ಕಾಶಿ, ವಾರಣಾಸಿ ಅಂತಹ ತೀರ್ಥ ಕ್ಷೇತ್ರಗಳಿಗೆ ಹೋದಾಗ ಒಳ ಉಡುಪುಗಳನ್ನು ಬಿಟ್ಟು ಬರುವುದು ಏಕೆ ಗೊತ್ತಾ? ಇಂದಿಗೂ 99% ಜನರಿಗೆ ಗೊತ್ತೇ ಇಲ್ಲ

ತೀರ್ಥ ಕ್ಷೇತ್ರಗಳಲ್ಲಿ ಯಾತ್ರಿಗಳು ತಮ್ಮ ಇಷ್ಟದ ವಸ್ತುವನ್ನ ಬಿಟ್ಟು ಬರಲು ಕಾರಣ ಏನು. ಈ ಪದ್ಧತಿ ರೂಢಿಗೆ ಬಂದಿದ್ದು ಹೇಗೆ ಎಂಬುದು ಇಂದಿನ ಅನೇಕ ಯುವ ಪೀಳಿಗೆಗೆ ತಿಳಿಯದೇ ಗೊಂದಲಮಯವಾಗಿ ಉಳಿದಿದೆ. ಈ ಬಗ್ಗೆ ಇತ್ತೀಚೆಗೆ ಒಂದಷ್ಟು ಮಾಹಿತಿ ಬೆಳಕಿಗೆ ಬಂದಿವೆ. ಹೌದು ವೈವಿಧ್ಯಮಯ ದೇಶ ಆಗಿರುವ ‌ಭಾರತದಲ್ಲಿ ಅನೇಕ ಧಾರ್ಮಿಕ ನಂಬಿಕೆಗಳಿವೆ. ಬೃಹತ್ ಜನಸಂಖ್ಯೆ ಹೊಂದಿರುವ ಭಾರತದಲ್ಲಿ ವಿವಿಧ ಧರ್ಮ, ಜಾತಿ ಆಚರಣೆ ಸಂಪ್ರದಾಯಗಳನ್ನು ಕಾಣಬಹುದು. ಪ್ರತಿಯೊಂದು ಸಮುದಾಯ ಕೂಡ ಒಂದೊಂದು ರೀತಿಯಲ್ಲಿ ತಮ್ಮ ಧಾರ್ಮಿಕ ನಂಬಿಕೆಗಳ ಆಚರಣೆ ಹೊಂದಿದ್ದಾರೆ. ಅದರಂತೆ ತೀರ್ಥ ಕ್ಷೇತ್ರಗಳಿಗೆ ಹೋಗುವ ಪದ್ಧತಿ ಕೂಡ ನಮ್ಮಲ್ಲಿದೆ. ಆದರೆ ಈ ಪುಣ್ಯ ಕ್ಷೇತ್ರ ಕಾರ್ಯ ಕೈಗೊಳ್ಳುವ ಯಾತ್ರಿಗಳು ಮತ್ತೆ ತಮ್ಮ ಮನೆಗೆ ವಾಪಸ್ ಬರುತ್ತಾರೆ ಎಂಬುದನ್ನು ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಸಾಂಸಾರಿಕ ಜೀವನ ಸಾಗಿಸಿದ ನಂತರ ಅನೇಕರು ತಮ್ಮ ಅವಸಾನ ದಿನಗಳನ್ನು ಆಧ್ಯಾತ್ಮಿಕ ಚಿಂತನೆಯಲ್ಲಿ ಕಾಲ ಕಳೆಯುವುದಕ್ಕೆ ಇಷ್ಟ ಪಡುತ್ತಾರೆ.

ಅಂತೆಯೇ ಭಾರತೀಯರು ವಿಶಿಷ್ಟವಾದ ಪುಣ್ಯ ಕ್ಷೇತ್ರ ಎಂದು ನಂಬುವ ಕಾಶಿ ಪ್ರವಾಸ ಕೈಗೊಂಡು ಅಲ್ಲಿ ವಿಶ್ವನಾಥನ ದರ್ಶನ ಪಡೆದು ಒಂದಷ್ಟು ಯಾತ್ರಿಕರು ಅಲ್ಲೇ ಉಳಿದುಕೊಂಡರೆ ಇನ್ನೊಂದಷ್ಟು ಜನರು ಅಲ್ಲೇ ರಸ್ತೆ ಮಾರ್ಗವಾಗಿ ದೈವಾಧೀನ ಆಗುತ್ತಾರೆ. ಇನ್ನು ಈ ಪುಣ್ಯ ಕ್ಷೇತ್ರಕ್ಕೆ ಹೋದಾಗ ಅಲ್ಲಿರುವ ನದಿಯಲ್ಲಿ ತಮ್ಮ ಇಷ್ಟದ ವಸ್ತುವನ್ನು ನೀರಿನಲ್ಲಿ ಬಿಟ್ಟು ಬರುವ ಪದ್ಧತಿ ರೂಢಿಯಲ್ಲಿದೆ. ಈ ಪದ್ಧತಿಯು ಸಾವಿರಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. ಕಾಶಿಯಲ್ಲಿರುವ ಗಂಗಾ ನದಿಯಲ್ಲಿ ಸ್ನಾನ ಮಾಡಿ ತಮ್ಮ ಇಷ್ಟದ ವಸ್ತುವನ್ನು ಅಲ್ಲೇ ಬಿಟ್ಟು ಬರುತ್ತಾರೆ. ತಮ್ಮ ಪಾಪ ಕಳೆದು ಪುಣ್ಯ ಪ್ರಾಪ್ತವಾಗುತ್ತದೆ ಎಂಬುದು ಇದರ ನಂಬಿಕೆ. ಇದು ಅವರವರ ಭಕ್ತಿ ಭಾವಕ್ಕೆ ಬಿಟ್ಟ ವಿಚಾರವಾಗಿದೆ. ಪುಣ್ಯ ಕ್ಷೇತ್ರದಲ್ಲಿ ಅಲ್ಲಿನ ನದಿಯ್ಕಲ್ಲಿ ಇಷ್ಟದ ವಸ್ತುಗಳನ್ನೂ ಬಿಡಬೇಕು ಎಂಬುದಕ್ಕೆ ಒಂದಷ್ಟು ಕಾರಣಗಳಿವೆ.

ಅದರಲ್ಲಿ ಪ್ರಮುಖವಾಗಿ ತಿಳಿಸುವುದು ಅಂದರೆ ಮನುಷ್ಯ ತನ್ನ ಜೀವಿತಾವಧಿಯಲ್ಲಿ ಎಲ್ಲಾ ರೀತಿ ಆಸೆ ಆಮಿಷ, ಪ್ರೇಮ ಕಾಮ ಹೀಗೆ ಅರಿಷಡ್ವರ್ಗಗಳನ್ನೆಲ್ಲಾ ಅನುಭವಿಸಿ ಒಂದಷ್ಟು ಪರೋಕ್ಷವಾಗಿ ತಪ್ಪುಗಳನ್ನು ಮಾಡಿರುತ್ತಾನೆ. ಒಟ್ಟಾರೆಯಾಗಿ ಅಂತಿಮವಾಗಿ ತಾನು ಮಾಡಿದ ಪಾಪ ಕರ್ಮಗಳು ತಮ್ಮನ್ನು ಬಿಟ್ಟು ಹೋಗಿ ತಾವು ಸಂಪೂರ್ಣವಾಗಿ ಅಂತರ್ಮುಖಿ ಯಾಗಿ ಪರಿಶುದ್ಧ ಆಗಿ ಹೊರ ಬರಬೇಕು ಎಂಬ ಭಾವ ಆಗಿರುತ್ತದೆ. ಕೆಲವರು ಗಂಗಾ ನದಿಯಲ್ಲಿ ಸ್ನಾನ ಮಾಡಿ ತಾವು ಧರಿಸಿದ್ದ ಬಟ್ಟೆಯನ್ನು ನದಿಯಲ್ಲಿ ಬಿಟ್ಟರೆ ಕೆಲವರು ತಾವು ತಂದಿದ್ದ ಹಣ್ಣುಹಂಪಲಿನ ಬುತ್ತಿಯನ್ನ ಬಿಟ್ಟು ಬರುತ್ತಾರೆ. ಇದು ಆಯಾಯ ವ್ಯಕ್ತಿಯ ವಯಸ್ಸಿನ ಅನುಗುಣವಾಗಿ ತಮ್ಮ ಪಾಪ ಕರ್ಮದ ಮೂಟೆಗಳನ್ನು ಬಿಟ್ಟು ಹೊರ ನಡೆದಂತೆ ಎಂದು ಹಿರಿಯರು ಹೇಳುತ್ತಾರೆ.

Leave a Reply

%d bloggers like this: