ಜೀವನವು ನಿರಾಶೆಯಿಂದ ತುಂಬಿದ್ದರೆ ದೇವರು ನಿಮಗಾಗಿ ಯಾರನ್ನಾದರೂ ನೇಮಿಸುತ್ತಾನೆ, ಪತ್ನಿಯ ಬಗ್ಗೆ ಪೋಸ್ಟ್ ಹಂಚಿಕೊಂಡ ನಿರ್ಮಾಪಕ

ಎಲ್ರೂ ಮಹಾಲಕ್ಷ್ಮಿ ಅಂತಹ ಹೆಂಡತಿ ಬೇಕು ಅಂತಾರೆ, ಆದರೆ ನನಗೆ ಮಹಾಲಕ್ಷ್ಮಿನೇ ಹೆಂಡತಿಯಾಗಿ ಸಿಕ್ಕಿದ್ದಾರೆ ಎಂದು ತಮ್ಮ ರವೀಂದರ್ ಚಂದ್ರಶೇಖರ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹೊಸದೊಂದು ಪೋಸ್ಟ್ ಮಾಡಿದ್ದಾರೆ. ಇತ್ತೀಚಗೆ ಭಾರಿ ಸುದ್ದಿಯಾದ ಸಿನಿಮಾ ಸೆಲೆಬ್ರಿಟೀಸ್ ಅಂದ್ರೆ ಅದು ತಮಿಳಿನ ನಿರ್ಮಾಪಕ ರವೀಂದರ್ ಚಂದ್ರಶೇಖರ್ ಮತ್ತು ನಿರೂಪಕಿ ಕಮ್ ನಟಿ ಮಹಾಲಕ್ಷ್ಮಿ. ಯಾಕಂದ್ರೆ ಇವರಿಬ್ಬರು ಮದುವೆಯಾಗಿ ದಾಂಪತ್ಯ ಜೀವನಕ್ಕೆ ಹೆಜ್ಜೆ ಇಟ್ಟಿದ್ದಾರೆ. ಈ ಜೋಡಿ ಕಂಡು ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಕೆಲವು ನೆಟ್ಟಿಗರು ಶುಭ ಹಾರೈಸಿದ್ರೆ, ಇನ್ನೂ ಕೆಲವರು ಅಪಹಾಸ್ಯ ಮಾಡಿದ್ದಾರೆ. ಅದೂ ಕೂಡ ಯಾಕಂದ್ರೆ ತಮಿಳು ಚಿತ್ರರಂಗದ ನಿರ್ಮಾಪಕ ರವೀಂದರ್ ಚಂದ್ರಶೇಖರ್ ಅವರಿಗೆ ಇದು ಎರಡನೇ ಮದುವೆ‌.

ನಟಿ ಮಹಾಲಕ್ಷ್ಮಿ ಅವರಿಗೂ ಸಹ ಇದು ಎರಡನೇ ಮದುವೆ. ಮಹಾಲಕ್ಷ್ಮಿ ಅವರಿಗೆ ಈಗಾಗಲೇ ಎಂಟು ವರ್ಷದ ಮಗ ಕೂಡ ಇದ್ದಾನಂತೆ. ಅದಲ್ಲದೇ ಇವರಿಬ್ಬರ ನಡುವಿನ ವಯಸ್ಸಿನ ಅಂತರ ತುಂಬಾ ವ್ಯತ್ಯಾಸವಿದೆ. ಸೌಂದರ್ಯವತಿ ಆಗಿರೋ ಮಹಾಲಕ್ಷ್ಮಿ ದಡೂತಿ ದೇಹ ಹೊಂದಿರೋ ನಿರ್ಮಾಪಕ ರವೀಂದರ್ ಅವರನ್ನ ಹಣವಂತರು ಎಂಬ ಕಾರಣಕ್ಕೆ ಮದುವೆಯಾದರು ಎಂಬುದು ಹಲವರ ಅನಿಸಿಕೆ ಅಭಿಪ್ರಾಯ. ಇದನ್ನ ಹೊರತು ಪಡಿಸಿ ಇದೀಗ ದಂಪತಿ ಈಗ ಹೊಸ ಬಾಳಿಗೆ ಹೆಜ್ಜೆ ಸಂತೋಷವಾಗಿದ್ದಾರೆ. ಅದಲ್ಲದೆ ನಿರ್ಮಾಪಕ ರವೀಂದರ್ ಅವರು ಇತ್ತೀಚೆಗೆ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ತಮ್ಮ ಮದುವೆಯ ಫೋಟೋಗಳನ್ನ ಶೇರ್ ಮಾಡಿಕೊಂಡಿದ್ದರು.

ಅದೇ ರೀತಿಯಾಗಿ ಇದೀಗ ಮತ್ತೊಂದು ಫೋಟೋ ಶೇರ್ ಮಾಡಿಕೊಂಡು ಮತ್ತೊಂದು ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಅದೇನಪ್ಪಾ ಅಂದರೆ ತಮ್ಮ ಇನ್ಸ್ಟಾ ಗ್ರಾಮ್ ಖಾತೆಯಲ್ಲಿ ಬದುಕಲ್ಲಿ ನಿರಾಸೆಯಾಗಿದ್ದ ನನಗೆ ದೇವರು ನಿನ್ನನ್ನು ಕಳುಹಿಸಿದ್ದಾನೆ. ಎಲ್ಲರೂ ಲಕ್ಷ್ಮಿಯಂತಹ ಹೆಂಡತಿ ಬೇಕು ಅಂತ ಕೇಳ್ತಾರೆ. ಆದ್ರೇ ನನಗೆ ಮಹಾಲಕ್ಷ್ಮಿಯನ್ನೇ ಕರುಣಿಸಿದ್ದಾನೆ ಎಂದು ರವೀಂದರ್ ಅವರು ತಮ್ಮ ಪತ್ನಿ ಮಹಾಲಕ್ಷ್ಮಿ ಅವರೊಟ್ಟಿಗೆ ಇರೋ ಫೋಟೋವನ್ನ ಶೇರ್ ಮಾಡಿಕೊಂಡಿದ್ದಾರೆ. ಇನ್ನು ಮಹಾಲಕ್ಷ್ಮಿ ಅವರು ಕೂಡ ತಮ್ಮಿಬ್ಬರ ಫೋಟೋಗೆ ಈ ಚಿತ್ರ ಮತ್ತು ಪ್ರೀತಿ ಪರಿಪೂರ್ಣವಾಗಿರಬೇಕಾಗಿಲ್ಲ ನಿಜವಾಗಿರಬೇಕು ಎಂಬ ಟೈಟಲ್ ನೀಡಿದ್ದಾರೆ.

Leave a Reply

%d bloggers like this: