ಜೊತೆ ಜೊತೆಯಲಿ ಧಾರಾವಾಹಿಗೆ ಹರಿಶ್ ರಾಜ್ ಅವರು ಎಂಟ್ರಿ, ಆದರೆ ಅನಿರುದ್ದ್ ಅವರ ಪಾತ್ರಕ್ಕೆ ಅಲ್ಲ

ಕನ್ನಡ ಕಿರುತೆರೆಯ ಪ್ರಸಿದ್ದ ವಾಹಿನಿ ಜೀ಼ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ಜನ ಮೆಚ್ಚುಗೆಯ ಜೊತೆ ಜೊತೆಯಲಿ ಧಾರಾವಾಹಿಯ ಆರ್ಯ ವರ್ಧನ್ ಪಾತ್ರದಲ್ಲಿ ನಟಿಸುತ್ತಿದ್ದ ನಟ ಅನಿರುದ್ದ್ ಅವರು ನಿರ್ದೇಶಕರ ನಡುವಿನ ವೈ ಮನಸ್ಸಿನಿಂದಾಗಿ ಹೊರ ಬಂದಿದ್ದಾರೆ. ಇದರಿಂದ ಇನ್ಮುಂದೆ ಆರ್ಯವರ್ಧನ್ ಪಾತ್ರದಲ್ಲಿ ಯಾರು ಕಾಣಿಸಿಕೊಳ್ಳುತ್ತಾರೆ ಎಂಬುದು ಎಲ್ಲರಿಗೂ ಕುತೂಹಲ ಮೂಡಿತು. ಇದೀಗ ಈ ಕುತೂಹಲಕ್ಕೆ ತೆರೆ ಬೀಳಲಿದೆ ಎಂದು ಹೇಳಲಾಗುತ್ತಿದೆ. ಇದರ ನಡವೆ ಜೊತೆ ಜೊತೆಯಲಿ ಧಾರಾವಾಹಿಗೆ ಮತ್ತೊಬ್ಬ ನಟನ ಎಂಟ್ರಿ ಆಗಿದೆ. ಇತ್ತೀಚೆಗೆ ಜೊತೆ ಜೊತೆಯಲಿ ಧಾರಾವಾಹಿಯ ಹೊಸದೊಂದು ಪ್ರೋಮೋ ರಿಲೀಸ್ ಆಗಿದೆ. ಈ ಪ್ರೋಮೋದಲ್ಲಿ ನಟ ಹರೀಶ್ ರಾಜ್ ಅವರು ಕಾಣಿಸಿಕೊಂಡಿದ್ದಾರೆ.

ಈ ಪ್ರೋಮೋದಲ್ಲಿ ಹರೀಶ್ ರಾಜ್ ಅವರನ್ನ ಕಂಡಾಕ್ಷಣ ಎಲ್ಲರೂ ಆರ್ಯ ವರ್ಧನ್ ಪಾತ್ರದಲ್ಲಿ ಹರೀಶ್ ರಾಜ್ ಅವರು ಕಾಣಿಸಿಕೊಳ್ಳಲಿದ್ದಾರೆ ಅಂತಾನೇ ತಿಳ್ಕೊಂಡಿದ್ರು. ಆದ್ರೇ ನಿರ್ದೇಶಕರು ಹೊಸ ಟ್ವಿಸ್ಟ್ ಕೊಟ್ಟಿದ್ದಾರೆ. ಹರೀಶ್ ರಾಜ್ ಅವರು ಆರ್ಯವರ್ಧನ್ ತಮ್ಮ ವಿಶ್ವಾಸ್ ದೇಸಾಯಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪ್ರೋಮೋದಲ್ಲಿ ಆರ್ಯ ವರ್ಧನ್ ಅವರ ನಿಜವಾದ ತಾಯಿ ಪ್ರಿಯದರ್ಶಿನಿ ಅವರ ಬಳಿ ವಿಶ್ವಾಸ್ ದೇಸಾಯಿ ಸಾಲದ ಮೇಲೆ ಸಾಲ ಮಾಡಿ ನನ್ನ ಕಂಪನಿ ಮುಳುಗೋಗಿದೆ. ಸಾಲ ಇರೋದು 700 ಕೋಟಿ ಅಮ್ಮ ಅಂತ ಹೇಳ್ತಾನೆ. ಅದಕ್ಕೆ ಕಿರಿಮಗ ವಿಶ್ವಾಸ್ ದೇಸಾಯಿ ಹತ್ರ ಎಲ್ಲ ಕೋಟಿಗಳನ್ನ ಮೀರಿಸುವಂತಹ ನಿನ್ನನ್ನ ಬದುಕಿಸುವಂತ ಒಬ್ಬ ಇದಾನೆ ಎಂದು ತಾಯಿ ಪ್ರಿಯದರ್ಶನಿ ಹೇಳ್ತಾರೆ.

ಈ ಪ್ರೋಮೋ ನೋಡಿದ ಮೇಲೆ ಆರ್ಯ ವರ್ಧನ್ಗೆ ಒಬ್ಬ ತಮ್ಮ ಕೂಡ ಇರ್ತಾನೆ ಅನ್ನೋದು ಗೊತ್ತಾಗುತ್ತೆ. ಕಂಪನಿ ನಷ್ಟವಾಗಿ ಇದೀಗ ಅಮ್ಮನ ಬಳಿ ಬಂದು ತನ್ನ ಕಷ್ಟವನ್ನ ವಿಶ್ವಾಸ್ ದೇಸಾಯಿ ಹೇಳ್ಕೊಂಡಿದ್ದಾನೆ. ಇನ್ನು ಆರ್ಯವರ್ಧನ್ ಪಾತ್ರದಲ್ಲಿ ಯಾವ ನಟ ಕಾಣಿಸಿಕೊಳ್ಳುತ್ತಾರೆ ಎಂಬ ಪ್ರಶ್ನೆಗೆ ಇನ್ನು ಕೂಡ ಉತ್ತರ ಸಿಕ್ಕಿಲ್ಲ. ಈಗಗಾಲೇ ನಿರ್ದೇಶಕ ಆರೂರು ಜಗದೀಶ್ ಅವರು ಆರ್ಯವರ್ಧನ್ ಪಾತ್ರ ಮಾಡಲು ಖ್ಯಾತ ನಿರ್ದೇಶಕ ಅನೂಪ್ ಭಂಡಾರಿ ಅವರನ್ನ ಭೇಟಿ ಮಾಡಿದ್ದರಂತೆ. ಆದರೆ ನಿರ್ದೇಶಕ ಅನೂಪ್ ಭಂಡಾರಿ ಅವರು ಈ ಆಫರ್ ಅನ್ನ ತಿರಸ್ಕಾರ ಮಾಡಿದ್ದಾರೆ. ಇದೀಗ ಧಾರಾವಾಹಿ ತಂಡ ಆರ್ಯವರ್ಧನ್ ಪಾತ್ರಕ್ಕೆ ಬೇರೆ ಕಲಾವಿದರನ್ನ ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿದೆ. ನಟ ಅನಿರುದ್ದ್ ಅವರ ಒಂದಷ್ಟು ಅಭಿಮಾನಿಗಳು ಆರ್ಯವರ್ಧನ್ ಪಾತ್ರವನ್ನ ಅನಿರುದ್ದ್ ಅವರೇ ಮಾಡಬೇಕು ಎಂದು ಒತ್ತಾಯಿಸುತ್ತಿದ್ದಾರೆ.

Leave a Reply

%d bloggers like this: