ಜಸ್ಟ್ ಒನ್ ಕಿಸ್ ಕೊಡೊ ಸೀನ್ ಗಾಗಿ ಭಾರಿ ಮೊತ್ತದ ಸಂಭಾವನೆ ಪಡೆದ ಮಲೆಯಾಳಿ ಕ್ಯೂಟ್ ಬೆಡಗಿ…! ಎಷ್ಟು ಗೊತ್ತಾ? ನೋಡಿ ಒಮ್ಮೆ

ಜಸ್ಟ್ ಒನ್ ಕಿಸ್ ಕೊಡೊ ಸೀನ್ ಗಾಗಿ ಭಾರಿ ಮೊತ್ತದ ಸಂಭಾವನೆ ಪಡೆದ ಮಲೆಯಾಳಿ ಕ್ಯೂಟ್ ಬೆಡಗಿ…! ಹಣ, ಹೆಸರು ಸಂಪಾದನೆ ಮಾಡಬೇಕು ಎಂದೇ ಬಹುತೇಕರು ಸಿನಿಮಾ ಕ್ಷೇತ್ರದತ್ತ ಮುಖ ಮಾಡುತ್ತಾರೆ. ಕೆಲವರಿಗೆ ತಾನು ಚಿತ್ರ ನಟ, ನಟಿ ಅಥವಾ ನಿರ್ದೇಶಕ ಹೀಗೆ ಸಿನಿಮಾರಂಗದಲ್ಲಿ ಏನಾದರೊಂದು ಆಗಬೇಕು ಎಂದು ಮಹಾದಾಸೆಯೊತ್ತು ಈ ಮಾಯಾ ಪ್ರಪಂಚಕ್ಕೆ ಎಂಟ್ರಿ ಕೊಡುತ್ತಾರೆ. ಈ ಮಾಯಾ ಪ್ರಪಂಚದಲ್ಲಿ ಶ್ರಮದ ಜೊತೆಗೆ ಅದೃಷ್ಟ ಎಂಬುದೊಂದು ಮಾತ್ರ ಕೈ ಹಿಡಿದರೆ ಸಾಕು ಅವರ ಜೀವನ ನಕ್ಷತ್ರದತ್ತ ಸಾಗಿಬಿಡುತ್ತದೆ. ಕಲಾ ಸರಸ್ವತಿ ಎಲ್ಲರನ್ನೂ ಕೂಡ ಕೈ ಬೀಸಿ ಕರೆಯುತ್ತದೆ . ಆದರೆ ಕೆಲವರನ್ನ ಮಾತ್ರ ಕೈ ಹಿಡಿಯುತ್ತದೆ. ಒಮ್ಮೆ ಕೈ ಹಿಡಿದರೆ ಹಣ ಹೆಸರು ಕೀರ್ತಿ ಅವರಿಗೆ ಸಾಕಷ್ಟು ಸಿಕ್ಕೇ ಸಿಗುತ್ತದೆ

ಅಂತೆಯೇ ಕೆಲವು ಯುವ ನಟ-ನಟಿಯರು ನೋಡಲು ಆಕರ್ಷಕವಾಗಿ ಸುಂದರವಾಗಿದ್ದು, ನಟನೆಯಲ್ಲಿ ಕೊಂಚ ಪಕ್ವವಾದರು ಕೂಡ ಅವರಿಗೆ ಸಿನಿರಂಗದಲ್ಲಿ ದೊರೆಯುವ ಗೌರವ, ಸಂಭಾವನೆಯೇ ಬೇರೆಯದ್ದಾಗಿರುತ್ತದೆ. ಇನ್ನು ಕೆಲವು ಚಿತ್ರಗಳಲ್ಲಿ ಕೆಲವು ಕಥೆಗೆ ತಕ್ಕಂತೆ ಸನ್ನಿವೇಶಗಳಲ್ಲಿ ಬೋಲ್ಡ್ ಆಗಿ ನಟಿಸಬೇಕಾದ ಅಗತ್ಯ ಇರುತ್ತದೆ. ಅದರಲ್ಲಿ ಲವ್ ಸ್ಟೋರಿ ಸಿನಿಮಾಗಳಲ್ಲಿ ಪ್ರಮುಖವಾಗಿ ಲಿಪ್ ಕಿಸ್ ದೃಶ್ಯ ಸನ್ನಿವೇಶಗಳಲ್ಲಿ ನಟಿಯರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತದೆ. ಅದರಂತೆ ಅವರ ಸಂಭಾವನೆ ಕೂಡ ಹೆಚ್ಚಾಗಿರುತ್ತದೆ. ಅದರಂತೆ ಇದೀಗ ಲಿಪ್ ಕಿಸ್ ಮಾಡುವುದಕ್ಕೆ ಭಾರಿ ಸಂಭಾವನೆ ಪಡೆದು ಸುದ್ದಿಯಾಗಿದ್ದಾರೆ.

ಹೌದು ಮಲೆಯಾಳಂ ಚಿತ್ರರಂಗದ ಸುಪ್ರಸಿದ್ದ ನಟಿ ಅನುಪಮಾ ಪರಮೇಶ್ವರನ್ ಸದ್ಯಕ್ಕೆ ಕೇವಲ ಮಲೆಯಾಳಂ ಮಾತ್ರವಲ್ಲದೆ ತೆಲುಗು, ತಮಿಳು ಮತ್ತು ಕನ್ನಡ ಚಿತ್ರಗಳಲ್ಲಿ ನಟಿಸುತ್ತಾ ದಕ್ಷಿಣ ಭಾರತ ಚಿತ್ರರಂಗದಲ್ಲಿ ಅಪಾರ ಜನಪ್ರಿಯತೆ ಗಳಿಸಿ ಬೇಡಿಕೆಯ ನಟಿಯಾಗಿ ಮಿಂಚುತ್ತಿದ್ದಾರೆ. ಪ್ರೇಮಂ ಎಂಬ ಮಲೆಯಾಳಂ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಅನುಪಮಾ ಪರಮೇಶ್ವರನ್ ತಮ್ಮ ಚೊಚ್ಚಲ ಚಿತ್ರದಲ್ಲೇ ಭರ್ಜರಿ ಯಶಸ್ಸು ಗಳಿಸುತ್ತಾರೆ. ಈ ಚಿತ್ರದ ಯಶಸ್ಸಿನ ನಂತರ ಸ್ಪೂರದ್ರೂಪಿಯಾಗಿದ್ದ ನಟಿ ಅನುಪಮಾ ಪರಮೇಶ್ವರನ್ ಅವರಿಗೆ ಜೇಮ್ಸ್ ತೆಲುಗಿನ ಪ್ರೇಮಂ ಸುಮಾ, ನಾಗವಲ್ಲಿ, ತಮಿಳಿನ ಕೊಡಿ ಹೀಗೆ ದಕ್ಷಣ ಭಾರತದ ಎಲ್ಲಾ ಭಾಷೆಗಳಲ್ಲಿ ನಟಿಸುತ್ತಾರೆ.

ಅದರಲ್ಲಿಯೂ ಕನ್ನಡದ ಸ್ಟಾರ್ ನಟ ಪುನೀತ್ ರಾಜ್ ಕುಮಾರ್ ಅವರೊಟ್ಟಿಗೆ ನಟ ಸಾರ್ವಭೌಮ ಎಂಬ ಚಿತ್ರದಲ್ಲಿ ನಟಿಸಿ ಕನ್ನಡ ಸಿನಿ ಪ್ರೇಕ್ಷಕರ ಮನದಲ್ಲಿಯೂ ಕೂಡ ಸ್ಥಾನ ಪಡೆಯುತ್ತಾರೆ. ತನ್ನ ಮುದ್ದಾದ ನೋಟ, ಸೌಂದರ್ಯದಿಂದ ಅಪಾರ ಅಭಿಮಾನಿ ಬಳಗ ಹೊಂದಿರುವ ನಟಿ ಅನುಪಮಾ ಪರಮೇಶ್ವರನ್ ಅವರು ಇದೀಗ ಭಾರಿ ಸುದ್ಥಿಯಾಗಿದ್ದಾರೆ. ಹೌದು ನಟಿ ಅನುಪಮಾ ಪರಮೇಶ್ವರನ್ ಅವರೆಂದರೆ ಫ್ಯಾಮಿಲಿ ಆಡಿಯನ್ಸ್ ಗೆ ವಿಶೇಷವಾದ ಅಭಿಮಾನ. ಅದರ ಜೊತೆಗೆ ಪಡ್ಡೇ ಹುಡುಗರಿಗೆ ಅನುಪಮಾ ಅಂದರೆ ಎಲ್ಲಿಲ್ಲದ ಪ್ರೀತಿ. ಆಗಾಗ ಸೋಶಿಯಲ್ ಮೀಡಿಯಾಗಳಲ್ಲಿ ಅನುಪಮಾ ಅವರ ಫೋಟೋಗಳು ಸಖತ್ ವೈರಲ್ ಆಗುತ್ತಲೇ ಇರುತ್ತವೆ.

ಇದೀಗ ಅನುಪಮಾ ಅವರು ಸಿನಿಮಾವೊಂದರಲ್ಲಿ ಹೀರೋ ಲಿಪ್ ಗೆ ಕಿಸ್ ಮಾಡುತ್ತಿರುವ ಫೋಟೋವೊಂದು ಭಾರಿ ವೈರಲ್ ಆಗಿದೆ. ಇದರ ಜೊತೆಗೆ ಹೊಸ ಸುದ್ದಿ ಏನಪ್ಪಾ ಅಂದರೆ ಈ ಒಂದು ಲಿಪ್ ಕಿಸ್ ಇರುವುದರಿಂದ ನಟಿ ಅನುಪಮಾ ಅವರು ಬರೋಬ್ಬರಿ ಐವತ್ತು ಲಕ್ಷ ಸಂಭಾವನೆ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಸುದ್ದಿ ಇದೀಗ ದಕ್ಷಿಣ ಭಾರತೀಯ ಚಿತ್ರರಂಗದಾದ್ಯಂತ ಭಾರಿ ವೈರಲ್ ಆಗಿದೆ. ಈ ನಮ್ಮ ಲೇಖನ ನಿಮಗೆ ಇಷ್ಟವಾದಲ್ಲಿ ಶೇರ್ ಮಾಡಿ ಮತ್ತು ಲೈಕ್ ಮಾಡಿ. ಮತ್ತಷ್ಟು ಹೊಸ ಹೊಸ ಸುದ್ದಿಗಳಿಗಾಗಿ ನಮ್ಮ ಪೇಜ್ ನ್ನು ತಪ್ಪದೆ ಲೈಕ್ ಮಾಡಿ.