‘ಜೊತೆ ಜೊತೆಯಲಿ’ ಆರ್ಯವರ್ಧನ್ ಪಾತ್ರಕ್ಕೆ ಕನ್ನಡದ ಖ್ಯಾತ ನಿರ್ದೇಶಕನಿಗೆ ಆಫರ್

ಕನ್ನಡ ಕಿರುತೆರೆಯ ಪ್ರಸಿದ್ದ ಜೀ಼ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜೊತೆ ಜೊತೆ ಧಾರಾವಾಹಿಯಿಂದ ನಟ ಅನಿರುದ್ದ್ ಅವರನ್ನ ಕೈ ಬಿಡಲಾಗಿದೆ. ಹೌದು ನಿರ್ಮಾಪಕ ಕಮ್ ನಿರ್ದೇಶಕ ಆರೂರು ಜಗದೀಶ್ ಮತ್ತು ಅನಿರುದ್ದ್ ನಡುವೆ ಕೆಲವು ಮನಸ್ತಾಪಗಳು ಏರ್ಪಟ್ಟು ಇಬ್ಬರು ಪರಸ್ಪರ ಆರೋಪ ಪ್ರತ್ಯಾರೋಪ ಮಾಡುತ್ತಿದ್ದಾರೆ. ನಟ ಅನಿರುದ್ದ್ ಅವರು ಧಾರಾವಾಹಿ ಚಿತ್ರೀಕರಣ ಸಂಧರ್ಭದಲ್ಲಿ ಅನೇಕಾನೇಕ ತೊಂದರೆ ಸಮಸ್ಯೆಗಳನ್ನ ನೀಡುತ್ತಾ, ಧಾರಾವಾಹಿ ತಂಡದಲ್ಲಿ ವಿಷಮ ಸ್ಥಿತಿಯನ್ನ ನಿರ್ಮಾಣ ಮಾಡುತ್ತಿದ್ದರು. ಅನಗತ್ಯವಾಗಿ ವಿಪರೀತ ಖರ್ಚು ಮಾಡಿಸಿದ್ದಲ್ಲದೆ, ನಾವು ಹೇಳಿದ ಕೆಲಸದಲ್ಲಿ ಬದಲಾವಣೆ ತಂದು ಇಡೀ ಧಾರಾವಾಹಿಯ ಟಿ.ಆರ್.ಪಿ ಕಡಿಮೆ ಆಗಲು ಕಾರಣಕರ್ತರಾಗಿದ್ದಾರೆ.

ಅವರ ವರ್ತನೆಯಿಂದ ನನಗೆ ತುಂಬಾ ನಷ್ಟವಾಗಿದೆ ಎಂದು ಒಂದಷ್ಟು ಆರೋಪಗಳ ಸುರಿಮಳೆಗೈದಿರುವ ನಿರ್ದೇಶಕ ಆರೂರು ಜಗದೀಶ್ ಅವರು ಕಿರುತೆರೆ ನಿರ್ಮಾಪಕ ಸಂಘಕ್ಕೆ ದೂರು ನೀಡಿ ತಮಗಾದ ತೊಂದರೆಯನ್ನ ಹೇಳಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ನಿರ್ಮಾಪಕ ಸಂಘದಿಂದ ನಟ ಅನಿರುದ್ದ್ ಅವರನ್ನ ಎರಡು ವರ್ಷಗಳ ಕಾಲ ಕಿರುತೆರೆಯಿಂದ ಹೊರಗಡೆ ಇಡಲಾಗುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಅನಿರುದ್ದ್ ಅವರ ಆರ್ಯವರ್ಧನ್ ಅವರ ಪಾತ್ರಕ್ಕೆ ಈಗಾಗಲೇ ಬೇರೆ ನಟರನ್ನ ಕರೆತರುವ ಪ್ರಕ್ರಿಯೆ ನಡೆಯುತ್ತಿದೆ. ಅದರಂತೆ ಇತ್ತೀಚೆಗೆ ಜೊತೆ ಜೊತೆಯಲಿ ಧಾರಾವಾಹಿ ತಂಡ ರಂಗಿ ತರಂಗ, ವಿಕ್ರಾಂತ್ ರೋಣ ಚಿತ್ರದ ನಿರ್ದೇಶಕ ಅನೂಪ್ ಭಂಡಾರಿ ಅವರನ್ನ ಆರ್ಯವರ್ಧನ್ ಪಾತ್ರ ಮಾಡುವುದಕ್ಕಾಗಿ ಕರೆ ಮಾಡಿ ಮಾತಾಡಿದ್ದರಂತೆ.

ಆರ್ಯವರ್ಧನ್ ಪಾತ್ರ ಮತ್ತು ಅನೂಪ್ ಭಂಡಾರಿ ಅವರಿಗೆ ಸಾಮ್ಯತೆ ಇರುವ ಕಾರಣ ಧಾರಾವಾಹಿ ತಂಡ ಅನೂಪ್ ಭಂಡಾರಿ ಅವರನ್ನ ಸಂಪರ್ಕ ಮಾಡಿತ್ತಂತೆ. ಈ ವಿಚಾರ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಇದು ಭಾರಿ ವೈರಲ್ ಆಗಿತ್ತು. ಈ ಬಗ್ಗೆ ನಿರ್ದೇಶಕ ಅನೂಪ್ ಭಂಡಾರಿ ಅವರು ಹೌದು ನನಗೆ ಜೊತೆ ಜೊತೆಯಲಿ ಧಾರಾವಾಹಿ ತಂಡದಿಂದ ಆಫರ್ ಬಂದಿತ್ತು. ಆದರೆ ನಾನು ಈ ಆಫರ್ ಅನ್ನ ತಿರಸ್ಕಾರ ಮಾಡಿದ್ದೇನೆ. ವಿಕ್ರಾಂತ್ ರೋಣ ಚಿತ್ರದ ನಂತರ ನಾನು ಬೇರೆ ಚಿತ್ರದ ಸ್ಕ್ರಿಪ್ಟಿಂಗ್ ಕೆಲಸದಲ್ಲಿ ಬಿಝಿ಼ ಆಗಿದ್ದೇನೆ ಎಂದು ತಿಳಿಸಿದ್ದಾರೆ. ಒಟ್ಟಾರೆಯಾಗಿ ನಾಡಿನಾದ್ಯಂತ ಜೊತೆ ಜೊತೆಯಲಿ ಧಾರಾವಾಹಿ ಅಪಾರ ಜನಪ್ರಿಯತೆ ಪಡೆದುಕೊಂಡು ಯಶಸ್ವಿಯಾಗಿ ಸಾಗುತ್ತಿತ್ತು. ಇದೀಗ ಈ ವಿವಾದದಿಂದಾಗಿ ಮುಂದಿನ ದಿನಗಳಲ್ಲಿ ಯಾವ ರೀತಿ ಮೂಡಿ ಬರಲಿದೆ ಅನ್ನೋದನ್ನ ಕಾದು ನೋಡಬೇಕಾಗಿದೆ.