ಜಸ್ಟ್ 23 ವರ್ಷದ ಹುಡುಗ 93 ವರ್ಷದ ಮದುಕಿಯನ್ನ ಮದುವೆಯಾದ.. ಪ್ರಸ್ಥದಲ್ಲಿ ಆದ ವ್ಯವಸ್ಥೆ ಏನು ಗೊತ್ತಾ?

ಜಸ್ಟ್ 23 ವರ್ಷದ ಹುಡುಗ ಈ 93 ವರ್ಷದ ಮದುಕಿಯನ್ನ ಮದುವೆಯಾದ. ಯಾಕಂತ ಗೊತ್ತಾದ್ರೆ ನಿಜವಾಗ್ಲೂ ಶಾಕ್ ಆಗ್ತೀರಾ..ಮದುವೆ ಎಂಬುದು ಸ್ವರ್ಗದಲ್ಲಿ ನಿಶ್ಚಯ ಆಗಿರುತ್ತೆ ಅಂತಾರೆ. ಯಾರಿಗೆ ಯಾರು ಹಣೆ ಬರಹದಲ್ಲಿ ಬರೆದಿರುತ್ತಾರೋ ಅವರೇ ಸಂಗಾತಿಗಳಾಗೋದು. ಅಂದ ಹಾಗೇ ಜಗತ್ತಿನಲ್ಲಿ ತಮಗಿಷ್ಟ ಆದವರನ್ನ ಯಾರು ಯಾರನ್ನ ಬೇಕಾದರು ಮದುವೆ ಆಗಬಹುದು‌. ಅದಕ್ಕೆ ಯಾವುದೇ ಅಡ್ಡಿಯಿಲ್ಲ. ಆದರೆ ಕೆಲವೊಮ್ಮೆ ಸಮಾಜದ ಕೆಲವು ಟೀಕೆಗಳಿಗೆ ಒಳಗಾಗಬೇಕಾಗುತ್ತದೆ. ಅಂತೆಯೇ ಇದೀಗ ಇಲ್ಲೊಂದು ಮದುವೆ ಈಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ಹೌದು ಕೇವಲ ಇಪ್ಪತ್ಮೂರು ವರ್ಷದ ಯುವಕನೋರ್ವ ಬರೋಬ್ಬರಿ ತೊಂಭತ್ತೊಂದು ವರ್ಷದ ಮುದುಕಿಯನ್ನ ಮದುವೆ ಆಗಿದ್ದಾನೆ. ಇದು ನಂಬಲು ಸಾಧ್ಯವಾಗದಿದ್ದರು ಕೂಡ ಸತ್ಯ. ದಕ್ಷಿಣ ಅಮೆರಿಕಾದ ಅರ್ಜೆಂಟೈನಾದಲ್ಲಿ ಇಪ್ಪತ್ಮೂರು ವರ್ಷದ ಅನಾಥ ಹುಡುಗನಿಗೆ ಒಬ್ಬ ಮದುಕಿ ಅವನ ವಿಧ್ಯಾಭ್ಯಾಸಕ್ಕೆ ಆರ್ಥಿಕ ನೆರವು ನೀಡುತ್ತಿದ್ದಳು.

ಹೀಗೆ ಈ ಯುವಕ ಕೂಡ ಅಜ್ಜಿಯೊಂದಿಗೆ ಉತ್ತಮ ಸೌಹಾರ್ದಯುತ ಭಾಂಧವ್ಯ ಹೊಂದಿರುತ್ತಾನೆ. ಕಾಲ ಕ್ರಮೇಣ ಈ ಅಜ್ಜಿಗೆ ವಯೋ ಸಹಜ ಸಮಸ್ಯೆಗಳು ಕಾಡಲಾರಂಭಿಸುತ್ತವೆ. ಬಳಿಕ ಈ ಯುವಕನಿಗೆ ಏನು ಅನಿಸಿತು ಏನೋ ಅಜ್ಜಿಯನ್ನ ಮದುವೆ ಆಗುವ ನಿರ್ಧಾರ ಮಾಡುತ್ತಾನೆ‌. ಈ ಹುಡುಗನ ನಿರ್ಧಾರಕ್ಕೆ ಪ್ರಸ್ತಾಪಕ್ಕೆ ಅಜ್ಜಿಯೂ ಕೂಡ ಸಮ್ಮತಿ ಸೂಚಿಸುತ್ತಾಳೆ. ಬಳಿಕ ಒಂದು ದಿನ ಇಬ್ಬರು ಮೊಬೈಲ್ ನಲ್ಲಿಯೇ ಆನ್ಲೈನ್ ವೀಡಿಯೋ ಕಾಲ್ ನಲ್ಲಿ ಉಂಗುರ ಬದಲಾಯಿಸಿಕೊಳ್ಳುವ ಮೂಲಕ ಮದುವೆ ಕೂಡ ಆಗುತ್ತಾರೆ. ಈ ಯುವಕ ತಮ್ಮಿಬ್ಬರ ಫೋಟೋವನ್ನು ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿ ಇಂದಿನಿಂದ ನಮ್ಮಿಬ್ಬರ ಹನಿಮೂನ್ ಶುರು ಎಂದು ಬರೆದುಕೊಂಡಿರುತ್ತಾನೆ. ದುರಂತ ಅಂದರೆ ಈ ಮದುವೆಯಾದ ಈ ಮೂರೇ ದಿನದಲ್ಲಿ ಅಜ್ಜಿ ಸಾವನ್ನಪ್ಪುತ್ತಾಳೆ.

ಅಜ್ಜಿ ಮತ್ತು ಈ ಯುವಕನ ಮದುವೆಯ ಬಗ್ಗೆ ‌ಭಾರಿ ಸುದ್ದಿಯಾಗಿದ್ದ ಕಾರಣ ಅಜ್ಜಿ ದಿಢೀರ್ ನಿಧನರಾದ ಸುದ್ದಿ ತಿಳಿದು ಮಾಧ್ಯಮದವರೆಲ್ಲರು ಯುವಕನಿಗೆ ಪ್ರಶ್ನೆಗಳ ಸುರಿಮಳೆಗಯ್ಯುತ್ತಾರೆ. ವಯಸ್ಸಾಗಿದ್ದ ಈ ಅಜ್ಜಿಯನ್ನ ನೀವು ಯಾಕೆ ಮದುವೆ ಆಗಿದ್ದು, ಅವರ ಬಳಿ ಇದ್ದ ಆಸ್ತಿ ನೋಡಿನಾ, ಏನು ಕಾರಣ ಎಂದು ಮೀಡಿಯಾದವರು ಪ್ರಶ್ನೆ ಮೇಲೆ ಪ್ರಶ್ನೆ ಕೇಳುತ್ತಾರೆ. ಶ್ರೀಮಂತೆ ಆಗಿದ್ದ ಅಜ್ಜಿಯನ್ನ ಈ ಸುಂದರ ಯುವಕ ಮದುವೆ ಆಗಿದ್ದ ಈ ಪ್ರಶ್ನೆಗೆ ಕಾರಣವಾಗಿತ್ತು. ಅದರಂತೆ ಮೀಡಿಯಾದವರು ಕೇಳಿದ ಪ್ರಶ್ನೆಗೆ ಯುವಕ ನನಗೆ ಅಜ್ಜಿ ಆರ್ಥಿಕವಾಗಿ ತುಂಬಾ ಸಹಾಯ ಮಾಡಿದ್ದರು. ನನಗೂ ಯಾರಿರಲಿಲ್ಲ. ಅಜ್ಜಿಗೂ ಕೂಡ ಯಾರು ಇರಲಿಲ್ಲ‌. ಇಬ್ಬರಿಗೂ ಆಸರೆ ಆಗುತ್ತದೆ ಎಂದು ಈ ಮದುವೆಯ ನಿರ್ಧಾರ ಮಾಡಿದೆ ಎಂದು ಉತ್ತರ ನೀಡುತ್ತಾನೆ. ಆದರೆ ಇಂದಿಗೂ ಕೂಡ ಅಲ್ಲಿನ ಜನರಿಗೆ ಈ ಯುವಕ ಅಜ್ಜಿಯನ್ನ ಮದುವೆ ಆಗಿದ್ದು ಕೇವಲ ಹಣಕ್ಕಾಗಿ ಎಂದೇ ಅನುಮಾನ ಪಡುತ್ತಿದ್ದಾರೆ. ಇದೀಗ ಆ ಅಜ್ಜಿಯ ಸಂಪೂರ್ಣ ಆಸ್ತಿಗೆ ಆ ಯುವಕನೇ ಉತ್ತರಾಧಿಕಾರಿಯಾಗಿದ್ದಾನೆ.

Leave a Reply

%d bloggers like this: