ಜಪಾನ್ ದೇಶದಲ್ಲಿ ಬಿಡುಗಡೆ ಆದ ರಾಜಮೌಳಿ ಅವರ RRR ಚಿತ್ರ, ಮೊದಲ ದಿನದ ಗಳಿಕೆ ಎಷ್ಟು

ಭಾರತೀಯ ಚಿತ್ರರಂಗದ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದ ತೆಲುಗಿನ ಆರ್.ಆರ್.ಆರ್ ಸಿನಿಮಾ ಇದೀಗ ಜಪಾನ್ ಭಾಷೆಯಲ್ಲಿಯೂ ಕೂಡ ರಿಲೀಸ್ ಆಗಿ ಜಪಾನ್ ಸಿನಿ ಪ್ರೇಕ್ಷಕರಿಗೂ ಸಹ ಭಾರಿ ಮೋಡಿ ಮಾಡುತ್ತಿದೆ. ರಾಜಮೌಳಿ ಅವರ ನಿರ್ದೇಶನದಲ್ಲಿ ಮೂಡಿಬಂದ ಈ ಮಲ್ಟಿ ಸ್ಟಾರ್ಸ್ ಬಿಗ್ ಬಜೆಟ್ ಸಿನಿಮಾ ನಿರೀಕ್ಷೆಗೂ ಮೀರಿ ಮತ್ತೆ ಸದ್ದು ಮಾಡಿದೆ. ಸೌತ್ ಸಿನಿರಂಗದ ಸೂಪರ್ ಸ್ಟಾರ್ ನಿರ್ದೇಶಕ ಎಸ್ಎಸ್ ರಾಜಮೌಳಿ ಅವರ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಥ್ರಿಬಲ್ ಆರ್ ಸಿನಿಮಾದಲ್ಲಿ ಜ್ಯೂನಿಯರ್ ಎನ್ ಟಿ ಆರ್ ಮತ್ತು ರಾಮ್ ಚರಣ್ ತೇಜಾ ಇಬ್ಬರು ಸೂಪರ್ ಸ್ಟಾರ್ ನಟರು ಅಮೋಘವಾಗಿ ನಟಿಸಿದ್ದಾರೆ. ಈ ಮಲ್ಟಿ ಸ್ಟಾರರ್ ಸಿನಿಮಾ ಆರ್.ಆರ್.ಆರ್ ಈ ಚಿತ್ರ ಭಾರತೀಯ ಪಂಚ ಭಾಷೆಗಳಲ್ಲಿ ರಿಲೀಸ್ ಆಗಿ ಥಿಯೇಟರ್ ನಲ್ಲಿ ಧೂಳೆಬ್ಬಿಸಿತ್ತು.

ಚಿತ್ರದ ಮೇಕಿಂಗ್, ದಿಗ್ಗಜ ನಟರ ಅಮೋಘ ನಟನೆ ಕಂಡು ಈ ಆರ್.ಆರ್.ಆರ್ ಸಿನಿಮಾ ಖಂಡಿತಾ ಆಸ್ಕರ್ ಅವಾರ್ಡ್ ನಲ್ಲಿಯೂ ಸಹ ಭಾಗವಹಿಸಿ ಎಲ್ಲರ ಮೆಚ್ಚುಗೆ ಪಡೆದಿತ್ತು. ಈ ಚಿತ್ರದಲ್ಲಿ ನಾಯಕಿಯಾಗಿ ಬಾಲಿವುಡ್ ಬೇಡಿಕೆಯ ಬೆಡಗಿ ಆಲಿಯಾ ಭಟ್ ನಟಿಸಿದ್ದರು. ಸ್ವಾತಂತ್ರ್ಯ ಹೋರಾಟದ ಹಿನ್ನೆಲೆಯಲ್ಲಿ ಕಾಲ್ಪನಿಕ ಕಥೆಯನ್ನ ಎಣೆದು ಕೋಮರಾಮ್ ಭೀಮ್ ಪಾತ್ರದಲ್ಲಿ ತಾರಕ್ ರಾಮ್ ಮತ್ತು ಸೀತಾರಾಮ ರಾಜು ಪಾತ್ರದಲ್ಲಿ ರಾಮ್ ಚರಣ್ ತೇಜಾ ಇಬ್ಫರು ಅಮೋಘವಾಗಿ ನಟಿಸಿದ್ದರು. ಭಾರತೀಯ ಸಿನಿ ಪ್ರೇಕ್ಷಕರು ಚಿತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ನಿರ್ದೇಶಕ ರಾಜಮೌಳಿ ಅವರ ಕೆಲಸಕ್ಕೆ ಫುಲ್ ಮಾರ್ಕ್ಸ್ ನೀಡಿದ್ರು. ಇದೀಗ ಈ ಚಿತ್ರ ಜಪಾನ್ ನಲ್ಲಿಯೂ ಸಹ ರಿಲೀಸ್ ಆಗಿದೆ.

ಇದೇ ಅಕ್ಟೋಬರ್ 21ರಂದು ಥ್ರಿಬಲ್ ಆರ್ ಸಿನಿಮಾ ಜಪಾನ್ ಭಾಷೆಯಲ್ಲಿ ರಿಲೀಸ್ ಆಗಿದೆ. ಈ ಚಿತ್ರದ ಪ್ರಚಾರಕ್ಕಾಗಿ ರಾಜಮೌಳಿ, ಜ್ಯೂ.ಎನ್.ಟಿ.ಆರ್. ರಾಮ್ ಚರಣ್ ತೇಜಾ ಜಪಾನ್ ದೇಶಕ್ಕೆ ಹೋಗಿದ್ದಾರೆ. ಜಪಾನ್ ನಲ್ಲಿ ಥ್ರಿಬಲ್ ಆರ್ ಸಿನಿಮಾ ನೋಡಿರುವ ಪ್ರೇಕ್ಷಕರು ಫಿಧಾ ಆಗಿದ್ದಾರೆ. ಈ ಚಿತ್ರದ ಮೇಕಿಂಗ್, ಕಥೆ ಮತ್ತು ನಟರ ಅಮೋಘ ನಟನೆ ನೋಡಿ ಅದರಲ್ಲಿಯೂ ಎನ್.ಟಿ.ಆರ್ ಅವರ ಪಾತ್ರ ಕಂಡು ಭಾವುಕರಾಗಿದ್ದಾರೆ. ಜಪಾನ್ ನಲ್ಲಿ ರಿಲೀಸ್ ಆಗಿರುವ ಥ್ರಿಬಲ್ ಆರ್ ಸಿನಿಮಾ ಮೊದಲ ದಿನವೇ ಒಂದು ಕೋಟಿ ಹಾಗೂ ಮೊದಲ ವಾರದಲ್ಲಿಯೇ ಬರೋಬ್ಬರಿ ಮೂರು ಕೋಟಿ ರೂಗಳನ್ನ ಕಮಾಯಿ ಮಾಡಿದೆ. ಮೊದಲ ವಾರದಲ್ಲಿಯೇ ಒಳ್ಳೆಯ ಓಪನಿಂಗ್ ಪಡೆದುಕೊಂಡಿರೋದ್ರಿಂದ ಆರ್.ಆರ್.ಆರ್ ಸಿನಿಮಾತಂಡಕ್ಕೆ ಸಖತ್ ಖುಷಿಯಾಗಿದೆ.

Leave a Reply

%d bloggers like this: