಿತು ಮಾತುಕಥೆ

ಇತ್ತೀಚೆಗೆ ಕೆಲವು ದಿನಗಳಿಂದ ದೇಶದೆಲ್ಲೆಡೆ ಭಾರಿ ಚರ್ಚೆಗೆ ಕಾರಣವಾಗಿ ಸುದ್ದಿಯಲ್ಲಿರುವ ದಿ ಕಾಶ್ಮೀರ್ ಫೈಲ್ಸ್ ಸಿನಿಮಾದ ಯಶಸ್ಸು ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರಿಗೆ ಅಪಾರ ಜನಪ್ರಿಯತೆ ಮತ್ತು ಬೇಡಿಕೆ ಉಂಟು ಮಾಡಿದೆ. ನೈಜ ಘಟನೆ ಆಧಾರಿತ ಎಂದು ಹೇಳುತ್ತಿರುವ ಈ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಬಾಲಿವುಡ್ ಮಾತ್ರ ಅಲ್ಲದೆ ದಕ್ಷಿಣ ಭಾರತದಲ್ಲಿಯೂ ಕೂಡ ಬಾಕ್ಸ್ ಆಫೀಸ್ ನಲ್ಲಿ ಲೂಟಿ ಹೊಡೆಯುತ್ತದೆ. ದಕ್ಷಿಣ ಭಾರತದಲ್ಲಿ ದಿನದಿಂದ ದಿನಕ್ಕೆ ಚಿತ್ರ ಮಂದಿರಗಳನ್ನ ಹೆಚ್ಚಿಸಿಕೊಳ್ಳುತ್ತಾ ಹೋಗುತ್ತಿದೆ. ಒಂದೆಡೆ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ದಿ ಕಾಶ್ಮೀರ್ ಫೈಲ್ಸ್ ಈ ಸಿನಿಮಾಗೆ ರಿಯಾಯಿತಿ ಕೂಡ ಘೋಷಣೆ ಮಾಡಿದೆ. ಕಾಶ್ಮೀರದಲ್ಲಿ ಪಂಡಿತರ ಮೇಲೆ ನಡೆದ ದೌರ್ಜನ್ಯ ಕುರಿತ ಮಾಡಿರುವ ಈ ಸಿನಿಮಾ ಸಾಕಷ್ಟು ಚರ್ಚೆಗೆ ಕಾರಣವಾಗಿದ್ದು ಚಿತ್ರದ ಬಗ್ಗೆ ಪರ-ವಿರೋಧ ಅನಿಸಿಕೆ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

ಇದೆಲ್ಲದರ ನಡುವೆ ಬಾಲಿವುಡ್ ಕ್ವೀನ್ ರಾಷ್ಟ್ರ ಪ್ರಶಸ್ತಿ ವಿಜೇತೆ ನಟಿ ಕಂಗನಾ ರಣಾವತ್ ಅವರು ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರೊಟ್ಟಿಗೆ ಒಂದು ಸಿನಿಮಾ ಮಾಡುತ್ತಾರೆ ಎಂಬ ಸುದ್ದಿ ಇದೀಗ ಬಾಲಿವುಡ್ ನಲ್ಲಿ ಭಾರಿ ಸೌಂಡ್ ಮಾಡುತ್ತಿದೆ. ಅದಕ್ಕೆ ಕಾರಣ ನಟಿ ಕಂಗನಾ ರಣಾವತ್ ಅವರು ದಿ ಕಾಶ್ಮೀರ್ ಫೈಲ್ಸ್ ಚಿತ್ರ ನೋಡಿ ಮೆಚ್ಚುಗೆ ವ್ಯಕ್ತಪಡಿಸಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡು ಪ್ರಚಾರ ಕೂಡ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ ಚಿತ್ರದ ಬಗ್ಗೆ ನಕಾರಾತ್ಮಕವಾಗಿ ಮಾತನಾಡುವವರಿಗೆ ಟೀಕೆ ಕೂಡ ಮಾಡಿದ್ದಾರೆ. ಗಟ್ಟಿಯಾದ ಕಥಾ ವಸ್ತುವಿಲ್ಲದ ಸಿನಿಮಾವನ್ನ ಪ್ರಚಾರ ಮಾಡುವ ಮೂರ್ಖನೇ ಇಂತಹ ಹಿಂದೂಗಳ ಮೇಲೆ ನಡೆದ ದೌರ್ಜನ್ಯ ನೈಜ ಘಟನೆ ಆಧಾರಿತ ಸಿನಿಮಾವನ್ನ ಪ್ರಚಾರ ಮಾಡಿ ಬಿಲದಲ್ಲಿ ಅಡಗಿ ಕುಳಿತಂತೆ ಕೂರಬೇಡಿ ಎಂದು ತಮ್ಮ ವ್ಯಂಗ್ಯದ ಶೈಲಿಯಲ್ಲಿ ಜಾಡಿಸಿದ್ದಾರೆ.

ಮೂಲಗಳ ಪ್ರಕಾರ ನಟಿ ಕಂಗನಾ ರಣಾವತ್ ಅವರು ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರ ಜೊತೆ ಸಿನಿಮಾ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ. ಏಕೆಂದರೆ ಇಬ್ಬರೂ ಕೂಡ ಒಂದೇ ಸಿದ್ದಾಂತ ಹೊಂದಿದ್ದಾರೆ. ಅಷ್ಟೆ ಅಲ್ಲದೇ ಇಬ್ಬರು ಕೂಡ ಪರಸ್ಪರ ಉತ್ತಮ ಬಾಂಧವ್ಯ ಹೊಂದಿದ್ದಾರಂತೆ. ಈಗಾಗಲೇ ಒಂದು ಸುತ್ತಿನ ಮಾತುಕತೆ ಆಗಿದೆ ಎಂದು ಬಿಟೌನ್ ನಲ್ಲಿ ಕೇಳಿ ಬರುತ್ತಿದೆ. ಆದರೆ ಈ ಬಗ್ಗೆ ಇನ್ನೂ ಕೂಡ ಸ್ಪಷ್ಟತೆ ಸಿಕ್ಕಿಲ್ಲ. ಜೀ಼ ಸ್ಟೂಡಿಯೋಸ್ ನಿರ್ಮಾಣ ಮಾಡಿರುವ ದಿ ಕಾಶ್ಮೀರ್ ಫೈಲ್ಸ್ ಸಿನಿಮಾಗೆ ಅಗ್ನಿ ಹೋತ್ರಿ ಅವರ ಚಿತ್ರ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಇದೇ ಮಾರ್ಚ್ 11.ರಂದು ದೇಶಾದ್ಯಂತ ಬಿಡುಗಡೆ ಆದ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಮಿಥುನ ಚಕ್ರಬೋರ್ತಿ, ಅನುಪಮ್ ಕೇರ್, ದರ್ಶನ್ ಕುಮಾರ್, ಪಲ್ಲವಿ ಜೋಶಿ, ಚಿಮ್ಮುವ ಮಂಡ್ಲೇಕರ್, ಪ್ರಕಾಶ್ ಬೆಳವಾಡಿ ಸೇರಿದಂತೆ ಇನ್ನಿತರ ಕಲಾವಿದರು ಬಣ್ಣ ಹಚ್ಚಿದ್ದಾರೆ.

Leave a Reply

%d bloggers like this: