ಕಾದಂಬರಿ ಆಧಾರಿತ ಚಿತ್ರದ ಮೂಲಕ ಮತ್ತೆ ಕನ್ನಡಕ್ಕೆ ಬಂದ್ರು ಪ್ರಜ್ವಲ್ ದೇವರಾಜ್ ಅವರ ಪತ್ನಿ

ಸ್ಯಾಂಡಲ್ ವುಡ್ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅವರ ಪತ್ನಿ ನಟಿ ರಾಗಿಣಿ ಪ್ರಜ್ವಲ್ ಅವರು ಇದೀಗ ಕಾದಂಬರಿ ಆಧಾರಿತ ಸಿನಿಮಾವೊಂದರಲ್ಲಿ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಾಗಿಣಿ ಅವರು ಈಗಾಗಲೇ ರಚಿತಾ ರಾಮ್ ನಿರ್ಮಾಣದ ರಿಷಭಪ್ರಿಯ ಚಿತ್ರದಲ್ಲಿ ನಟಿಸಿದ್ದರು. ಅದಕ್ಕೂ ಮುನ್ನ ಅವರು ಪುನೀತ್ ರಾಜ್ ಕುಮಾರ್ ಅವರ ನಿರ್ಮಾಣದಲ್ಲಿ ಮೂಡಿಬಂದ ಲಾ ಚಿತ್ರದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡವರು. ರೂಪದರ್ಶಿಯಾಗಿ, ನಟಿಯಾಗಿ, ನೃತ್ಯದ ಮೂಲಕ ಅಪಾರ ಗಮನ ಸೆಳೆದ ನಟಿ ರಾಗಿಣಿ ಪ್ರಜ್ವಲ್ ಅವರು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿರುತ್ತಾರೆ. ಆಗಾಗ ತಮ್ಮ ಆಕರ್ಷಕ ಫೋಟೋಗಳನ್ನ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡುವ ಮೂಲಕ ಗಮನ ಸೆಳೆಯುತ್ತಲೇ ಇರುತ್ತಾರೆ.

ನೋಡಲು ಸ್ಪೂರದ್ರೂಪಿ ಆಗಿರೋ ರಾಗಿಣಿ ಪ್ರಜ್ವಲ್ ಅವರಿಗೆ ಇದೀಗ ಕನ್ನಡದ ಖ್ಯಾತ ನಿರ್ದೇಶಕ ಕೋಡ್ಲು ರಾಮಕೃಷ್ಣ ಅವರ ನಿರ್ದೇಶನದಲ್ಲಿ ತಯಾರಾಗುತ್ತಿರೋ ಶ್ಯಾನುಭೋಗರ ಮಗಳು ಎಂಬ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿದೆ. ಶ್ಯಾನುಭೋಗರ ಮಗಳು ಈ ಚಿತ್ರ ಶ್ರೀಮತಿ ಭಾಗ್ಯ ಕೃಷ್ಣ ಮೂರ್ತಿ ಅವರ ಕಾದಂಬರಿ ಆಧಾರಿತ ಸಿನಿಮಾವಾಗಿದೆ. ಇದೊಂದು ಸ್ವಾತಂತ್ರ್ಯ ಪೂರ್ವದಲ್ಲಿ ನಡೆಯೋ ಕಥೆ ಆಗಿದೆಯಂತೆ. ಈ ಶ್ಯಾನುಭೋಗರ ಮಗಳು ಚಿತ್ರಕ್ಕೆ ಖ್ಯಾತ ಸಂಭಾಷಣೆಕಾರರಾದ ಬಿಎ ಮಧು ಅವರು ಚಿತ್ರಕಥೆ ಮತ್ತು ಸಂಭಾಷಣೆ ಬರೆಯುತ್ತಿದ್ದು, ಶಮಿತಾ ಮಲ್ನಾಡ್ ರಾಗ ಸಂಯೋಜನೆ ಮಾಡುತ್ತಿದ್ದಾರೆ. ಭುವನ್ ಫಿಲಂಸ್ ಲಾಂಛನದ ಅಡಿಯಲ್ಲಿ ಈ ಶ್ಯಾನುಭೋಗರ ಮಗಳು ಸಿನಿಮಾ ತಯಾರಾಗುತ್ತಿದ್ದು, ತಾರಾಗಣದಲ್ಲಿ ಹಿರಿಯ ನಟ ರಮೇಶ್ ಭಟ್, ಟೆನ್ನಿಸ್ ಕೃಷ್ಣ, ನೀನಾಸಂ ಅಶ್ವಥ್, ಶಂಕರ್ ಅಶ್ವಥ್, ಮೇಘಶ್ರೀ, ನಿರಂಜನ್ ಕುಮಾರ್ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯಕ್ಕೆ ಈ ಶ್ಯಾನುಭೋಗರ ಮಗಳು ಚಿತ್ರದ ಪೋಸ್ಟರ್ ರಿಲೀಸ್ ಆಗಿದ್ದು, ಪೋಸ್ಟರ್ ನಲ್ಲಿ ರಾಗಿಣಿ ಪ್ರಜ್ವಲ್ ಅವರು ಕೊಟ್ಟಿರೋ ಫೋಟೋ ಪೋಸ್ ಗಮನ ಸೆಳೆದಿದೆ.

Leave a Reply

%d bloggers like this: