ಜೋಡಿ ನಂಬರ್1 ಶೋ ಗೆದ್ದ ಅಭಿಜಿತ್ ದಂಪತಿ, ಅಭಿಜಿತ್ ಅವರಿಗೆ ಸಿಕ್ಕ ಬಹುಮಾನದ ಮೊತ್ತ ಎಷ್ಟು

ಕನ್ನಡ ಕಿರುತೆರೆಯ ಪ್ರಸಿದ್ದ ವಾಹಿನಿಗಳಲ್ಲಿ ಒಂದಾಗಿರುವ ಜೀ಼ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜೋಡಿ ನಂಬರ್ 01 ಕಾರ್ಯಕ್ರಮಕ್ಕೆ ತೆರೆ ಬಿದ್ದಿದೆ. ವಾರಾಂತ್ಯ ಶನಿವಾರ ಮತ್ತು ಭಾನುವಾರ ಸಂಜೆ 6.30ಕ್ಕೆ ಪ್ರಸಾರವಾಗುತ್ತಿದ್ದ ಜೋಡಿ ನಂಬರ್ ಒನ್ ಕಾರ್ಯಕ್ರಮ ಸತಿ ಪತಿಯರ ನಡುವಿನ ಸಂಬಂಧವನ್ನ ಮತ್ತಷ್ಟು ಗಟ್ಟಿಗೊಳಿಸುವಂತಹ ಪ್ರಯತ್ನ ಮಾಡುವ ಉದ್ದೇಶವನ್ನೊಂದಿತ್ತು. ಈ ಜೋಡಿ ನಂಬರ್ ಒನ್ ಕಾರ್ಯಕ್ರಮದಲ್ಲಿ ನಟ ನೆನಪಿರಲಿ ಪ್ರೇಮ್ ಮತ್ತು ಖ್ಯಾತ ನಟಿ ಮಾಳವಿಕಾ ಅವಿನಾಶ್ ನಿರ್ಣಾಯಕರಾಗಿದ್ದರು. ಈ ಕಾರ್ಯಕ್ರಮದಲ್ಲಿ ಸ್ಪರ್ಧಿಗಳಾಗಿ ಆದರ್ಶ ದಂಪತಿಗಳಾದ ಪ್ರೊ.ಕೃಷ್ಣೆಗೌಡ ದಂಪತಿಗಳು, ನಟ ಮಿತ್ರ ದಂಪತಿಗಳು, ಕಿರಿಕ್ ಕೀರ್ತಿ ದಂಪತಿಗಳು ಸೇರಿದಂತೆ ಒಂದಷ್ಟು ಹೆಸರಾಂತ ಜೋಡಿಗಳು ಭಾಗವಹಿಸಿದ್ದರು. ಅದರಂತೆ ಈ ಜೋಡಿ ನಂಬರ್ ಒನ್ ಕಾರ್ಯಕ್ರಮ ನಾಡಿನಾದ್ಯಂತ ಜನಪ್ರಿಯತೆ ಗಳಿಸಿ ಇದೀಗ ಯಶಸ್ವಿಯಾಗಿ ಅಂತಿಮಗೊಂಡಿದೆ.

ಈ ಜೋಡಿ ನಂಬರ್ ಒನ್ ಕಾರ್ಯಕ್ರಮದಲ್ಲಿ ಆದರ್ಶ ದಂಪತಿಗಳಾಗಿ ಖ್ಯಾತ ನಟ ಅಭಿಜಿತ್ ಮತ್ತು ರೋಹಿಣಿ ದಂಪತಿಗಳು ಜಯಶೀಲರಾಗಿದ್ದಾರೆ. ಜಯಶೀಲರಾದ ಇವರಿಗೆ ಐದು ಲಕ್ಷ ರೂಗಳನ್ನ ಬಹುಮಾನದ ಮೊತ್ತವಾಗಿ ನೀಡಲಾಗಿದೆ. ಅದೇ ರೀತಿಯಾಗಿ ಮೊದಲ ರನ್ನರ್ ಅಪ್ ಆದ ಕಿರಿಕ್ ಕೀರ್ತಿ ಮತ್ತು ಅರ್ಪಿತ ದಂಪತಿಗಳಿಗೆ ಮೂರು ಲಕ್ಷ ರೂಗಳ ಬಹುಮಾನದ ಮೊತ್ತ ನೀಡಲಾಗಿದ್ದು, ಮೂರನೇ ಸ್ಥಾನ ಪಡೆದು ಎರಡನೇ ರನ್ನರ್ ಅಪ್ ಆದ ಹಾಸ್ಯ ಕಲಾವಿದ ಸಂತೋಷ್ ಮತ್ತು ಮಾನಸ ದಂಪತಿಗಳಿಗೆ ಒಂದು ಲಕ್ಷ ರೂಗಳ ಬಹುಮಾನದ ಮೊತ್ತ ನೀಡಲಾಗಿದೆ. ಇನ್ನು ಈ ಜೋಡಿ ನಂಬರ್ ಒನ್ ಗ್ರ್ಯಾಂಡ್ ಫಿನಾಲೆಗೆ ಅತಿಥಿಯಾಗಿ ಬಂದಿದ್ದ ದಿಗಂತ್ ಅವರು ಆದರ್ಶ ದಂಪತಿಗಳಾಗಿ ಜಯಶೀಲರಾದ ನಟ ಅಭಿಜಿತ್ ಮತ್ತು ರೋಹಿಣಿ ದಂಪತಿಗಳಿಗೆ ನೀವು ನಿಮ್ಮ ಬದುಕಿನ ರೀತಿ ನೀತಿ ನಡೆಗಳು ನಮಗೆ ಮಾದರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಇನ್ನು ಒಟ್ಟಾರೆಯಾಗಿ ಒಂದಾದ ಒಂದರ ನಂತರ ಕನ್ನಡ ಕಿರುತೆರೆಯ ಅನೇಕ ರಿಯಾಲಿಟಿ ಶೋಗಳು ಮುಗಿಯುತ್ತಾ ಬಂದಿವೆ. ಅದರಂತೆ ಜೀ಼ ಕನ್ನಡದಲ್ಲಿ ಇದೀಗ ಜೋಡಿ ನಂಬರ್ ಒನ್ ಕಾರ್ಯಕ್ರಮ ಕೂಡ ಅಂತ್ಯ ಕಂಡಿದೆ.

Leave a Reply

%d bloggers like this: