ಜನ್ಮದಿನದಂದೇ ಅದ್ಬುತ ಕೆಲಸ ಆರಂಭಿಸಿದ ಸ್ಯಾಂಡಲ್ ವುಡ್ ಖ್ಯಾತ ನಟಿ

ಸಾಮಾನ್ಯವಾಗಿ ನಮ್ಮ ಕನ್ನಡ ಚಿತ್ರರಂಗದ ಅನೇಕ ನಟ ನಟಿಯರು ತಮ್ಮ ಜನ್ಮ ದಿನವನ್ನು ತಮ್ಮ ಅಭಿಮಾನಿಗಳೊಟ್ಟಿಗೆ ಆಚರಿಸಿಕೊಳ್ಳುತ್ತಾರೆ. ಅಂದು ತಮ್ಮನ್ನು ನೋಡಲು ಬರುವ ಅಭಿಮಾನಿಗಳೊಟ್ಟಿಗೆ ಕೇಕ್ ಕಟ್ ಮಾಡಿ ಸಂಭ್ರಮಾಚರಣೆ ಮಾಡಿಕೊಳ್ಳುತ್ತಾರೆ‌. ಆದರೆ ಕೆಲವು ಸ್ಟಾರ್ ನಟಿಯರು ಮಾತ್ರ ತಮ್ಮ ಜನ್ಮದಿನವನ್ನು ಬಹಳ ಅರ್ಥ ಪೂರ್ಣವಾಗಿ ಆಚರಣೆ ಮಾಡಿಕೊಳ್ಳುತ್ತಾರೆ. ಅದೇ ರೀತಿಯಾಗಿ ಇದೀಗ ಸಿಂಪಲ್ಲಾಗಿ ಒಂದ್ ಲವ್ ಸ್ಟೋರಿ ಸಿನಿಮಾ ಖ್ಯಾತಿಯ ನಟಿ ಶ್ವೇತಾ ಶ್ರೀ ವಾತ್ಸವ್ ಕೂಡ ತಮ್ಮ ಜನ್ಮದಿನದಂದು ಒಂದೊಳ್ಳೆ ಕೆಲಸ ಆರಂಭಿಸೋ ಮೂಲಕ ಗಮನ ಸೆಳೆದಿದ್ದಾರೆ. ರಂಗಭೂಮಿ, ಕಿರುತೆರೆ ಮೂಲಕ ಬಣ್ಣದ ಲೋಕಕ್ಕೆ ಹೆಜ್ಜೆ ಇಟ್ಟ ನಟಿ ಶ್ವೇತಾ ಶ್ರೀ ವಾತ್ಸವ್ ಅವರು ಮುಖಾ ಮುಖಿ ಎಂಬ ಸಿನಿಮಾದ ಮೂಲಕ ಚಂದನವನಕ್ಕೆ ನಾಯಕಿಯಾಗಿ ಪಾದಾರ್ಪಣೆ ಮಾಡಿದರು.

ತದ ನಂತರ ಸಿಂಪಲ್ ಸುನಿ ನಿರ್ದೇಶನದಲ್ಲಿ ಮೂಡಿಬಂದ ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಎಂಬ ಚಿತ್ರದ ಮೂಲಕ ಡಬಲ್ ಮೀನಿಂಗ್ ಡೈಲಾಗ್ ಮೂಲಕ ನಟಿ ಶ್ವೇತಾ ಸಖತ್ ಫೇಮಸ್ ಆದರು. ಇದಾದ ನಂತರ ಫೇರ್ ಅಂಡ್ ಲವ್ಲೀ, ಕಿರಗೂರಿನ ಗಯ್ಯಾಳಿಗಳು ಅಂತಹ ವಿಭಿನ್ನ ಪ್ರಯೋಗಾತ್ಮಕ ಪ್ರಧಾನ ಪಾತ್ರಗಳಲ್ಲಿ ನಟಿಸಿ ಅಪಾರ ಮೆಚ್ಚುಗೆ ಪಡೆದಿದ್ದಾರೆ. ಇತ್ತೀಚೆಗೆ ತೆರೆಕಂಡ ಇವರ ನಟನೆಯ ‘ಹೋಪ್’ ಸಿನಿಮಾದಲ್ಲಿ ಕೆ.ಎ.ಎಸ್ ಅಧಿಕಾರಿ ಪಾತ್ರದಲ್ಲಿ ಮನೋಜ್ಞವಾಗಿ ನಟಿಸಿ ಎಲ್ಲರ ಸಿನಿ ಪ್ರೇಕ್ಷಕರ ಗಮನ ಸೆಳೆದಿದ್ದಾರೆ. ಸದ್ಯಕ್ಕೆ ಮದುವೆಯಾಗಿ, ಮಗಳೊಟ್ಟಿಗೆ ಕಾಲ ಕಳೆಯುತ್ತಾ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿದ್ದಾರೆ. ಅದರಂತೆ ಇತ್ತೀಚೆಗೆ ತಮ್ಮ ಜನ್ಮದಿನವನ್ನು ಸಮಾಜಮುಖಿ ಕೆಲಸದಲ್ಲಿ ತೊಡಗಿಸಿಕೊಳ್ಳುವ ಮೂಲಕ ಆಚರಿಸಿಕೊಂಡಿದ್ದಾರೆ.

ಕರ್ನಾಟಕ ಸಿಂಡಿಕೇಟ್ ಫೌಂಡೇಶನ್ ಎನ್.ಜಿ.ಓ ಸಂಸ್ಥೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಸಂಸ್ಥೆ ಕಳೆದ 15 ವರ್ಷಗಳಿಂದ ಶ್ರೀ ಸಾಯಿ ಚಾರಿಟೇಬಲ್ ಟ್ರಸ್ಟ್ ನೊಂದಿಗೆ ಕೈ ಜೋಡಿಸಿ ಸಾಮಾಜಿಕ ಸೇವೆಗಳನ್ನ ಮಾಡುತ್ತಾ ಬಂದಿದೆ. ಈ ತಂಡಕ್ಕೆ ಶ್ವೇತಾ ಅವರು ಕೂಡ ಸೇರ್ಪಡೆಯಾಗಿದ್ದು, ಅವರಿಗೆ ಖುಷಿ ಆಗಿದೆ ಅಂತೆ. ಅವರು ತುಂಬಾ ದಿನಗಳಿಂದ ಒಂದೊಳ್ಳೆ ಅವಕಾಶಕ್ಕಾಗಿ ಕಾಯುತ್ತಿದ್ದೆ. ನಾನು ಸದಾ ಸಮಾಜಕ್ಕೆ ಏನನ್ನಾದರು ನೀಡಬೇಕು ಎಂದು ಬಯಸುತ್ತೇನೆ. ಅದು ಸಣ್ಣದಾದರು ಸರಿ ದೊಡ್ಡದಾದರು ಸರಿ ಸಮಾಜದಿಂದ ಪಡೆದ ನಮಗೆ ಮತ್ತೆ ಸಮಾಜಕ್ಕೆ ಏನನ್ನಾದರು ಕೊಡುಗೆ ನೀಡಬೇಕು ಎಂಬ ಆಸೆಯಿತ್ತು. ಅದು ಈಗ ಕರ್ನಾಟಕ ಸಿಂಡಿಕೇಟ್ ಫೌಂಡೇಶನ್ ಮೂಲಕ ಸಾಧ್ಯವಾಗಿದೆ ಎಂದು ತಿಳಿಸಿದ್ದಾರೆ.

Leave a Reply

%d bloggers like this: