ಕಾಡ್ಗಿಚ್ಚಿನಂತೆ ಎಲ್ಲೆಡೆ ಹಬ್ಬಿದ ಕಾಂತಾರ ಅಲೆ, ಬಹು ದೊಡ್ಡ ಮೊತ್ತಕ್ಕೆ ಕಾಂತಾರ ಚಿತ್ರದ ಸ್ಯಾಟಲೈಟ್ ಹಾಗೂ ಓಟಿಟಿ ಹಕ್ಕುಗಳ ಮಾರಾಟ

ರಿಷಬ್ ಶೆಟ್ಟಿ ಅವರ ಕಾಂತಾರ ಸಿನಿಮಾಗೆ ಡಿಜಿಟಲ್ ಓಟಿಟಿ ಮತ್ತು ಸ್ಯಾಟಲೈಟ್ ರೈಟ್ಸ್ ಹಕ್ಕು ಭರ್ಜರಿ ಮೊತ್ತಕ್ಕೆ ಮಾರಾಟವಾಗಿದೆ. ಕಳೆದ ಸೆಪ್ಟೆಂಬರ್ 30ರಂದು ರಾಜ್ಯದ್ಯಂತ ಅದ್ದೂರಿಯಾಗಿ ರಿಲೀಸ್ ಆದ ಕಾಂತಾರ ಸಿನಿಮಾ ನಿರೀಕ್ಷೆಗೂ ಮೀರಿ ಅಪಾರ ಜನ ಮೆಚ್ಚುಗೆ ಪಡೆದುಕೊಂಡಿದೆ. ಕಾಂತಾರ ಸಿನಿಮಾ ರಿಲೀಸ್ ಗು ಮುನ್ನ ಟ್ರೇಲರ್ ಮತ್ತು ಸಾಂಗ್ ಮುಖಾಂತರವೇ ಭಾರಿ ಕುತೂಹಲ ಮತ್ತು ಅಪಾರ ನಿರೀಕ್ಷೆ ಹುಟ್ಟು ಹಾಕಿತ್ತು. ಅದರಂತೆ ಸಿನಿಮಾ ರಿಲೀಸ್ ಅದ ನಂತರವಂತೂ ರಿಷಬ್ ಶೆಟ್ಟಿ ಅವರ ಪರಿಕಲ್ಪನೆ ಮತ್ತು ಅವರ ಅಮೋಘ ನಟನೆಗೆ ಎಲ್ಲೆಡೆ ಅಪಾರ ಪ್ರಶಂಸೆ ವ್ಯಕ್ತವಾಗಿದೆ. ಕಲೆಕ್ಷನ್ ವಿಚಾರದಲ್ಲಿಯಂತೂ ಭಾರಿ ಗಳಿಕೆ ಮಾಡುತ್ತಿದೆ.

ಮೂಲಗಳ ಪ್ರಕಾರ ಈಗಾಗಲೇ ಕಾಂತಾರ ಸಿನಿಮಾ ಮೂವತ್ತು ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ ಎಂದು ಹೇಳಲಾಗ್ತಿದೆ. ಬಾಕ್ಸ್ ಅಫೀಸ್ ನಲ್ಲಿ ಸಖತ್ ಸೌಂಡ್ ಮಾಡುತ್ತಿರುವ ಕಾಂತಾರ ಸಿನಿಮಾಗೆ ಇದೀಗ ಸ್ಯಾಟಲೈಟ್, ಡಿಜಟಲ್ ನಲ್ಲಿಯೂ ಸಹ ಭರ್ಜರಿ ಬೇಡಿಕೆ ಉಂಟಾಗಿದೆ. ಸ್ಟಾರ್ ಸುವರ್ಣ ವಾಹಿನಿ ಕಾಂತಾರ ಸಿನಿಮಾದ ಸ್ಯಾಟಲೈಟ್ ಹಕ್ಕನ್ನ ಬರೋಬ್ಬರಿ 6 ರಿಂದ 7 ಕೋಟಿ ವರೆಗೆ ನೀಡಿದ್ದಾರೆ ಎನ್ನಲಾಗಿದೆ. ಅದೇ ರೀತಿ ಓಟಿಟಿ ಡಿಜಿಟಲ್ ದಿಗ್ಗಜ ಸಂಸ್ಥೆ ಆಗಿರೋ ಅಮೇಜಾನ್ ಪ್ರೈಮ್ ಕಾಂತಾರ ಸಿನಿಮಾದ ಓಟಿಟಿ ಹಕ್ಕನ್ನ ಸರಿ ಸುಮಾರು ಏಳು ಕೋಟಿಗೆ ಖರೀದಿ ಮಾಡಿದೆ ಎಂದು ಮಾಹಿತಿ ತಿಳಿದು ಬಂದಿದೆ. ಕಾಂತಾರ ಸಿನಿಮಾ ಕರಾವಳಿ ಭಾಗದ ಅಲ್ಲಿನ ಜನರ ಆಚರಣೆ ಸಂಸ್ಕೃತಿಯ ಪ್ರತೀಕವಾಗಿ ಮೂಡಿಬಂದಿದೆ ಅಂತ ಹೇಳ್ಬೋದು.

ಕನ್ನಡದ ಹೆಮ್ಮೆಯ ನಿರ್ಮಾಣ ಸಂಸ್ಥೆ ಆಗಿರೋ ಹೊಂಬಾಳೆ ಫಿಲಂಸ್ ಬ್ಯಾನರಡಿಯಲ್ಲಿ ವಿಜಯ್ ಕಿರಗಂದೂರ್ ಅವರು ಕಾಂತಾರ ಸಿನಿಮಾವನ್ನ ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ. ಅಜನೀಶ್ ಲೋಕನಾಥ್ ಅವರ ಸಂಗೀತ, ಅರವಿಂದ್ ಕಶ್ಯಪ್ ಅವರ ಕ್ಯಾಮೆರಾ ವರ್ಕ್ ಇಡೀ ಕಾಂತಾರ ಸಿನಿಮಾದ ಜೀವಾಳ ಅಂತಾನೇ ಹೇಳ್ಬೋದು. ಇನ್ನು ಪಾತ್ರವರ್ಗದಲ್ಲಿ ಕಿಶೋರ್, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ, ನಾಯಕಿಯಾಗಿ ನಟಿ ಸಪ್ತಮಿಗೌಡ ಹೀಗೆ ಎಲ್ಲಾ ಕಲಾವಿದರು ಕಾಂತಾರ ಸಿನಿಮಾದಲ್ಲಿ ತಮ್ಮ ಪಾತ್ರಗಳಿಗೆ ಜೀವತುಂಬಿ ನಟಿಸಿದ್ದಾರೆ. ಸಿನಿಮಾ ನೋಡಿದ ಪ್ರೇಕ್ಷಕರು ಕಾಂತಾರಗೆ ಜೈ ಎಂದಿದ್ದಾರೆ. ಒಟ್ಟಾರೆಯಾಗಿ ಕಾಂತಾರ ಸಿನಿಮಾ ರಿಷಬ್ ಶೆಟ್ಟಿ ಅವರ ವೃತ್ತಿ ಜೀವನಕ್ಕೆ ಒಂದು ಹೊಸ ತಿರುವು ಎಂದು ಹೇಳಬಹುದು.

Leave a Reply

%d bloggers like this: